ಕರ್ನಾಟಕ

karnataka

By

Published : Apr 18, 2023, 10:45 AM IST

Updated : Apr 18, 2023, 1:12 PM IST

ETV Bharat / sukhibhava

ಜಿಮ್​ನಂತಹ​ ಅಭ್ಯಾಸ ರೂಢಿಯಾಗಲು ಇಂತಿಷ್ಟೆ ಸಮಯವಂತಿಲ್ಲ..

ಚಿಕಾಗೋ ವಿಶ್ವವಿದ್ಯಾಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಶಿಯೋಮಿನ್​ ಲಿ ಸೇರಿದಂತೆ ಹಲವು ಪ್ರೊಫೆಸರ್​ಗಳು ಈ ಅಧ್ಯಯನ ನಡೆಸಿದ್ದಾರೆ.

No magic number for how long it takes to form habits
No magic number for how long it takes to form habits

ವಾಷಿಂಗ್ಟನ್​ (ಅಮೆರಿಕ): ದೇಹದ ಫಿಟ್ನೆಸ್​ ಕಾಯ್ದುಕೊಳ್ಳಲು ವ್ಯಾಯಾಮ, ಜಿಮ್​, ಜುಂಬಾ ಅಥವಾ ಟ್ರೆಡ್​ಮಿಲ್​ ಅಭ್ಯಾಸ ರೂಢಿಸಿಕೊಳ್ಳಲು ಮುಂದಾಗುತ್ತೇವೆ. ಆದರೆ, ಈ ಅಭ್ಯಾಸಗಳು ದೇಹದ ಜೊತೆಗೆ ಮನಸ್ಸಿಗೆ ಒಗ್ಗಿಕೊಳ್ಳಲು ಇಂತಿಷ್ಟೆ ಸಮಯ ಎಂಬ ಮ್ಯಾಜಿಕ್​ ನಂಬರ್​ ಇಲ್ಲ. ಇದಕ್ಕಾಗಿ ಸುಮಾರು ಆರು ತಿಂಗಳುಗಳ ಕಾಲ ಸಮಯ ಹಿಡಿಯಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ. ಆರೋಗ್ಯದ ವಿಚಾರದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ರೂಢಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಲಾಗಿದೆ. ಇದರಲ್ಲಿ ಕೈ ತೊಳೆಯುವ ಅಭ್ಯಾಸಗಳನ್ನು ಅಳವಳಡಿಸಿಕೊಳ್ಳಲು ಹಲವು ವಾರ ಬೇಕಾಗುತ್ತದೆ ಎಂಬುದನ್ನು ತಿಳಿಸಲಾಗಿದೆ.

ಈ ಕುರಿತು ಚಿಕಾಗೋ ವಿಶ್ವವಿದ್ಯಾಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಶಿಯೋಮಿನ್​ ಲಿ ಸೇರಿದಂತೆ ಹಲವು ಪ್ರೊಫೆಸರ್​ಗಳು ಅಧ್ಯಯನ ನಡೆಸಿದ್ದಾರೆ. ಈ ವೇಳೆ ಯಾವುದೇ ಅಭ್ಯಾಸ ಕರಗತವಾಗಲು ಅಥವಾ ಅದಕ್ಕೆ ಹೊಂದಿಕೊಳ್ಳಲು ಇಂತಿಷ್ಟೆ ಸಮಯ ಎಂದು ನಿಖರವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಅದಕ್ಕೆ ಯಾವುದೇ ಮ್ಯಾಜಿಕ್​ ನಂಬರ್​ ಇಲ್ಲ ಎಂದು ಎಚ್​ಇಸಿ ಪ್ಯಾರಿಸ್​ನಲ್ಲಿ ಮಾರ್ಕೆಟಿಂಗ್​ ಅಸಿಸ್ಟೆಂಡ್​ ಪ್ರೊಫೆಸರ್​ ಅನಸ್ತಾಸಿಯಾ ಬುಯಲ್ಸಕಯಾ ತಿಳಿಸಿದ್ದಾರೆ.

ಸಾಮಾನ್ಯವಾಗಿ ಈ ರೀತಿಯ ಅಭ್ಯಾಸ ರೂಪುಗೊಳ್ಳಲು 21 ದಿನವಾಗುತ್ತದೆ ಎಂದು ಕೇಳಿರುತ್ತೇವೆ. ಆದರೆ, ಈ ಅಂದಾಜುಗಳು ವೈಜ್ಞಾನಿಕತೆ ಆಧಾರದ ಮೇಲೆ ರೂಪಿಸಿಲ್ಲ ಎಂದು ಕ್ಯಾಮರರ್​ ಹೇಳುತ್ತಾರೆ. ನಡುವಳಿಕೆ ಮತ್ತು ವಿವಿಧ ಅಂಶಗಳ ಪ್ರಕಾರ ಇಂತಹ ಅಭ್ಯಾಸಗಳ ರಚನೆಯ ವೇಗವು ವಿಭಿನ್ನವಾಗಿರುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ಅಧ್ಯಯನ ನಡೆಸಲು ಯಂತ್ರ ಕಲಿಕೆಯ ಸಾಧನವನ್ನು ಬಳಕೆ ಮಾಡಲಾಗಿದೆ. ಈ ತಂತ್ರವನ್ನು ಬಳಕೆ ಮಾಡಿದ ಮೊದಲ ಅಧ್ಯಯನ ಇದಾಗಿದೆ. ಜಿಮ್​ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಬ್ಯಾಡ್ಜ್​ಗಳನ್ನು ಸ್ವೈಪ್​ ಮಾಡುವುದು ಅಥವಾ ಆಸ್ಪತ್ರೆಯ ಶಿಫ್ಟ್​ಗಳ ಸಮಯದಲ್ಲಿ ಕೈ ತೊಳೆಯುವ ಹಲವು ಜನರ ಡೇಟಾ ಸೆಟ್​ಗಳನ್ನು ಈ ಅಧ್ಯಯನಕ್ಕೆ ಬಳಕೆ ಮಾಡಲಾಗಿದೆ.

ಈ ಅಭ್ಯಾಸಗಳ ಮೇಲ್ವಿಚಾರಣೆಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್​ ತಂತ್ರಜ್ಞಾನವನ್ನು ಬಳಸ ಲಾಗಿದೆ. ನಾಲ್ಕು ವರ್ಷಗಳ ಕಾಲ 30 ಸಾವಿರಕ್ಕೂ ಹೆಚ್ಚು ಜಿಮ್​ ಅಭ್ಯಾಸ ನಡೆಸುವ ಮತ್ತು 100 ಶಿಫ್ಟ್​ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 3000ಕ್ಕೂ ಹೆಚ್ಚು ಆಸ್ಪತ್ರೆ ಸಿಬ್ಬಂದಿಯನ್ನು ವಿಶ್ಲೇಷಿಸಲಾಗಿದೆ.

ಈ ಫಲಿತಾಂಶದಲ್ಲಿ ಜಿಮ್​ಗೆ ಹೋಗುವವರು ಜಿಮ್​ ಅಭ್ಯಾಸದ ಕೆಲವು ಅಸ್ಥಿರ ಸಮಯದ ಹೊರತಾಗಿ ಅವರು ತಮ್ಮ ಅಭ್ಯಾಸ ತಪ್ಪಿಸುವುದಿಲ್ಲ. ಶೇ 76ರಷ್ಟು ಜಿಮ್​ಗೆ ಹೋಗುವವರು ಮತ್ತೆ ಹೋಗುತ್ತಾರೆ. ಇನ್ನು ಶೇ 69ರಷ್ಟು ಮಂದಿ ವಾರದಲ್ಲಿ ಒಂದೇ ದಿನ ಜಿಮ್​ಗೆ ಹೋಗುವ ಸಾಧ್ಯತೆಗಳಿವೆ.

ಕೈ ತೊಳೆಯುವ ಅಭ್ಯಾಸದಲ್ಲೂ ಕೂಡ ಕೆಲವು ಆರೋಗ್ಯ ಕಾರ್ಯಕರ್ತರು ಈಗಾಗಲೇ ಈ ಅಭ್ಯಾಸ ಹೊಂದಿದ್ದರೂ ಅವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಆದಾಗ್ಯೂ ಈ ತಂತ್ರಜ್ಞಾನವನ್ನು ಬಳಸುವ ಸಮಯದಲ್ಲಿ ತಮ್ಮ ಅಭ್ಯಾಸ ಮರು ನಿರ್ಮಾಣ ಮಾಡಬೇಕಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ಪಾರ್ಕಿನ್ಸನ್​ ಕಾಯಿಲೆಗೆ ತುತ್ತಾದ ಪ್ರಮುಖ ವ್ಯಕ್ತಿಗಳಿವರು..: ರೋಗದ ಕುರಿತು ಬೇಕಿದೆ ಅರಿವು

Last Updated : Apr 18, 2023, 1:12 PM IST

ABOUT THE AUTHOR

...view details