ಕರ್ನಾಟಕ

karnataka

ETV Bharat / sukhibhava

ತಾಪಮಾನ ಏರಿಕೆಯಿಂದ ಯುರೋಪ್​, ಅಮೆರಿಕದಲ್ಲಿ ಡೆಂಗ್ಯೂ ಹೆಚ್ಚಳ: WHO - ಡೆಂಗ್ಯೂ ಸೇರಿದಂತೆ ಸೊಳ್ಳೆ ಸಂಬಂಧಿತ ಸಾವಿನ ಸಂಖ್ಯೆ

ಸಾಮಾನ್ಯವಾಗಿ ಏಷ್ಯಾ ಮತ್ತು ದಕ್ಷಿಣ ಅಮೆರಿಕದಲ್ಲಿ ಕಂಡುಬರುವ ಡೆಂಗ್ಯೂ ರೋಗದ ಸೊಳ್ಳೆಗಳು ಹವಾಮಾನ ಪೂರಕ ವಾತಾವರಣದಿಂದ ಉತ್ತರದತ್ತ ಚಲಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Rising temperatures will drive dengue dengue cases in America
Rising temperatures will drive dengue dengue cases in America

By ETV Bharat Karnataka Team

Published : Nov 8, 2023, 11:46 AM IST

ಲಂಡನ್​: ತಾಪಮಾನದ ಏರಿಕೆಯು ಅಮೆರಿಕ ಮತ್ತು ಯುರೋಪ್​ನಂತಹ ಹೊಸ ಪ್ರದೇಶಗಳಲ್ಲಿ ಡೆಂಗ್ಯೂ ಸೇರಿದಂತೆ ಸೊಳ್ಳೆ ಸಂಬಂಧಿತ ರೋಗದಿಂದ ಸಾವಿನ ಸಂಖ್ಯೆ ಏರಿಕೆಯಾಗಲು ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಈ ಸಂಬಂಧ ಅಧಿಕಾರಿಗಳು ಸಿದ್ಧತೆಗೆ ಮುಂದಾಗಬೇಕು ಎಂದು ಕರೆ ನೀಡಿದೆ.

ಏಷ್ಯಾ ಮತ್ತು ದಕ್ಷಿಣ ಅಮೆರಿಕದಲ್ಲಿ ಡೆಂಗ್ಯೂವಿನಿಂದ ಪ್ರತಿ ವರ್ಷ 20 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ. 100ರಲ್ಲಿ ಒಬ್ಬರ ಸಾವಿಗೆ ಈ ರೋಗವು ಕಾರಣವಾಗುತ್ತಿದೆ. 2023ರ ಅಕ್ಟೋಬರ್‌ನಲ್ಲಿ ಜಾಗತಿಕವಾಗಿ 79 ದೇಶಗಳಲ್ಲಿ 4.2 ಮಿಲಿಯನ್​ ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, 3 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ಯುರೋಪಿಯನ್ ಸೆಂಟರ್​ ಫಾರ್​ ಡಿಸೀಸ್​ ಪ್ರಿವೆನ್ಷನ್ ಆ್ಯಂಡ್​ ಕಂಟ್ರೋಲ್​ ದತ್ತಾಂಶ ತಿಳಿಸಿದೆ.

ಭಾರತ, ಬ್ರೆಜಿಲ್​, ಪೆರು, ಬಾಂಗ್ಲಾದೇಶ, ಬೊಲಿವಿಯಾ, ಅರ್ಜೆಂಟಿನಾ, ಮೆಕ್ಸಿಕೊ, ಫಿಲಿಪ್ಪೀನ್ಸ್‌​​, ನಿಕರಾಗುವಾ ಮತ್ತು ಕಾಂಬೋಡಿಯಾ ದೇಶದಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ಹೆಚ್ಚುತ್ತಿರುವ ತಾಪಮಾನವು ಸೊಳ್ಳೆಗಳು ರೋಗವನ್ನು ಅಮೆರಿಕ, ಯುರೋಪ್​ ಮತ್ತು ಆಫ್ರಿಕಾದಲ್ಲಿನ ಹೊಸ ಸ್ಥಳಗಳಿಗೆ ಕೊಂಡೊಯ್ಯಲು ಸಹಾಯ ಮಾಡುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಜೆರೆಮೆ ಫ್ಯಾರೆರ್​ ಹೇಳಿದ್ದಾರೆ.

ಪ್ರತಿ ವರ್ಷ ಅಮೆರಿಕದಲ್ಲಿ 1,200 ಪ್ರಕರಣಗಳು ದಾಖಲಾಗುತ್ತಿದ್ದು, ಈ ಪೈಕಿ 600 ಸ್ಥಳೀಯ ಸಂಬಂಧಿ ಸೋಂಕಾಗಿದೆ. ಆದರೆ ಒಂದು ದಶಕದಿಂದ ಕ್ಯಾಲಿಫೋರ್ನಿಯಾ ತನ್ನ ಮೊದಲ ಸ್ಥಳೀಯವಾಗಿ ಸ್ವಾಧೀನಪಡಿಸಿಕೊಂಡ ಸೋಂಕು ದಾಖಲಿಸಿದ ನಂತರ ಕಳೆದ ತಿಂಗಳಿನಿಂದ ರೋಗ ಹರಡುತ್ತಿದೆ ಎಂಬ ಆತಂಕ ಎದುರಾಗಿದೆ. ಮೆಕ್ಸಿಕೋದಲ್ಲಿ ಸೋಂಕಿತ ಸೊಳ್ಳೆಗಳು ಉತ್ತರದ ಕಡೆಗೆ ಚಲಿಸಲು ಸಾಧ್ಯವಾದರೆ, ಅಮೆರಿಕದಲ್ಲಿ ಈ ಡೆಂಗ್ಯೂ ಜ್ವರವೂ ಸಾಂಕ್ರಾಮಿಕವಾಗಬಹುದು ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಡೆಂಗ್ಯೂ ರೋಗವು ಸಾಮಾನ್ಯವಾಗಿ ದಕ್ಷಿಣ ಅಮೆರಿಕ, ಆಗ್ನೇಯ ಏಷ್ಯಾಗಳಲ್ಲಿ ಸಾಂಕ್ರಾಮಿಕವಾಗಿದೆ. ಇದೀಗ ಉತ್ತರದ ದೇಶದಲ್ಲಿ ಹರಡುತ್ತಿದೆ. ಇದೀಗ ಮೆಡಿಟೇರಿಯನ್​ ಪ್ರದೇಶಗಳಲ್ಲಿ ಬದಲಾವಣೆ ತರುತ್ತಿವೆ ಎಂದು ಆಕ್ಸಫರ್ಡ್​​ ಯುನಿವರ್ಸಿಟಿಯ ಸಾಂಕ್ರಾಮಿಕ ವಿಜ್ಞಾನದ ನಿರ್ದೇಶಕ ಪ್ರೊ.ಸರ್.ಪೀಟರ್​ ಹೊರ್ಬೆ ತಿಳಿಸಿದರು.

ತಜ್ಞರ ಅನುಸಾರ, ಸೋಂಕಿತ ಸೊಳ್ಳೆಗಳು ಉತ್ತರದ ಕಡೆ ಪ್ರಯಾಣಿಸಿ, ಅಲ್ಲಿ ಸ್ಥಳೀಯ ಸೊಳ್ಳೆಗಳನ್ನು ಕಚ್ಚುವ ಮೂಲಕ ವೈರಸ್​ ಪರಿಚಯಿಸಬಹುದು. ಬಳಿಕ ರೋಗವು ಇತರೆ ಜನರಿಗೆ ಸೋಂಕು ತಗುಲುವುದಕ್ಕೆ ಮತ್ತು ಸ್ಥಳಾಂತರವಾಗಲು ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಸಿದ್ಧತೆ ನಡೆಸಬೇಕಿದೆ ಎಂದು ಫ್ಯಾರರ್​ ಕರೆ ನೀಡಿದ್ದಾರೆ.

ಕಳೆದೊಂದು ದಶಕದಿಂದ ಹೆಚ್ಚಾದ ಪ್ರಕರಣಗಳು: ಡೆಂಗ್ಯೂ, ಝಿಕಾ ಮತ್ತು ಚಿಕೂನ್‌ಗುನ್ಯಾದಂತಹ ಆರ್ಬೋವೈರಸ್‌ಗಳಿಂದ ಉಂಟಾಗುವ ಸೋಂಕುಗಳು ಕಳೆದೊಂದು ದಶಕದಿಂದ ಗಮನಾರ್ಹ ಬೆಳವಣಿಗೆ ಕಂಡಿವೆ. ಅರ್ಧದಷ್ಟು ಜಗತ್ತು ಡೆಂಗ್ಯೂ ಅಪಾಯ ಹೊಂದಿದ್ದು, ಪ್ರತಿ ವರ್ಷ 100-400 ಮಿಲಿಯನ್​ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ ಎಂದು ಅಂದಾಜಿಸಲಾಗಿದೆ.

ಜಾಗತಿಕವಾಗಿ ಆರ್ಬೋವೈರಸ್‌ಗಳ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ಇದು ಸರಿಯಾದ ಸಮಯ ಎಂದು ಡಬ್ಲ್ಯೂಎಚ್​ಒ ವಿಜ್ಞಾನಿ ಡಾ.ರಾನ್​ ವೆಲಯುದನ್​ ಹೇಳಿದ್ದಾರೆ. ಜನರ ಚಲನೆ, ನಗರೀಕರಣ ಮತ್ತು ನೀರು ಮತ್ತು ನೈರ್ಮಲ್ಯದೊಂದಿಗಿನ ಸಂಬಂಧ ಕೂಡಾ ಹೊಸ ಪ್ರದೇಶದಲ್ಲಿ ಈ ವಾಹಕದ ರೋಗಗಳ ಹೆಚ್ಚಳಕ್ಕೆ ಕಾರಣವಾಗುವ ಅಂಶ. ಹವಾಮಾನ ಬದಲಾವಣೆ ಇದರ ಉಲ್ಬಣತೆಯನ್ನು ಹೆಚ್ಚಿಸಲಿದೆ. ಅಧಿಕ ತಾಪಮಾನ, ಹೆಚ್ಚಿನ ಆರ್ದ್ರತೆ ಇರುವ ಪ್ರದೇಶಗಳು ಸೊಳ್ಳೆಗಳಿಗೆ ಪೂರಕ ವಾತಾವರಣವಾಗಿದೆ. ಅಧಿಕ ತಾಪಮಾನದಲ್ಲಿ ವಾಹಕಗಳು ಮತ್ತು ವೈರಸ್​​ಗಳು ವೇಗವಾಗಿ ಅಭಿವೃದ್ದಿ ಹೊಂದುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ:ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆ: ಆತಂಕ ಬೇಡ, ಎಚ್ಚರ ವಹಿಸಿ ಎಂದ ಆರೋಗ್ಯ ಇಲಾಖೆ

ABOUT THE AUTHOR

...view details