ವಾಷಿಂಗ್ಟನ್: ಹದಿಹರೆಯದ ವಯಸ್ಸಿನ ಮುಕ್ತಾಯದ ವೇಳೆ ಮತ್ತು 20ವರ್ಷಕ್ಕಿಂತ ಮುಂಚೆ ವ್ಯಕ್ತಿಯ ತೂಕ ಹೆಚ್ಚಳ ಆಗಿದ್ದರೆ ಪ್ರಾಸ್ಟೆಟ್ ಕ್ಯಾನ್ಸರ್ನಿಂದ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಐರ್ಲೆಂಡ್ನ ಡುಬ್ಲಿನ್ನ ಯುರೋಪಿಯನ್ ಕಾಂಗ್ರೆಸ್ ಆನ್ ಒಬೆಸಿಟಿ (ಇಸಿಒ) ಈ ಕುರಿತು ಸಂಶೋಧನೆ ನಡೆಸಿದೆ. ಪುರುಷನ ಜೀವನದಲ್ಲಿ ತೂಕ ಹೆಚ್ಚಳವೂ ಪ್ರಾಸ್ಟೇಟ್ ಕ್ಯಾನ್ಸರ್ ಹಾಗೂ ಆಕ್ರಮಣಕಾರಿ ಮತ್ತು ಮರಣಾಂತಿಕ ಕ್ಯಾನ್ಸರ್ನೊಂದಿಗೆ ಸಂಬಂಧ ಹೊಂದಿದೆ. ಇದಕ್ಕಗಿ 2,50,00 ಸ್ವೀಡನ್ ಪುರುಷರ ದತ್ತಾಂಶವನ್ನು ಪರೀಶಿಲಿಸಲಾಗಿದೆ.
17ರಿಂದ 29 ವಯಸ್ಸಿನ ಯುವಕರಲ್ಲಿನ ತೂಕ ಹೆಚ್ಚಳ ಆಕ್ರಮಣಕಾರಿ ಮತ್ತು ಮತ್ತು ಮಾರಾಣಾಂತಿಕ ಕ್ಯಾನ್ಸರ್ ಹೆಚ್ಚಳದೊಂದಿಗೆ ಸಂಬಂಧ ಹೊಂದಿದೆ. ಜಾಗತಿಕವಾಗಿ ಪುರುಷರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿರುವ ಕ್ಯಾನ್ಸರ್ನಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಒಂದಾಗಿದ್ದು, ವಾರ್ಷಿಕವಾಗಿ 1.4 ಮಿಲಿಯನ್ ಜನರಲ್ಲಿ ಇದು ಪತ್ತೆಯಾಗುತ್ತಿದೆ. ಸ್ವೀಡನ್ ಪುರುಷರಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಕ್ಯಾನ್ಸರ್ ಇದಗಿದ್ದು, ವರ್ಷದಲ್ಲಿ 10 ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದು, 2 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ.
ಯುಕೆಯಲ್ಲಿ ಕೂಡ ಪುರಷರಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಕ್ಯಾನ್ಸರ್ ಆಗಿದ್ದು, ವಾರ್ಷಿಕ 52 ಸಾವಿರ ಪ್ರಕರಣಗಳು ಇದಾಗಿದ್ದು, 12 ಸಾವಿರ ಮಂದಿ ಇದರಿಂದ ಸಾವನ್ನಪ್ಪುತ್ತಿದ್ದಾರೆ. ಈ ಪ್ರಾಸ್ಟೇಸ್ ಕ್ಯಾನ್ಸರ್ ಕಾರಣದ ಅಂಶವನ್ನು ಪತ್ತೆ ಮಾಡುವುದಕ್ಕಿಂತ ಇದನ್ನು ತಡೆಯುವುದು ಮುಖ್ಯವಾಗಿದೆ ಎಂದು ಡಾ ಮರಿಸ ಡಾ ಸಿಲ್ವಾ ತಿಳಿಸಿದ್ದಾರೆ. ವಯಸ್ಸಾಗುವಿಕೆ, ಕುಟುಂಬದಲ್ಲಿನ ಸಾವನ್ನಪ್ಪಿದವರ ಇತಿಹಾಸ, ಅನೇಕ ವಂಶವಾಶಿ ಗುರುತು, ಬದಲಾಯಿಸಲು ಸಾಧ್ಯವಾಗದ ಅಪಾಯಕಾರಿ ಅಂಶಗಳನ್ನು ಗುರುತಿಸಲು ಇರುವ ಅತ್ಯವಶ್ಯಕವಾಗಿದೆ.
ಪ್ರಾಸ್ಟೇಟ್ ಕ್ಯಾನ್ಸರ್ ನಿಧಾನಗತಿ ಬೆಳವಣಿಗೆ ಹೊಂದಿದ್ದು, ತಮ್ಮ ಜೀವಿತಾವಧಿಯಲ್ಲಿ ಯಾವುದೇ ಹಾನಿಯನ್ನು ಮಾಡದಿದ್ದರೂ ಅದು ಆಕ್ರಮಣಕಾರಿಯಾಗಿರುತ್ತದೆ. ಇದು ಬಲುಬೇಗ ಹರಡುವುದರ ಜೊತೆಗೆ ಅದಕ್ಕೆ ಚಿಕಿತ್ಸೆ ನೀಡುವುದು ಕೂಡ ಕಷ್ಟವಾಗುತ್ತದೆ. ಅವರಿಗೆ ಒಂದೇ ರೀತಿಯ ಅಥವಾ ವಿವಿಧ ಅಪಾಯದ ಅಂಶ ಇದೆಯಾ ಎಂಬುದನ್ನು ಪತ್ತೆ ಮಾಡುವುದು ಮುಖ್ಯವಾಗಿದೆ.