ಚಂಡೀಗಢ: ಪಂಜಾಬ್ನಲ್ಲಿ ತಾಯಂದಿರ ಸಾವಿನ ಪ್ರಮಾಣದಲ್ಲಿ ದಿಢೀರ್ ಏರಿಕೆಯಾಗಿದ್ದು, ಈ ಅಂಕಿ ಅಂಶಗಳು ಆರೋಗ್ಯ ಇಲಾಖೆಗೆ ಹೊಸ ಸವಾಲು ಜೊತೆಗೆ ಆತಂಕ ಮೂಡಿಸಿದೆ. ಅಂಕಿ - ಅಂಶಗಳ ಪ್ರಕಾರ, ಕಳೆದ ಮೂರು ತಿಂಗಳಿನಿಂದ 87ರಷ್ಟು ತಾಯಂದಿರು ಸಾವನ್ನಪ್ಪಿದ್ದು, ಇದರಲ್ಲಿ ಒಬ್ಬರು ಅಪ್ರಾಪ್ತರಾಗಿದ್ದಾರೆ. ಪಂಜಾನ್ನ ನಾಲ್ಕು ಜಿಲ್ಲೆಗಳಲ್ಲಿ ಈ ಸಾವಿನ ಪ್ರಕರಣ ಹೆಚ್ಚಾಗಿದ್ದು, ಇದನ್ನು ತಡೆಟ್ಟುವ ಕ್ರಮ ಇನ್ನೂ ಪಂಜಾಬ್ ಆರೋಗ್ಯ ವ್ಯವಸ್ಥೆಯಿಂದ ಆಗಿಲ್ಲ. ಪಂಜಾಬ್ ಸರ್ಕಾರ ಆರೋಗ್ಯ ವಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದಾಗಿ ತಿಳಿಸಿದರೂ ಗರ್ಭಿಣಿಯರ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡಿಲ್ಲ.
ಅಮೃತ್ಸರದಲ್ಲಿ ಹೆಚ್ಚಿನ ಸಾವು: ರಾಜ್ಯದ ಅಮೃತಸರ ಜಿಲ್ಲೆಯಲ್ಲಿ ಅತಿ ಹೆಚ್ಚು ತಾಯಂದಿರ ಸಾವು ವರದಿಯಾಗಿದೆ. ಮೇಲಿನ ಅಂಕಿ - ಅಂಶದಲ್ಲಿ 13 ಸಾವು ಇಲ್ಲಿ ದಾಖಲಾಗಿದ್ದು, 10 ತರ್ನ್ ತರನ್ ದಾಖಲಾದರೆ, 7 ಗರ್ಭಿಣಿಯರು ಫಿರೋಜ್ಪುರ್ ಮತ್ತು ಗುರುದಾಸ್ಪುರ್ನಲ್ಲಿ ಮೃತಪಟ್ಟಿದ್ದಾರೆ ಎಂದು ದಾಖಲಾಗಿದೆ. ಈ ಎರಡು ಜಿಲ್ಲೆಗಳು ಗಡಿ ಜಿಲ್ಲೆಗಳಾಗಿದ್ದು, ಇಲ್ಲಿನ ಆರೋಗ್ಯ ವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡಿಸುತ್ತಿದೆ. ಈ ಅಂಕಿ - ಅಂಶಗಳು ಇದೀಗ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯನ್ನು ಬಾರಿಸಿವೆ.
ಸರ್ಕಾರಿ- ಖಾಸಗಿ ಆಸ್ಪತ್ರೆಗಳೆರಡರಲ್ಲೂ ಸಾವು: 87 ಸಾವುಗಳಲ್ಲಿ ಒಂದು ಸಾವು 17 ವರ್ಷದ ಅಪ್ರಾಪ್ತೆಯಾದ್ದಾಗಿದ್ದು, ದೊಡ್ಡ ಪ್ರಶ್ನೆ ಮೂಡಿಸಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಎರಡರಲ್ಲೂ ಈ ಸಾವಿನ ವರದಿ ಆಗಿದೆ. ಅಮೃತ್ಸರದ ಮೆಡಿಕಲ್ ಕಾಲೇಜಿನಲ್ಲಿ 16 ಸಾವು ಸಂಭವಿಸಿದೆ, ಇದರಲ್ಲಿ 8 ಮಂದಿ ಪ್ರಸವದ ಬಳಿಕ ಸಾವನ್ನಪ್ಪಿದರೆ, 8 ಮಂದಿ ಪ್ರಸವದ ವೇಳೆ ಸಾವನ್ನಪ್ಪಿದ್ದಾರೆ