ಕರ್ನಾಟಕ

karnataka

ETV Bharat / sukhibhava

ಸಂಗಾತಿ ಜತೆ ದೈಹಿಕ ಸಂಪರ್ಕ ಲೈಂಗಿಕ ಮಾತ್ರವಲ್ಲ, ಒಟ್ಟಾರೆ ಆರೋಗ್ಯವನ್ನೂ ಸುಧಾರಿಸುತ್ತದೆ

ಸಂಗಾತಿಯೊಂದಿಗಿನ ನಿಯಮಿತ ದೈಹಿಕ ಸಂಪರ್ಕವು, ಪುರುಷರ ಲೈಂಗಿಕ ಸಾಮರ್ಥ್ಯ ಮಾತ್ರವಲ್ಲದೆ ಒಟ್ಟಾರೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ ಎಂದು ಸಂಶೋಧನೆ ಹೇಳಿದೆ. ಆರೋಗ್ಯ ವೃದ್ಧಿಗೆ ಲೈಂಗಿಕ ಕ್ರಿಯೆ ಅಗತ್ಯ ಎಂಬುದು ಇದರಿಂದ ಸಾಬೀತಾಗಿದೆ.

ದೈಹಿಕ ಸಂಪರ್ಕ

By

Published : Aug 29, 2020, 7:32 PM IST

ಸಂಗಾತಿಯೊಂದಿಗಿನ ದೈಹಿಕ ಸಂಪರ್ಕವು, ಇಬ್ಬರ ನಡುವಿನ ಅನ್ಯೋನ್ಯ ಸಂಬಂಧವನ್ನು ಸುಧಾರಿಸಲು ಮತ್ತು ಒಡೆದ ಹೃದಯಗಳನ್ನು ಒಂದಾಗಿಸಲು ಇರುವ ಕ್ರಿಯೆ. ಸಂಗಾತಿಗಳ ನಡುವಿನ ಲೈಂಗಿಕ ಕ್ರಿಯೆಯು ಲೈಂಗಿಕ ಸಾಮರ್ಥ್ಯವನ್ನು ವೃದ್ಧಿಸುವುದರ ಜೊತೆಗೆ ನಿಮ್ಮ ಆರೋಗ್ಯವನ್ನು ಸಹ ಸುಧಾರಿಸುತ್ತದೆ ಅಂದರೆ ನಂಬಲೇ ಬೇಕು.

ಇತ್ತೀಚೆಗಿನ ಸಂಶೋಧನೆಯೊಂದರ ಪ್ರಕಾರ, ದೈಹಿಕ ಸಂಪರ್ಕದ ಸಾಮಾನ್ಯ ಪ್ರಮಾಣ ತಿಂಗಳಿಗೆ 6ರಿಂದ 8 ಬಾರಿ ಅಥವಾ ವಾರಕ್ಕೊಮ್ಮೆ ಇದ್ದರೆ ಅದು ಆರೋಗ್ಯಕರ ಎಂದು ಹೇಳಲಾಗಿದೆ. ಆದರೂ ಇದಕ್ಕೆ ಯಾವುದೇ ರೀತಿಯ ಮಿತಿಯಿಲ್ಲ. ಪುರುಷ ತನ್ನ ಸಂಗಾತಿಯೊಂದಿಗೆ ದೈಹಿಕ ಸಂಪರ್ಕವನ್ನು ಮತ್ತಷ್ಟು ಬಾರಿ ಬಯಸಿದಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಮುನ್ನಡೆಯಬಹುದು.

ಪೀಡ್‌ಮಾಂಟ್ ಹೆಲ್ತ್‌ಕೇರ್ ಅಟ್ಲಾಂಟಾದ ಮೂತ್ರಶಾಸ್ತ್ರಜ್ಞ ಡಾ. ನಿಖಿಲ್ ಶಾ, ನಿಮ್ಮ ಸಂಗಾತಿಯೊಂದಿಗಿನ ದೈಹಿಕ ಅನ್ಯೋನ್ಯತೆಯೇ ನಿಮ್ಮ ಆರೋಗ್ಯದ ಗುಟ್ಟು. ನಿಯಮಿತವಾಗಿ, ನಿಮಗನಿಸಿದಾಗ ನಿಮ್ಮ ಸಂಗಾತಿಯೊಂದಿಗೆ ಸಂಭೋಗ ನಡೆಸುವುದರಿಂದ, ನಿಮ್ಮ ಒತ್ತಡದಿಂದ ಹೊರ ಬರುತ್ತೀರಿ. ನಿಮ್ಮೊಳಗಿನ ಆತಂಕವನ್ನು ತೊಡೆದುಹಾಕುತ್ತೀರಿ. ನಿಮ್ಮ ಜೊತೆಗಾರ್ತಿಗೆ ಮತ್ತಷ್ಟು ಹತ್ತಿರವಾಗುತ್ತೀರಿ. ಇಷ್ಟೇ ಅಲ್ಲದೆ ನಿಮ್ಮ ಆರೋಗ್ಯ ಸುಧಾರಿಸಿ, ನಿಮ್ಮ ಲೈಂಗಿಕ ಕ್ರಿಯೆ ಮತ್ತಷ್ಟು ಸುಧಾರಿಸುತ್ತದೆ ಎಂದು ಹೇಳುತ್ತಾರೆ.

Aarp.org ನಲ್ಲಿ ಬಂದಿರುವ ವರದಿಯೊಂದರ ಪ್ರಕಾರ, ಆಗಾಗ್ಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ಹಲವಾರು ಪ್ರಯೋಜನಗಳಿವೆ ಅವುಗಳು ಈ ಕೆಳಗಿನಂತಿವೆ...

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ...

ಅಧಿಕ ರಕ್ತದೊತ್ತಡಕ್ಕೆ ಹಲವಾರು ಕಾರಣಗಳಿವೆ. ಅಧಿಕ ಮಾನಸಿಕ ಒತ್ತಡ ಇದಕ್ಕೆ ಸಾಮಾನ್ಯ ಕಾರಣ. ಅನಿಯಮಿತ ಜೀವನಶೈಲಿ, ಬಿಡುವಿಲ್ಲದೆ ಓಡಾಟ ಮತ್ತು ದೀರ್ಘಕಾಲದ ಕೆಲಸದ ಕಾರಣದಿಂದಾಗಿ ಇಂತಹ ಒತ್ತಡ ಹೆಚ್ಚಾಗುತ್ತದೆ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಆದರೆ, ನೀವು ನಿಮ್ಮ ಸಂಗಾತಿಯೊಂದಿಗೆ ಮೌಲ್ಯಯುತ ಸಮಯವನ್ನು ಕಳೆಯುತ್ತಿದ್ದರೆ ಮತ್ತು ನಿರಂತರ ಹಾಗೂ ನಿಯಮಿತವಾಗಿ ಲೈಂಗಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರೆ, ವೈದ್ಯರು ಹಾಗೂ ಯಾವುದೇ ಔಷಧಿಗಳ ನೆರವಿಲ್ಲದೆ ರಕ್ತದೊತ್ತಡ ಸಮಸ್ಯೆಯನ್ನು ಸ್ವಾಭಾವಿಕವಾಗಿ ನಿಭಾಯಿಸಬಹುದು. ಯುರೋಪಿನ ಒಂದು ಅಧ್ಯಯನದ ಪ್ರಕಾರ, ಪುರುಷರು ನಿಮಿತವಾಗಿ ಲೈಂಗಿಕ ಚಟುವಟಿಕೆಯಲ್ಲಿ ಪಾಲ್ಗೊಂಡರೆ, ಅವರ ರಕ್ತದೊತ್ತಡ ಸಮಸ್ಯೆ ನಿಧಾನಕ್ಕೆ ಕಡಿಮೆಯಾಗುತ್ತಂತೆ.

ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ...

ಆಗಾಗ ಲೈಂಗಿಕ ಕ್ರಿಯೆ ನಡೆಸುವುದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ಜನರ ಸಾಮಾನ್ಯ ಅಭಿಪ್ರಾಯ. ದೈಹಿಕವಾಗಿ ದುರ್ಬಲರಾಗಿರುವ ಪುರುಷರಿಗೆ ಇದು ಕೆಲವೊಮ್ಮೆ ನಿಜವಾಗಬಹುದು. ಆದರೆ ದಿನನಿತ್ಯದ ಬದುಕಿನಲ್ಲಿ ಸಕ್ರಿಯವಾಗಿರುವ ಪುರುಷರಿಗೆ, ದೈಹಿಕ ಸಂಪರ್ಕವು ಉತ್ತಮ ಹೃದಯದ ಆರೋಗ್ಯವನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಇದನ್ನು ಸಮರ್ಥಿಸಲು, ಬ್ರಿಟಿಷ್ ಸಂಶೋಧಕರು 914 ಪುರುಷರನ್ನು ಸುಮಾರು 20 ವರ್ಷಗಳ ಕಾಲ ಅಧ್ಯಯನ ಮಾಡಿ, ನಿಯಮಿತ ಸಂಭೋಗ ಹೆಚ್ಚಾದಂತೆ ಅವರ ಹೃದಯ ಸಂಬಂಧಿ ಅಪಾಯವು ಕಡಿಮೆಯಾಗಿದೆ ಎಂದು ವರದಿ ಮಾಡಿದೆ. ಹೀಗಾಗಿ ಸಂಗಾತಿಯೊಂದಿಗಿನ ದೈಹಿಕ ಸಂಪರ್ಕ ಹೃದಯದ ಆರೋಗ್ಯಕ್ಕೂ ಉತ್ತಮ ಎಂಬುದನ್ನು ಯುವಕರು ತಿಳಿಯಬೇಕಿದೆ.

ಜನನಾಂಗ ನಿಮಿರುವಿಕೆಯ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡುತ್ತದೆ...

ಫಿನ್ಲೆಂಡ್‌ನ ಟ್ಯಾಂಪೆರೆ ವಿಶ್ವವಿದ್ಯಾಲಯದ ಎಂಡಿ ಜುಹಾ ಕೊಸ್ಕಿಮಾಕಿ ಮತ್ತು ಅವರ ಸಹೋದ್ಯೋಗಿಗಳು, ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾದಂತೆಲ್ಲಾ ನಿಮಿರುವಿಕೆಯ ಸಮಸ್ಯೆಯ ಕಡಿಮೆಯಾಗುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ನಿರಂತರ ದೈಹಿಕ ವ್ಯಾಯಾಮವು ಕ್ರಿಯಾತ್ಮಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವಂತೆ, ನಿಯಮಿತ ಲೈಂಗಿಕ ಚಟುವಟಿಕೆಯು ಶಕ್ತಿಯನ್ನು ಕಾಪಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಇಲ್ಲಿ ತುಂಬಾ ಮುಖ್ಯವಾದ ಅಂಶವೆಂದರೆ, ಜನನಾಂಗದ ನಿಮಿರುವಿಕೆ ಮಾಡಿಕೊಳ್ಳದಿದ್ದರೆ, ಆ ಸಾಮರ್ಥ್ಯವನ್ನೇ ನೀವು ಕಳೆದುಕೊಳ್ಳಬಹುದು ಎಂದು ಜುಹಾ ಕೊಸ್ಕಿಮಾಕಿ ಹೇಳುತ್ತಾರೆ. ವಾರಕ್ಕೆ ಕನಿಷ್ಟ ಒಂದು ಬಾರಿಯಾದರೂ ಲೈಂಗಿಕ ಕ್ರಿಯೆ ನಡೆಸದಿದ್ದರೆ, ನಿಮಿರುವಿಕೆ ಸಮಸ್ಯೆ ಸೃಷ್ಟಿಯಾಗಬಹುದು ಎಂದು ಕೊಸ್ಕಿಮಾಕಿ ಕಿವಿಮಾತು ಹೇಳಿದ್ದಾರೆ.

ಪ್ರಾಸ್ಟೇಟ್ ಕ್ಯಾನ್ಸರ್​ನಿಂದ ತಪ್ಪಿಸಬಹುದು...

ಕಳೆದ ಎಂಟು ವರ್ಷಗಳಿಂದ, ರಾಷ್ಟ್ರೀಯ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಸಂಶೋಧಕರು 46 ರಿಂದ 81 ವರ್ಷ ವಯಸ್ಸಿನ 29,342 ಪುರುಷರಲ್ಲಿ ಲೈಂಗಿಕ ಸುಖದ ಪರಾಕಾಷ್ಠೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಪತ್ತೆಹಚ್ಚಿದ್ದಾರೆ. ಲೈಂಗಿಕ ಸುಖವನ್ನು ಅನುಭವಿಸುವ ಪರಾಕಾಷ್ಠೆಯ ಆವರ್ತನ ಹೆಚ್ಚಾದಂತೆ, ಪ್ರಾಸ್ಟೇಟ್(ಪುರುಷನ ಜನನೇಂದ್ರಿಯಕ್ಕೆ ಸಂಬಂದಿಸಿದ ಒಂದು ಗ್ರಂಥಿ) ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇಪ್ಪತ್ತರಿಂದ 30 ವರ್ಷದೊಳಗಿನ ಪುರುಷರಲ್ಲಿ ತಿಂಗಳಿಗೆ 21 ಅಥವಾ ಅದಕ್ಕಿಂತ ಹೆಚ್ಚು ಬಾರಿ ವೀರ್ಯಾಣು ಸ್ಖಲಿಸಿರುವ ಪುರುಷರಿಗಿಂತ, ತಿಂಗಳಿಗೆ 7 ಬಾರಿ ಸ್ಖಲಿಸಿರುವ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಹಾಗೂ ತಜ್ಞರು ತಿಳಿಸಿದ್ದಾರೆ.

ಇವಿಷ್ಟೇ ಅಲ್ಲ. ಆಗಾಗ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದರೆ, ಅದು ನೀವು ಸದೃಢವಾಗಿರಲು ಸಹಾಯ ಮಾಡುತ್ತದೆ. ಗಂಟೆಗೆ 150 ಕ್ಯಾಲರಿಗಳನ್ನು ನಾಶ ಮಾಡುವ ಮೂಲಕ ಇದೇ ಸೆಕ್ಸ್​ ಪುರುಷರಿಗೆ ಸುಲಭ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ. ಪುರುಷರ ಆತಂಕದ ನರಗಳನ್ನು ಸರಾಗಗೊಳಿಸುವುದರ ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಮಾನಸಿಕ ನೆಮ್ಮದಿ ನೀಡುವುದರೊಂದಿಗೆ, ಸುಖ ನಿದ್ರೆಗೆ ಜಾರುವಂತೆ ಮಾಡುತ್ತದೆ. ಈ ಮೂಲಕ ಆಳವಾದ ವಿಶ್ರಾಂತಿಗೆ ಜಾರಬಹುದು. ಇವೆಲ್ಲವೂ ದೀರ್ಘಕಾಲದ ಜೀವನಕ್ಕೆ ಸಂಬಂಧಿಸಿವೆ ಎನ್ನುವುದು ಗಮನಾರ್ಹ.

ಹೀಗೆ ಮಾಡಲು ಮರೆಯದಿರಿ...

ನಿಮ್ಮ ಸಂಬಂಧದಲ್ಲಿನ ಪ್ರೀತಿಯನ್ನು ಜೀವಂತವಾಗಿರಿಸಿಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಪ್ರೀತಿಯನ್ನು ಸಂವಹನ ಮಾಡುತ್ತಿರಿ. ಕೆಲಸದ ನಂತರದ ನಿಮ್ಮ ಸಮಯವನ್ನು ರೋಮ್ಯಾಂಟಿಕ್ ಆಗಿ ಬದಲಿಸಿ. ಹೊಸ ವಿಷಯಗಳನ್ನು ಪ್ರಯತ್ನಿಸಿ. ನಿಮ್ಮ ವೈಯಕ್ತಿಕ ಹಾಗೂ ಲೈಂಗಿಕ ಜೀವನವು ಡಲ್​ ಆಗಲು ಬಿಡಬೇಡಿ. ಪ್ರಣಯಭರಿತ ಮತ್ತು ಸಕ್ರಿಯ ಲೈಂಗಿಕ ಜೀವನವು ಉತ್ತಮ ಸೌಹಾರ್ದತೆ ಮತ್ತು ಭಾವನಾತ್ಮಕ ಭದ್ರತೆಯನ್ನು ನೀಡುತ್ತದೆ ಎಂಬುದನ್ನು ಮರೆಯಬೇಡಿ.

ABOUT THE AUTHOR

...view details