ಚಿಕಾಗೋ:ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಅವಧಿಯಲ್ಲಿ ಮತ್ತು ಪ್ರಚಾರದ ವೇಳೆ ಈ ನಾರ್ಸಿಸಮ್ ಎಂಬ ಪದ ಹೆಚ್ಚಾಗಿ ಪ್ರಚಲಿತಕ್ಕೆ ಬಂದಿತು. ಇತ್ತೀಚೆಗೆ ಸಾಮಾಜಿಕ ಜಾಲತಾಣ ಮತ್ತು ಪತ್ರಿಕೆಗಳಲ್ಲೂ ಕೂಡ ಈ ಪದ ಹೆಚ್ಚು ಜನಪ್ರಿಯವಾಗುತ್ತಿದೆ. ಫಲಿತಾಂಶವಾಗಿ ಸಾಮಾಜಿಕ ಜಾಲತಾಣ ಮತ್ತು ಇತರ ಆನ್ಲೈನ್ ತಾಣ ಈ ಕುರಿತ ಒಳನಾಟ, ಸಲಹೆ, ಕಥೆ ಮತ್ತು ಥಿಯರಿಗಳನ್ನು ಬಿಂಬಿಸುತ್ತಿದೆ. ಈ ಮೂಲಕ ನಾರ್ಸಿಸಿಸ್ಟ್ಗಳೊಂದಿಗಿನ ಸಂಬಂಧ ಅಥವಾ ಅದನ್ನು ಹೊಂದಿರುವ ಲಕ್ಷಣದ ಕುರಿತು ತಿಳಿಸುತ್ತಿವೆ.
ನಾರ್ಸಿಸಮ್ ಎಂಬ ಪದದ ಅರ್ಥ ಹುಡುಕುವುದಾದರೆ, ಅಹಂಕಾರಿ ಮತ್ತು ಸ್ವಯಂ ಪ್ರಜ್ಞೆ ಹೊಂದಿರುವವರು ಎಂದು. ಈ ನಾರ್ಸಿಸ್ಟ್ ಗುಣಲಕ್ಷಣ ವ್ಯಕ್ತಿತ್ವ ಹೊಂದಿರುವರು ನಾರ್ಸಿಸ್ಟ್ ವ್ಯಕ್ತಿತ್ವದ ಸಮಸ್ಯೆ ಎಂದು ಕರೆಯಲಾಗುವುದು. ಕಳೆದ ದಶಕದಲ್ಲಿ ಸಾಮಾಜಿಕ ನೆಟ್‌ವರ್ಕಿಂಗ್ ಜಾಲತಾಣದಲ್ಲಿ ಜನರು ಸಂವಹನ ಮಾಡುವ ವಿಧಾನದಲ್ಲಿ ಆಳವಾದ ಬದಲಾವಣೆಗಳನ್ನು ಕಾಣಬಹುದಾಗಿದೆ.
ಸಾಮಾಜಿಕ ಮಾಧ್ಯಮ ಜಾಲತಾಣಗಳಾದ ಫೇಸ್ಬುಕ್, ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಈ ನಾರ್ಸಿಸಿಸ್ಟಿಕ್ ಅನುಭವವನ್ನು ಕಾಣಬಹುದಾಗಿದೆ. ಎರಡನೇಯದು, ಸ್ವಯಂ ಅಭಿವ್ಯಕ್ತಿ ವಿಷಯ, ಚಿತ್ರ, ಸ್ಟೇಟಸ್, ರಜಾದಿನಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುವುದು. ಅಷ್ಟೇ ಅಲ್ಲದೇ, ಈ ಕುರಿತು ತಮ್ಮ ಅನುಯಾಯಿಗಳಿಂದ ಇಷ್ಟಗಳು ಮತ್ತು ಬಲಪಡಿಸುವ ಕಾಮೆಂಟ್‌ಗಳ ರೂಪದಲ್ಲಿ ತಕ್ಷಣದ ಪ್ರತಿಕ್ರಿಯೆಯನ್ನು ಪಡೆಯಬಹುದು.
ದಂಪತಿಗಳು ಮತ್ತು ಕುಟುಂಬ ಚಿಕಿತ್ಸಕರಾಗಿ, ನಾರ್ಸಿಸಿಸ್ಟಿಕ್ ವ್ಯಕ್ತಿತ್ವ ಅಸ್ವಸ್ಥತೆಯ ವಲಯದಲ್ಲಿರುವವರು ಹೇಗೆ ಕೆಲಸ ಮಾಡುತ್ತಾರೆ. ನಾರ್ಸಿಸಿಸ್ಟಿಕ್ ಚಿಕಿತ್ಸೆ ನೀಡುವುದು ಎಷ್ಟು ಸವಾಲಿನ ಕೆಲಸ ಎಂಬ ಬಗ್ಗೆ ಕುರಿತು ಅಧ್ಯಯನ ತಿಳಿಸಿದೆ. ಈ ವೇಳೆ ನಾರ್ಸಿಸ್ ಮನೋಭಾವ ಹೊಂದಿರುವ ವ್ಯಕ್ತಿ ತಮ್ಮ ಪಾಲುದಾರರನ್ನು ಅವರು ನಿಷ್ಕ್ರಿಯ ವ್ಯಕ್ತಿ ಎಂದು ಮನವೊಲಿಸುವಲ್ಲಿ ನಿಪುಣರಾಗಿರುತ್ತಾರೆ.
ನಾರ್ಸಿಸಮ್ ವ್ಯಾಖ್ಯಾನ: ಈ ಸಂಬಂಧ ವ್ಯಕ್ತಿತ್ವ ಅಸ್ವಸ್ಥತೆಗಳಲ್ಲಿ ಪರಿಣತಿ ಹೊಂದಿರುವ ಮನೋವೈದ್ಯರು ಡಾ. ಒಟ್ಟೊ ಕೆರ್ನ್‌ಬರ್ಗ್ ತಿಳಿಸಿದ್ದಾರೆ. ಇವರು ವ್ಯಕ್ತಿಯ ಮೌಲ್ಯಮಾಪನ ಮಾಡುವ ಚೌಕಟ್ಟನ್ನು ಬಳಸಿಕೊಂಡು ಸಾಮಾನ್ಯ ಮತ್ತು ರೋಗಶಾಸ್ತ್ರೀಯ ನಾರ್ಸಿಸಿಸಮ್ ಅನ್ನು ಪ್ರತ್ಯೇಕಿಸುತ್ತಾರೆ. ಸಾಮಾನ್ಯ ನಾರ್ಸಿಸಿಸಮ್ ಎನ್ನುವುದು ಉತ್ತಮ-ಸಂಯೋಜಿತ ಸ್ವಯಂ ಪ್ರಜ್ಞೆಯನ್ನು ಸೂಚಿಸುತ್ತದೆ. ಉದಾಹರಣೆಗೆ ತನ್ನಲ್ಲಿ ಆರೋಗ್ಯಕರ ಪ್ರಜ್ಞೆ ಮತ್ತು ಒಬ್ಬರ ಸಾಧನೆಗಳ ಬಗ್ಗೆ ಹೆಮ್ಮೆ ಹೊಂದಿರುವುದು. ನಾರ್ಸಿಸಿಸ್ಟಿಕ್ ಪಾಲುದಾರರಿಗೆ ಚಿಕಿತ್ಸೆ ನೀಡಲು ಸವಾಲಾಗಿರುವ ಒಂದು ಕಾರಣವೆಂದರೆ, ತಮ್ಮ ಪಾಲುದಾರರನ್ನು ಅವರು ನಿಷ್ಕ್ರಿಯ ವ್ಯಕ್ತಿ ಎಂದು ಪ್ರತಿಪಾದಿಸುವುದು.
ಕಾಮನ್ ಆಗಿದ್ದಾಗ ಎಲ್ಲವೂ ಸುಲಲಿತ ಹಾಗೂ ಆರೋಗ್ಯಕರ: ನಾರ್ಸಿಸಿಸಮ್ ಕೀಳರಿಮೆ ಮತ್ತು ವೈಫಲ್ಯದ ಭಾವನೆಗಳ ನಡುವೆ ತೀವ್ರ ಏರಿಳಿತಗಳ ನಡುವೆ ಶ್ರೇಷ್ಠತೆಯ ಭಾವನೆಯೊಂದಿಗೆ ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯು ಸ್ವಲ್ಪ ಸಾಮಾನ್ಯ ನಾರ್ಸಿಸಿಸಮ್ ಹೊಂದಿರುತ್ತಾನೆ. ಇದು ಸಹಾನುಭೂತಿ ಮತ್ತು ಭಾವನೆಯನ್ನು ಪ್ರದರ್ಶಿಸುವಾಗ ಆತ್ಮ ವಿಶ್ವಾಸ ಒಂದು ಸಣ್ಣ ರೂಪದಲ್ಲಿರುತ್ತದೆ.