ಕರ್ನಾಟಕ

karnataka

By

Published : Jul 3, 2021, 7:26 PM IST

ETV Bharat / sukhibhava

ಲಾಕ್​​​ಡೌನ್​​ನಲ್ಲಿ ಲೈಂಗಿಕಾಸಕ್ತಿ ಮೇಲೆ ಪೆಟ್ಟು.. ಮಾನಸಿಕ ನೆಮ್ಮದಿಗೂ ಕೊಳ್ಳಿ.. 'ಅದಕ್ಕೆ' ಇವೇ ಕಾರಣ..

ಲಾಕ್​​ಡೌನ್​ ವೇಳೆಯಲ್ಲಿ ಅತೀ ಹೆಚ್ಚು ಸಮಯ ಮನೆಯ ಒಳಗೆ ಕಳೆಯಬೇಕಾದ ಸ್ಥಿತಿ ಬಂದೊದಗಿದ್ದರಿಂದಾಗಿ ಅನೇಕರ ಮದ್ಯಪಾನ ಸೇವನೆ ಪ್ರಮಾಣ ಹೆಚ್ಚಾಯಿತು. ಲಾಕ್​​​​ಡೌನ್ ಮೊದಲು ತೆಗೆದುಕೊಳ್ಳುತ್ತಿದ್ದ ಮದ್ಯಪಾನದ ಪ್ರಮಾಣಕ್ಕಿಂತಲೂ ಲಾಕ್​ಡೌನ್​​ನಲ್ಲಿ ಈ ಪ್ರಮಾಣ ದುಪ್ಪಟ್ಟಾಗಿತ್ತು. ಅತಿಯಾದ ಮದ್ಯಪಾನವು ಪುರುಷರಲ್ಲಿ ಲೈಂಗಿಕ ಕ್ರಿಯೆ ಮೇಲೆ ಪ್ರಭಾವ ಬೀರಲಿದೆ..

sexual-appetitie-gone-for-a-toss-during-covid-time
ಲಾಕ್​​​ಡೌನ್​​ನಲ್ಲಿ ಲೈಂಗಿಕಾಸಕ್ತಿ ಮೇಲೆ ಪೆಟ್ಟು

ಹೈದರಾಬಾದ್ :ಕೋವಿಡ್ ಸಮಯದಲ್ಲಿ ಹಲವು ದೈಹಿಕ ಸಮಸ್ಯೆಗಳು ತಲೆದೂರಿದ್ದವು. ಅದರ ಜೊತೆ ಮಾನಸಿಕವಾಗಿಯೂ ಹಲವು ಸಮಸ್ಯೆಗಳು ನಮ್ಮ ನಡವೆಯೇ ಹುಟ್ಟಿಕೊಂಡಿವೆ. ಹಣಕಾಸಿನ ನಷ್ಟ ಮಾನಸಿಕ ಅನಿಶ್ಚಿತತೆಯಿಂದಾಗಿ ಮಾನಸಿಕ ಆರೋಗ್ಯ ಹದಗೆಟ್ಟಿದೆ. ಪುರುಷರಲ್ಲಿನ ಮಾನಸಿಕ ಸಮಸ್ಯೆಗಳು, ಲೈಂಗಿಕ ಸಮಸ್ಯೆಗಳು, ಲೈಂಗಿಕತೆಯ ಬಗೆಗಿನ ಆಸಕ್ತಿಯ ಕೊರತೆಯಂತಹ ಸಮಸ್ಯೆ ಎದುರಾಗಿವೆ.

ಈ ಬಗ್ಗೆ ಆಂಡ್ರೊಕೇರ್ ಮತ್ತು ಆಂಡ್ರಾಲಜಿ ಇನ್ಸ್‌ಸ್ಟಿಟ್ಯೂಟ್​​​ನ ಆಂಡ್ರಾಲಜಿಸ್ಟ್ ಡಾ. ರಾಹುಲ್ ರೆಡ್ಡಿ ಈಟಿವಿ ಭಾರತದ ಸುಖೀಭವ ತಂಡದ ಜೊತೆ ಮಾತನಾಡಿ, ಈ ಮಾನಸಿಕ ಸಮಸ್ಯೆ ಕುರಿತು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಅವರ ಪ್ರಕಾರ ಇದ್ದಕ್ಕಿದ್ದಂತೆ ನಿಮ್ಮ ಲೈಂಗಿಕಾಸಕ್ತಿಯಲ್ಲಿ ವ್ಯತ್ಯಾಸ ಕಂಡು ಬಂದರೆ ಅಥವಾ ಆಸಕ್ತಿ ಕಡಿಮೆಯಾದರೆ ಇದು ಕೋವಿಡ್ ಪ್ರೇರಿತ ಅನಿಶ್ಚಿತತೆಯ ಪರಿಣಾಮ ಮತ್ತು ವ್ಯಕ್ತಿಗಳ ದೈಹಿಕ, ಮಾನಸಿಕ, ಲೈಂಗಿಕ ಆರೋಗ್ಯ ಮೇಲಾದ ಪರಿಣಾಮ ಎನ್ನಬಹುದು ಎಂದಿದ್ದಾರೆ.

ಲಾಕ್​​​​ಡೌನ್ ಸಮಯದಲ್ಲಿ ಪುರುಷರಲ್ಲಿ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ನಾಲ್ಕು ಪ್ರಮುಖ ಅಂಶಗಳು

  • ಒತ್ತಡ ಮತ್ತು ಆತಂಕ
  • ವ್ಯಾಯಾಮದ ಕೊರತೆ
  • ಅತಿಯಾದ ಮದ್ಯಪಾನ
  • ವಿಟಮಿನ್ ಡಿ ಕೊರತೆ

ಎಮೋಷನಲ್ ಅಭದ್ರತೆಯ ಕಾರಣದಿಂದಾಗಿ ಲಾಕ್​ಡೌನ್ ಸಮಯದಲ್ಲಿ ಪುರುಷರಲ್ಲಿ ಹೆಚ್ಚಿನ ಒತ್ತಡ ಕಂಡು ಬರುತ್ತದೆ. ಈ ಒತ್ತಡವು ಪುರುಷರ ಲೈಂಗಿಕತೆಯ ಹಾರ್ಮೋನ್ ಟೆಸ್ಟೋಸ್ಟೆರಾನ್ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಪ್ರೊಲ್ಯಾಕ್ಟಿನ್ ಮಟ್ಟ ಹೆಚ್ಚುತ್ತದೆ. ಹೆಚ್ಚಿದ ಪ್ರೊಲ್ಯಾಕ್ಟಿನ್ ಮಟ್ಟವು ಪುರುಷರಲ್ಲಿ ಲೈಂಗಿಕ ಬಯಕೆಯನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮವಾಗಿ ದಂಪತಿಯ ನಡುವಿನ ಲೈಂಗಿಕ ಕ್ರಿಯೆಯಲ್ಲಿ ಏರುಪೇರಾಗಬಹುದು ಅಥವಾ ಲೈಂಗಿಕ ಜೀವನದಲ್ಲಿ ಅಸಮಾಧಾನ ಸೃಷ್ಟಿಸಬಹುದು ಎನ್ನುತ್ತಾರೆ ವೈದ್ಯರು.

ನಮ್ಮಲ್ಲಿ ಬಹಳಷ್ಟು ಜನರು ನಿಯಮಿತ ಕೆಲಸದ ವೇಳಾಪಟ್ಟಿಗಳನ್ನು ಹೊಂದಿದ್ದರೂ ಸಹ, ಲಾಕ್‌ಡೌನ್‌ಗೆ ಮೊದಲು ವ್ಯಾಯಾಮವನ್ನು ಆ ವೇಳಾಪಟ್ಟಿಗಳ ಒಂದು ಭಾಗವನ್ನಾಗಿ ಮಾಡಿರುತ್ತಾರೆ. ಆದರೆ, ಲಾಕ್‌ಡೌನ್ ವೇಳೆ ವ್ಯಾಯಾಮ ಮಾಡದಿರುವುದು ಸಹ ಲೈಂಗಿಕಾಸಕ್ತಿಯ ಮೇಲೆ ಪ್ರಭಾವ ಬೀರಿದೆ. ಪುರುಷ ಮತ್ತು ಸ್ತ್ರೀ ಇಬ್ಬರಲ್ಲೂ ಉತ್ತಮ ದೈಹಿಕ ಕ್ರಿಯೆ ಒಟ್ಟಾರೆ ಆರೋಗ್ಯದ ಒಂದು ಭಾಗವಾಗಿದೆ. ವ್ಯಾಯಾಮ ಅಥವಾ ದೈಹಿಕ ಕೆಲಸಗಳಿಲ್ಲದೆ ಉತ್ತಮ ಆರೋಗ್ಯ ಅಸಾಧ್ಯ. ಅಲ್ಲದೆ ಮಾನಸಿಕ ಆರೋಗ್ಯಕ್ಕೂ ದೈಹಿಕ ವ್ಯಾಯಾಮ ಮುಖ್ಯ.

ಲಾಕ್​​ಡೌನ್​ ವೇಳೆಯಲ್ಲಿ ಅತೀ ಹೆಚ್ಚು ಸಮಯ ಮನೆಯ ಒಳಗೆ ಕಳೆಯಬೇಕಾದ ಸ್ಥಿತಿ ಬಂದೊದಗಿದ್ದರಿಂದಾಗಿ ಅನೇಕರ ಮದ್ಯಪಾನ ಸೇವನೆ ಪ್ರಮಾಣ ಹೆಚ್ಚಾಯಿತು. ಲಾಕ್​​​​ಡೌನ್ ಮೊದಲು ತೆಗೆದುಕೊಳ್ಳುತ್ತಿದ್ದ ಮದ್ಯಪಾನದ ಪ್ರಮಾಣಕ್ಕಿಂತಲೂ ಲಾಕ್​ಡೌನ್​​ನಲ್ಲಿ ಈ ಪ್ರಮಾಣ ದುಪ್ಪಟ್ಟಾಗಿತ್ತು. ಅತಿಯಾದ ಮದ್ಯಪಾನವು ಪುರುಷರಲ್ಲಿ ಲೈಂಗಿಕ ಕ್ರಿಯೆ ಮೇಲೆ ಪ್ರಭಾವ ಬೀರಲಿದೆ.

ಲಾಕ್​​ಡೌನ್ ಸಮಯದಲ್ಲಿ ಸ್ತ್ರೀ-ಪುರುಷರ ನಡುವಿನ ಲೈಂಗಿಕಾಸಕ್ತಿ ಕಡಿಮೆಯಾಗಲು ಮುಖ್ಯ ಕಾರಣವೆಂದರೆ ಅದು ವಿಟಮಿನ್ ಡಿ ಕೊರತೆ. ಲಾಕ್​ಡೌನ್​ನಿಂದಾಗಿ ಮನೆಯಲ್ಲಿಯೇ ಕಾಲ ಕಳೆಯುವಂತಾಗಿ ಸೂರ್ಯನ ಕಿರಣಗಲೇ ದೇಹದ ಮೇಲೆ ಬೀಳದೆ ವಿಟಮಿನ್ ಡಿ ಕೊರತೆ ಎದುರಾಗಿದೆ. ಇದರ ಫಲಿತಾಂಶವು ಪುರುಷರಲ್ಲಿ ಲೈಂಗಿಕಾಸಕ್ತಿ ಕೊರತೆಗೆ ನಾಂದಿಯಾಗಿದೆ.

ABOUT THE AUTHOR

...view details