ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಅಕ್ಸಿಜನ್ ಗ್ರಿಡ್ ನೀಲನಕ್ಷೆಯನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಮಿಷನರ್ ಡಿ. ರಂದೀಪ ಬಿಡುಗಡೆ ಮಾಡಿದರು. ವೈದ್ಯಕೀಯ ಅಮ್ಲಜನಕದ ಕೊರತೆಯ ವಿನ್ಯಾಸವನ್ನು ಈ ವರದಿ ವಿವರಿಸುತ್ತದೆ.
ಆಕ್ಸಿಜನ್ ಬಾಲ್ ಐಡಿಯಾ ಅಭಿಯಾನವನ್ನು ಬೆಂಬಲಿಸುವ ವರದಿ ವೈದ್ಯಕೀಯ, ಆಮ್ಲಜನಕದ ಸಕಾಲಿಕ, ಲಭ್ಯತೆಯನ್ನು ಖಚಿತ ಪಡಿಸುತ್ತದೆ. ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳು, ಗರ್ಭಿಣಿಯರು, ಹೃದಯರಕ್ತನಾಳ ಕಾಯಿಲೆ ರೋಗಿಗಳ ಜೀವಗಳನ್ನು ಉಳಿಸಬಹುದಾಗಿದೆ. ವರದಿಯು ಭಾರತದ ಪ್ರಸ್ತುತ ಮತ್ತು ಭವಿಷ್ಯದ ವೈದ್ಯಕೀಯ ಆಮ್ಲಜನಕದ ಅಗತ್ಯತೆಗಳ ಸಮಗ್ರ ಮೌಲ್ಯಮಾಪನ ಮತ್ತು ರಾಷ್ಟ್ರೀಯ ವೈದ್ಯಕೀಯ ಆಕ್ಸಿಜನ್ ವಿನ್ಯಾಸ ಮತ್ತು ಅನುಷ್ಠಾನವನ್ನು ಪ್ರಸ್ತುತಪಡಿಸುತ್ತದೆ.
ಸದ್ಯ 19,000 ಮೆಟ್ರಿಕ್ ಟನ್ ಆಮ್ಲಜನಕದ ಉತ್ಪಾದನೆ: ಕೋವಿಡ್ 19 ಸಾಂಕ್ರಾಮಿಕದ ಎರಡನೇ ವೇವ್ ಸಮಯದಲ್ಲಿ 17,000 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕದ ಅಗತ್ಯ ಪೂರೈಸಲು ಸಾಧ್ಯವಾಗಲಿಲ್ಲ. ಸಾಂಕ್ರಾಮಿಕ ರೋಗದ ಎರಡನೇ ತರಂಗದ ಸಮಯದಲ್ಲಿ 9000 ಮೆಟ್ರಿಕ್ ಟನ್ ಮಾತ್ರ ಸಾಮರ್ಥ್ಯವಿತ್ತು. ಹೀಗಾಗಿ ಪೂರ್ತಿ ಅಗತ್ಯವನ್ನು ಪೂರೈಸಲು ಸಾಧ್ಯವಾಗಿರಲಿಲ್ಲ. ಈಗ ರಾಷ್ಟ್ರವ್ಯಾಪಿ ಆಮ್ಲಜನಕದ ಉತ್ಪಾದನೆ 19,000 ಮೆಟ್ರಿಕ್ ಟನ್ ಎಂದು ಅಂದಾಜಿಸಲಾಗಿದೆ.
ಪಿಎಂ ಕೇರ್ ಯೋಜನೆಯಡಿಯಲ್ಲಿ ಗ್ರಿಡ್ ಅಭಿವೃದ್ದಿ: ಭವಿಷ್ಯದಲ್ಲಿ ಸಂಭವನೀಯ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ದೇಶವನ್ನು ಸಜ್ಜುಗೊಳಿಸಲು ಪ್ರಧಾನ ಮಂತ್ರಿ (ಪಿಎಂ) ಕೇರ್ ಯೋಜನೆಯಡಿಯಲ್ಲಿ ಭಾರತದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಹಲವಾರು ಅಮ್ಲಜನಕ ಉತ್ಪಾದನೆ ಮತ್ತು ಪೂರೈಕೆ ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು. ಅಸ್ತಿತ್ವದಲ್ಲಿರುವ ಸ್ಥಾವರಗಳಲ್ಲಿ ಉತ್ಪಾದನೆ ಹೆಚ್ಚಿಸುವುದು ಮೂಲ ಉದ್ದೇಶವಾಗಿದೆ.
ಏನಿದು ರಾಷ್ಟ್ರೀಯ ವೈದ್ಯಕೀಯ ಅಕ್ಸಿಜನ್ ಗ್ರಿಡ್ ಪ್ರಿಂಟ್:ವೈದ್ಯಕೀಯ ಆಮ್ಲಜನಕದ ಬಳಕೆಯ ಕೊರತೆ, ವಿಶೇಷವಾಗಿ ಪ್ರಮುಖ ನಗರಗಳ ಹೊರಗೆ ಪೂರೈಕೆಯ ಕೊರತೆ ಮತ್ತು ವೈದ್ಯಕೀಯ ಆಮ್ಲಜನಕವನ್ನು ಬಳಸಲು ಮತ್ತು ಸಿಬ್ಬಂದಿಗಳ ಕೊರತೆಯನ್ನು ಸೂಚಿಸುತ್ತದೆ. ವರದಿಯು ಸಮಸ್ಯೆಯನ್ನು ಪರಿಹರಿಸಲು ಮತ್ತು ಸಾಮಾನ್ಯ ಸಮಯದಲ್ಲಿ ದೇಶದ ಮೂಲೆಗಳಲ್ಲಿ ಆಮ್ಲಜನಕವು ವ್ಯಾಪಕವಾಗಿರುವುದನ್ನು ಮತ್ತು ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಭವಿಷ್ಯದ ಯಾವುದೇ ಬಿಕ್ಕಟ್ಟಿಗೆ ಮೂಲಸೌಕರ್ಯ ಸಿದ್ಧಪಡಿಸುವುದಾಗಿದೆ.
ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಹೆಚ್ಚುವರಿ ಕೊರತೆಯ ಪ್ರದೇಶಗಳಿಗೆ ಸುಗಮ ಹರಿವನ್ನು ಸರಾಗಗೊಳಿಸುವುದಾಗಿದೆ. ಸಾರ್ವಜನಿಕ ಸಹಭಾಗಿತ್ವದ ಮಾದರಿಗಳು ಸ್ವಾವಲಂಬನೆಯು ಸಾಧನೆಗೆ ಅನಿವಾರ್ಯವೆಂದು ವರದಿಯಲ್ಲಿ ಪರಿಗಣಿಸಲಾಗಿದೆ.