ಲಂಡನ್: ಸಂಗೀತ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ ನೆಮ್ಮದಿ ಭಾವ ಮೂಡಿಸುತ್ತವೆ ಎಂಬುದು ಈಗಾಗಲೇ ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಮಾನಸಿಕ ಆರೋಗ್ಯ ವಿಚಾರದಲ್ಲಿ ಸಂಗೀತವೂ ಹೆಚ್ಚಿನ ಪ್ರಭಾವ ಹೊಂದಿದೆ. ಈ ಸಂಬಂಧ ಇತ್ತೀಚಿಗೆ ನಡೆಸಿದ ಮತ್ತೊಂದು ಅಧ್ಯಯನದಲ್ಲಿ ಯುವ ಜನತೆಯ ಮನಸ್ಥಿತಿ ಮತ್ತು ಯೋಗಕ್ಷೇಮದ ಮೇಲೆ ಇತರರಿಗಿಂತ ಕೆಲವು ಸಂಗೀತಗಾರರು ಸಕಾರಾತ್ಮಕ ಪರಿಣಾಮವನ್ನು ಬೀರುತ್ತಾರೆ. ಅದರಲ್ಲೂ ಅಮೆರಿಕದ ಸಂಗೀತ ಮತ್ತು ಸಾಹಿತ್ಯಗಾರ್ತಿ ಟೈಲರ್ ಸ್ವಿಫ್ಟ್ ಹೆಚ್ಚಿನ ಪ್ರಭಾವವನ್ನು ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಸ್ವಿಫ್ಟ್ ಸಂಗೀತದಿಂದ ಶೇ 32ರಷ್ಟು ಮಂದಿ ಸಕಾರಾತ್ಮಕ ಪರಿಣಾಮಕ್ಕೆ ಒಳಗಾಗುವುದಾಗಿ ತಿಳಿಸಿದರೆ, ಬ್ರಿಟಿಷ್ ಹಾಡುಗಾರ ಮತ್ತು ಸಾಹಿತ್ಯ ರಚನೆಗಾರ ಎಡ್ ಶೇರಿನ್ ಅವರಿಂದ ಶೇ 28ರಷ್ಟು ಮಂದಿ ಪ್ರಭಾವಕ್ಕೆ ಒಳಗಾಗುವುದಾಗಿ ತಿಳಿಸಿದ್ದಾರೆ.
ಸಂಗೀತ ಮತ್ತು ಮಾನಸಿಕ ಆರೋಗ್ಯ: ಒ2 ಅರೆನಾ ಈ ಸಂಬಂಧ ಸಂಶೋಧನೆ ನಡೆಸಿದೆ. ಇದರಲ್ಲಿ ಶೇ 80ರಷ್ಟು ಮಂದಿ ಸಂಗೀತದ ಲೈವ್ ಈವೆಂಟ್ (ನೇರ ಕಾರ್ಯಕ್ರಮಗಳು) ಪ್ರಭಾವ ಬೀರುವುದಾಗಿ ತಿಳಿಸಿದ್ದು, ಇದು ತಮ್ಮ ಮನಸ್ಥಿತಿ ಮತ್ತು ಯೋಗಕ್ಷೇಮವನ್ನು ಸುಧಾರಿಸುತ್ತವೆ ಎಂದು ಒಪ್ಪಿಕೊಂಡಿದ್ದಾರೆ.
ಜೊತೆಗೆ ಶೇ 20ರಷ್ಟು ಮಂದಿ ಇಂತಹ ಮ್ಯೂಸಿಕಲ್ ಲೈವ್ ಈವೆಂಟ್ನಲ್ಲಿ ಭಾಗಿಯಾಗುವುದರಿಂದ ಇದು ತಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಇಂತಹ ಕಾರ್ಯಕ್ರಮಗಳಿಂದ ಮನೋಲ್ಲಾಸ ಉಂಟಾಗುತ್ತದೆ ಎಂದಿದ್ದಾರೆ. ಇನ್ನು ಶೇ 27ರಷ್ಟು ಮಂದಿ ಇಂತಹ ಕಾರ್ಯಕ್ರಮದಲ್ಲಿ ತಾವು ಜಗತ್ತನ್ನೇ ಮರೆತು ಸಂಗೀತದಲ್ಲಿ ತಲ್ಲೀನರಾಗುವುದಾಗಿ ತಿಳಿಸಿದ್ದಾರೆ.