ಫೈಝರ್ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದವರಲ್ಲಿ ಕೋವಿಡ್ ಮೂಲ ವೈರಸ್ ವಿರುದ್ಧ ಉತ್ಪತಿಯಾಗುವ ಪ್ರತಿಕಾಯಗಳಿಗಿಂತ (Neutralising antibodies) ಐದು ಪಟ್ಟು ಕಡಿಮೆ ಪ್ರತಿಕಾಯ ರೂಪಾಂತರಿ ವೈರಸ್ ಡೆಲ್ಟಾ ( ಬಿ16172) ಬಂದರೆ ಉಂಟಾಗುತ್ತದೆ ಎಂದು ಫೈಝರ್ ಲಸಿಕೆಗೆ ಸಂಬಂಧಪಟ್ಟ ಸಂಶೋಧನಾ ವರದಿಯೊಂದು ತಿಳಿಸಿದೆ.
ಫೈಝರ್ ಲಸಿಕೆಯ ಒಂದು ಡೋಸ್ ಪಡೆದ ಬಳಿಕ ಶೇ. 79ರಷ್ಟು ಜನರಲ್ಲಿ ಮೂಲ ವೈರಸ್ ವಿರುದ್ಧ ಉತ್ತಮವಾದ ಪ್ರತಿಕಾಯಗಳು ಉತ್ಪತಿಯಾಗಿದ್ದವು. ಆದರೆ, ರೂಪಾಂತರಿ ವೈರಸ್ಗೆ ಹೋಲಿಸಿ ನೋಡಿದಾಗ ಮೂಲ ವೈರಸ್ ವಿರುದ್ಧ ಉತ್ಪತಿಯಾಗಿದ್ದ ಪ್ರತಿಕಾಯುಗಳಲ್ಲಿ ಅಲ್ಫಾ ( ಬಿ117) ವಿರುದ್ಧ ಶೇ. 50, ಡೆಲ್ಟಾ (ಬಿ16172) ವಿರುದ್ಧ ಶೇ. 32 ಮತ್ತು ಬೀಟಾ (ಬಿ1351) ವಿರುದ್ಧ ಶೇ. 25ರಷ್ಟು ಪ್ರತಿಕಾಯ ಪ್ರಮಾಣ ಕಡಿಮೆಯಾಗಿದೆ ಎಂದು ಲ್ಯಾನ್ಸೆಟ್ನಲ್ಲಿ ಪ್ರಕಟಗೊಂಡ ವರದಿ ಹೇಳಿದೆ.
ವಯಸ್ಸು ಹೆಚ್ಚಾದಂತೆ ಪ್ರತಿಕಾಯಗಳು ಕಡಿಮೆಯಾಗುತ್ತಾ ಹೋಗುತ್ತವೆ. ಆದರೆ ಇದಕ್ಕೂ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವರದಿ ತಿಳಿಸಿದೆ. ರೂಪಾಂತರಿ ವೈರಸ್ ಮೊದಲ ಡೋಸ್ ಲಸಿಕೆಯ ಪರಿಣಾಮಕತ್ವ ಮತ್ತು ಪ್ರತಿಕಾಯಗಳನ್ನು ಹೇಗೆ ಕಡಿಮೆ ಮಾಡಿದೆ ಎಂಬುವುದರ ಬಗ್ಗೆ ತಿಳಿಸಲು ಪ್ರಯೋಗಾಲಯದ ಈ ವರದಿ ಅಗತ್ಯವಾಗಿದೆ ಎಂದು ಯುಕೆಯ ಫ್ರಾನ್ಸಿಸ್ ಕ್ರಿಕ್ ಇನ್ಸ್ಟಿಟ್ಯೂಟ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ರಿಸರ್ಚ್ (ಎನ್ಐಹೆಚ್ಆರ್) ಯುಸಿಎಲ್ಹೆಚ್ ಬಯೋಮೆಡಿಕಲ್ ರಿಸರ್ಚ್ ಸೆಂಟರ್ ಸಂಶೋಧಕರು ಹೇಳಿದ್ದಾರೆ.
ರೂಪಾಂತರಿ ವೈರಸ್ ಹರಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಸಾಂಕ್ರಾಮಿಕ ರೋಗದಲ್ಲಿನ ಬದಲಾವಣೆಗಳಿಗೆ ಸ್ಪಂದಿಸುವಂತೆ ನಮ್ಮ ಅಧ್ಯಯನವನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ಬದಲಾವಣೆಗೊಳ್ಳುತ್ತಾ ಎದುರಾಗುವ ಅಪಾಯ ಮತ್ತು ಅದರಿಂದ ರಕ್ಷಣೆ ಹೊಂದುವ ಬಗ್ಗೆ ತಕ್ಷಣ ಪುರಾವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಯುಸಿಎಲ್ಹೆಚ್ನ ಸಾಂಕ್ರಾಮಿಕ ರೋಗಗಳ ಸಲಹೆಗಾರ್ತಿ ಎಮ್ಮಾ ವಾಲ್ ತಿಳಿಸಿದ್ದಾರೆ.