ಕರ್ನಾಟಕ

karnataka

ETV Bharat / sukhibhava

Breast cancer​ : ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್​.. ಜೀವನಶೈಲಿ ಬದಲಾವಣೆ ಅಗತ್ಯ - Breast cancer

ಜಾಗತಿಕವಾಗಿ ಮಹಿಳೆಯರನ್ನು ಕಾಡುವ ಕ್ಯಾನ್ಸರ್​ನಲ್ಲಿ ಸ್ತನ ಕ್ಯಾನ್ಸರ್​ ಕೂಡ ಒಂದಾಗಿದೆ. ಈ ಹಿನ್ನೆಲೆ ಈ ಬಗ್ಗೆ ಅಗತ್ಯ ಮುಂಜಾಗ್ರತೆ ಅಗತ್ಯ.

risk of developing breast cancer
risk of developing breast cancer

By ETV Bharat Karnataka Team

Published : Oct 26, 2023, 3:27 PM IST

ನವದೆಹಲಿ:ಜಾಗತಿಕವಾಗಿ ಮಹಿಳೆಯರನ್ನು ಕಾಡುತ್ತಿರುವ ಸ್ತನ ಕ್ಯಾನ್ಸರ್​ ತಡೆಗಟ್ಟಬಹುದಾದ ರೋಗವಾಗಿದೆ. ವಂಶವಾಹಿನಿ ಮೂಲಕ ಸ್ತನ ಕ್ಯಾನ್ಸರ್​​ ಕಾಣಿಸಿಕೊಂಡರೆ, ಕೆಲವೊಮ್ಮೆ ನಮ್ಮ ಜೀವನಶೈಲಿಯ ಆಯ್ಕೆ ಮೂಲಕವೂ ಬಂದರೆಗುತ್ತದೆ. ಈ ಹಿನ್ನೆಲೆ ಆರೋಗ್ಯಕರ ಆಹಾರದ ಆಯ್ಕೆ ನಡೆಸುವುದು, ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗುವುದು. ಹಾಗೇ ಸ್ತನ ಕ್ಯಾನ್ಸರ್​ ಸ್ವಯಂ ಪರೀಕ್ಷೆಗೆ ಒಳಗಾಗುವುದು ಕೂಡ ಇದರ ಅಪಾಯವನ್ನು ತಪ್ಪಿಸುತ್ತದೆ ಎಂದು ಪೌಷ್ಟಿಕಾಂಶ ತಜ್ಞೆ ನೂಪುರ್ ಪಾಟೀಲ್ ತಿಳಿಸಿದ್ದಾರೆ.

ಸ್ತನ ಕ್ಯಾನ್ಸರ್​ ಅಪಾಯ ತಪ್ಪಿಸುವ ಮಾರ್ಗ..ಉತ್ತಮ ಆರೋಗ್ಯಕ್ಕೆ ಪೋಷಕಾಂಶಯುಕ್ತ ಆಹಾರವೂ ಪ್ರಮುಖ ಅಡಿಗಲ್ಲು ಆಗಿದೆ. ಇದು ಸ್ತನ ಕ್ಯಾನ್ಸರ್​ ಅಭಿವೃದ್ಧಿಯಾಗುವ ಅಪಾಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ನ್ಯೂಟ್ರಿಷಿಯನಿಸ್ಟ್​​ ನೂಪುರ್​ ಪಾಟೀಲ್​

ಸಸ್ಯಾಧಾರಿತ ಆಹಾರ:ಹಣ್ಣು, ತರಕಾರಿ ಮತ್ತು ಬೇಳೆಗಳು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ನೀಡಿ, ಕ್ಯಾನ್ಸರ್​ ವಿರುದ್ಧ ದೇಹವನ್ನು ರಕ್ಷಿಸುವ ಆ್ಯಂಟಿ ಆಕ್ಸಿಡೆಂಟ್​ ಅನ್ನು ನೀಡುತ್ತದೆ. ಈ ಆಹಾರಗಳಲ್ಲಿ ವಿಟಮಿನ್​, ಮಿನರಲ್ಸ್​ ಮತ್ತು ಪೆಥೊಕೆಮಿಕಲ್ಸ್​​ ಇದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಂಸ್ಕರಿತ ಆಹಾರ ಸೀಮಿತವಾಗಿರಲಿ: ಸಂಸ್ಕರಿತ ಆಹಾರದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದು, ಅನಾರೋಗ್ಯಕರ ಕೊಬ್ಬು, ಕೃತಕ ಪೂರಕಗಳು ಇರುತ್ತವೆ. ಇದು ತೂಕ ಹೆಚ್ಚಳ ಮತ್ತು ಊರಿಯೂತಕ್ಕೆ ಕಾರಣವಾಗುತ್ತದೆ. ಇದು ಸ್ತನ ಕ್ಯಾನ್ಸರ್​ನ ಅಪಾಯದ ಅಂಶವಾಗಿದೆ. ಈ ಹಿನ್ನೆಲೆ ಅಸಂಸ್ಕರಿತ ಆಹಾರಗಳನ್ನು ಆದಷ್ಟು ಆಯ್ಕೆ ಮಾಡಬೇಕು.

ಲೀನ್​​ ಪ್ರೊಟೀನ್​ ಮೂಲ: ಮೀನು, ಪೌಲ್ಟ್ರಿ ಮತ್ತು ಬೀನ್ಸ್​​ ಮತ್ತು ಟೊಫುನಂತಹ ಸಸ್ಯಾಧಾರಿತ ಪರ್ಯಾಯ ಆಯ್ಕೆ ಮಾಡಿ. ಕೆಂಪು ಮಾಂಸವನ್ನು ಮತ್ತು ಸಂಸ್ಕರಿತ ಮಾಂಸವನ್ನು ಮಿತವಾಗಿ ಸೇವಿಸುವುದರಿಂದ ಇದರ ಅಪಾಯವನ್ನು ಕಡಿಮೆ ಮಾಡಬಹುದು.

ಆಲ್ಕೋಹಾಲ್​ಗೆ ಇರಲಿ ಮಿತಿ: ಆಲ್ಕೋಹಾಲ್​ ಕೂಡ ಸ್ತನ ಕ್ಯಾನ್ಸರ್​ನ ಅಪಾಯದ ನಿರ್ಣಾಯಕ ಅಂಶವಾಗಿದೆ. ಆಲ್ಕೋಹಾಲ್​ ಸೇವನೆಯೊಂದಿಗೆ ಸ್ತನ ಕ್ಯಾನ್ಸರ್​ ಅಪಾಯದ ಕುರಿತು ಅನೇಕ ಅಧ್ಯಯನಗಳು ತಿಳಿಸಿವೆ. ಮಧ್ಯಮ ಮಟ್ಟದ ಮದ್ಯ ಸೇವನೆ ಕೂಡ ರೋಗದ ಉಲ್ಬಣಕ್ಕೆ ಕಾರಣವಾಗಿದೆ. ಆಲ್ಕೋಹಾಲ್​ ಹಾರ್ಮೋನ್​ ಮಟ್ಟದ ಮೇಲೆ ಪರಿಣಾಮವನ್ನು ಹೊಂದಿದ್ದು, ಇದು ಡಿಎನ್​ಎಗೆ ಹಾನಿ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆ ಆಲ್ಕೋಹಾಲ್​ ಸೇವನೆಯನ್ನು ತಪ್ಪಿಸುವುದು ಅಥವಾ ಕನಿಷ್ಠಗೊಳಿಸುವುದು ಅವಶ್ಯವಾಗಿದೆ.

ಆರೋಗ್ಯಕರ ತೂಕ ನಿರ್ವಹಣೆ: ಸ್ಥೂಲಕಾಯುವೂ ಸ್ತನ ಕ್ಯಾನ್ಸರ್​ನ ಅಪಾಯವನ್ನು ಹೊಂದಿದೆ. ಆರೋಗ್ಯಕರ ತೂಕವನ್ನು ಸರಿಯಾದ ಪೋಷಕಾಂಶ ಸೇವನೆ ಮತ್ತು ನಿಯಮಿತ ವ್ಯಾಯಾಮದ ಮೂಲಕ ಕಾಪಾಡಿಕೊಳ್ಳಬಹುದಾಗಿದೆ.

ನಿಯಮಿತ ವ್ಯಾಯಾಮದ ಪಾತ್ರ: ಆರೋಗ್ಯಯುತ ತೂಕ ಕಾಪಾಡಿಕೊಳ್ಳಲು ನಿಯಮಿತ ದೈಹಿಕ ಚಟುವಟಿಕೆ ಸಹಾಯ ಮಾಡುತ್ತದೆ. ಜೊತೆಗೆ ಇದು ದೇಹದ ಹಾರ್ಮೋನ್​ ಮಟ್ಟವನ್ನು ನಿಯಂತ್ರಿಸುತ್ತದೆ. ಅಧಿಕ ಮಟ್ಟದ ಈಸ್ಟ್ರೋಜನ್​ಗಳು ಸ್ತನ ಕ್ಯಾನ್ಸರ್​​ ಅಭಿವೃದ್ಧಿಯೊಂದಿಗೆ ಸಂಬಂಧ ಹೊಂದಿದೆ. ಈ ಹಿನ್ನೆಲೆ ಸ್ತನ ಕ್ಯಾನ್ಸರ್​ ಅಪಾಯ ತಪ್ಪಿಸಲು ವ್ಯಾಯಾಮ ರೂಢಿಸಿಕೊಳ್ಳುವುದು ಉತ್ತಮ. ಜೊತೆಗೆ ವ್ಯಾಯಾಮ ಒತ್ತಡವನ್ನು ನಿವಾರಿಸಿ, ನಕಾರಾತ್ಮಕತೆಯನ್ನು ತಪ್ಪಿಸಿ, ಆರೋಗ್ಯದಿಂದ ಇರಲು ಸಹಾಯ ಮಾಡುತ್ತದೆ.

ಸ್ವಯಂ ಪರೀಕ್ಷೆ:ಸ್ತನದ ಸ್ವಯಂ ಪರೀಕ್ಷೆ ಅಗತ್ಯವನ್ನು ತಿಳಿಸಿರುವ ಪಾಟೀಲ್​. ಇದು ಅಗತ್ಯ ಎಂದಿದ್ದಾರೆ. ಈ ರೀತಿ ಸ್ವಯಂ ಪರೀಕ್ಷೆ ಮಾಡುವುದರಿಂದ ನಿಮ್ಮ ಸ್ತನ ಸಾಮಾನ್ಯವಾಗಿ ಹೇಗೆ ಕಾಣುತ್ತದೆ ಮತ್ತು ಅನುಭವ ಆಗುತ್ತದೆ ಎಂದು ತಿಳಿಯುತ್ತದೆ. ಈ ವೇಳೆ ಆರಂಭದಲ್ಲೇ ನಿಮ್ಮ ಸ್ತನದಲ್ಲಿನ ಸಮಸ್ಯೆ ಅರಿತರೆ ಇದರಿಂದ ಯಶಸ್ವಿ ಚಿಕಿತ್ಸೆಗೆ ಸಹಾಯ ಆಗುತ್ತದೆ.

ಆರೋಗ್ಯಯುತ ಆಹಾರದ ಆಯ್ಕೆ ಮತ್ತು ನಿಯಮಿತ ವ್ಯಾಯಾಮಗಳು ಸ್ತನ ಕ್ಯಾನ್ಸರ್​​ ತಡೆಗಟ್ಟುತ್ತದೆ. ಇದರ ಜೊತೆಗೆ ಸ್ತನದ ಸ್ವಯಂ ಪರೀಕ್ಷೆಯು ರಕ್ಷಣಾತ್ಮಕ ಮಾಪನವಾಗಿದೆ. ನಿಮ್ಮ ಜೀವನಶೈಲಿಯಲ್ಲಿ ಆಗುವ ಪ್ರತಿಯೊಂದು ಚಿಕ್ಕ ಬದಲಾವಣೆಗಳು ಕೂಡ ಸ್ತನ ಕ್ಯಾನ್ಸರ್​ ಅಪಾಯ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು. (ಐಎಎನ್​ಎಸ್​)

ಇದನ್ನೂ ಓದಿ: ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಮಹಿಳೆಯಲ್ಲಿ ಸ್ತನ ಕ್ಯಾನ್ಸರ್​ ಮಾರಿ; ಅಧ್ಯಯನ

ABOUT THE AUTHOR

...view details