ಕರ್ನಾಟಕ

karnataka

ETV Bharat / sukhibhava

ಮಕ್ಕಳಲ್ಲಿ ಹೃದಯಾಘಾತ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಜಂಕ್​ ಫುಡ್​: ವೈದ್ಯರು - ಸಾಕಷ್ಟು ಆತಂಕ ಮೂಡಿಸಿದೆ

ನಮ್ಮ ದೇಶದಲ್ಲಿ ಇದೀಗ ಫಾಸ್ಟ್​ ಫುಡ್​ ಸಂಸ್ಕೃತಿ ಬೆಳೆಯುತ್ತಿದೆ. ಇದೇ ಇಂದು ಮಕ್ಕಳಲ್ಲಿ ಈ ಗಂಭೀರ ಪರಿಸ್ಥಿತಿ ಉಂಟಾಗಲು ಕಾರಣವಾಗಿದೆ

Junk food causes heart attack in children; Doctor
Junk food causes heart attack in children; Doctor

By

Published : Jun 6, 2023, 10:27 AM IST

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳು ಕೂಡ ಹೃದಯಾಘಾತಕ್ಕೆ ಒಳಗಾಗುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಇದು ಸಾಕಷ್ಟು ಆತಂಕ ಮೂಡಿಸಿದೆ. ಶಾಲಾ ಮಕ್ಕಳಲ್ಲಿ ಹೃದಯಾಘಾತ ಸಂಭವಿಸುತ್ತಿರುವುದಕ್ಕೆ ಕಾರಣ ಜಂಕ್​ ಫುಡ್​ ಸೇವನೆ ಮತ್ತು ಕಡಿಮೆ ದೈಹಿಕ ಚಟುವಟಿಕೆ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನಮ್ಮ ದೇಶದಲ್ಲಿ ಇದೀಗ ಫಾಸ್ಟ್​ ಫುಡ್​ ಸಂಸ್ಕೃತಿ ಬೆಳೆಯುತ್ತಿದೆ. ಇದೇ ಇಂದು ಮಕ್ಕಳಲ್ಲಿ ಈ ಗಂಭೀರ ಪರಿಸ್ಥಿತಿ ಉಂಟಾಗಲು ಕಾರಣವಾಗಿದೆ ಎಂದು ಶ್ರೀ ಗಂಗಾ ರಾಮ್​ ಹಾಸ್ಪಿಟಲ್​ನ ಮಕ್ಕಳ ಹೃದಯರೋಗತಜ್ಞರಾದ ಡಾ ನೀರಜ್​​ ಅಗರ್ವಾಲ್​ ತಿಳಿಸಿದ್ದಾರೆ.

ಜೀವನಶೈಲಿ ಬದಲಾವಣೆ: ಮಕ್ಕಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಿನ ಮಟ್ಟದಲ್ಲಿ ಇಲ್ಲ. ಆದರೆ, ಮಕ್ಕಳಲ್ಲಿ ಸ್ಥೂಲಕಾಯ ಮತ್ತು ಆಲಸ್ಯಕರ ಜೀವನಶೈಲಿ ಹೆಚ್ಚುತ್ತಿದೆ. ಇದರಿಂದ ಹೃದಯಾಘಾತದ ಅಪಾಯ ಹೆಚ್ಚುತ್ತಿದೆ ಎಂದು ಗುರುಗ್ರಾಮದ ಮತ್ತೊಬ್ಬ ಮಕ್ಕಳ ಹೃದಯತಜ್ಞರಾದ ಡಾ ಅಮಿತ್​ ಮಿಸ್ರಿ ತಿಳಿಸಿದ್ದಾರೆ.

ಮಕ್ಕಳ ಜೀವನಶೈಲಿಯಲ್ಲಿ ಗಮನಾರ್ಹ ಬದಲಾವಣೆ ಆಗಿದೆ. ಮಕ್ಕಳು ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗುವುದಕ್ಕಿಂತ ಹೆಚ್ಚಾಗಿ ಆನ್​ಲೈನ್​ ಗೇಮ್ಸ್​ಗಳಲ್ಲು ಆಯ್ಕೆ ಮಾಡುತ್ತಿದ್ದಾರೆ. ಮೆಟ್ಟಿಲು ಬದಲು ಅವರು ಲಿಫ್ಟ್​ಗಳ ಬಳಕೆ ಮಾಡುತ್ತಿದ್ದಾರೆ.

ಮನೆಯಲ್ಲಿ ತಯಾರಿಸಿದ ಸಮತೋಲಿತ ಆಹಾರಕ್ಕಿಂತ ಅವರು ಹೊರಗಿನ ಆಹಾರಕ್ಕೆ ಮನ್ನಣೆ ನೀಡುತ್ತಿದ್ದಾರೆ. ಅವರ ಆಹಾರ ಆಯ್ಕೆ ಹೆಚ್ಚಾಗಿ ಕಾರ್ಬೋಹೈಡ್ರೇಟ್​ ಮತ್ತು ಕೊಬ್ಬಿನ ಆಹಾರ ಕಡೆ ಇದೆ. ಇದರಿಂದ ಸಂಗ್ರಹವಾಗುವ ಶಕ್ತಿಯನ್ನು ಅವರು ದೈಹಿಕ ಚಟುವಟಿಕೆ ಮೂಲಕ ವ್ಯಯ ಮಾಡುತ್ತಿಲ್ಲ. ಹೀಗಾಗಿ ಅವರಲ್ಲಿ ಸ್ಥೂಲಕಾಯ ಹೆಚ್ಚುತ್ತಿದೆ. ಇದು ಹೃದಯಾಘಾತದ ಅಪಾಯದ ಸಾಧ್ಯತೆಯನ್ನು ತರುತ್ತಿದೆ ಎಂದಿದ್ದಾರೆ.

ಕಳಪೆ ಆರೋಗ್ಯ ಶೈಲಿಯಿಂದಾಗಿ ಮಕ್ಕಳಲ್ಲಿ ಸುಸ್ತು, ಅಧಿಕ ರಕ್ತದೊತ್ತಡ ಜೊತೆಗೆ ಮಕ್ಕಳಲ್ಲಿ ಮಧುಮೇಹಕ್ಕೆ ಕೂಡ ಕಾರಣವಾಗಿದೆ. ಇದು ಎಲ್ಲ ಹೃದಯಾಘಾತದ ಅಪಾಯದ ಅಂಶಗಳಾಗಿವೆ. ಸಂಸ್ಕರಿತ ಆಹಾರಗಳು ಅತಿ ಹೆಚ್ಚು ಸಕ್ಕರೆ ಮತ್ತು ಉಪ್ಪಿನ ಅಂಶವನ್ನು ಹೊಂದಿದ್ದು, ಇವುಗಳ ಸೇವನೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಕುರಿತು ಅನೇಕ ಅಧ್ಯಯನಗಳು ನಡೆದಿದೆ. ಜೊತೆಗೆ ಆರೋಗ್ಯ ತಜ್ಞರು ಹೇಳುವಂತೆ ಮಕ್ಕಳಿಗೆ ಅನುವಂಶಿಕವಾಗಿ ಬಂದ ಕೆಲವು ಸಮಸ್ಯೆಗಳಿಂದ ಕೂಡ ಚಿಕ್ಕ ವಯಸ್ಸಿನಲ್ಲೇ ದಿಢೀರ್​ ಹೃದಯಾಘಾತದ ಸಾವಿಗೆ ಕಾರಣವಾಗಬಹುದು.

ಈ ರೋಗಿಗಳು ಆರ್ಹೆತ್ಮಿಯಾವನ್ನು (ಅಸಹಜ ಹೃದಯ ಬಡಿತ) ಹೊಂದಿರುತ್ತಾರೆ, ಇದು ಹಠಾತ್ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಕೋವಿಡ್​ ನಿಂದ ಚೇತರಿಕೆ ಕಂಡ ಮಕ್ಕಳಲ್ಲಿ ಹೃದಯದ ಕವಾಟದಲ್ಲಿ ಬ್ಲಾಕ್​ ಕಾಣಿಸಿದ್ದು, ಅವು ಕೂಡ ದಿಢೀರ್​ ಹೃದಯಾಘಾತಕ್ಕೆ ಕಾರಣವಾಗಿದೆ ಎಂದಿದ್ದಾರೆ ವೈದ್ಯರು.

ಕೋವಿಡ್​, ಡೆಂಘೀ ಮತ್ತು ಮಲೇರಿಯಾ ಕೂಡ ಮಕ್ಕಳ ಹೃದಯ ಸ್ನಾಯು ಮೇಲೆ ಗಂಭೀರ ಹಾನಿ ಮಾಡುತ್ತಿದ್ದು, ಹೃದಯ ವೈಫಲ್ಯಕ್ಕೆ ಕಾರಣವಾಗಿದೆ. ಇದರ ಹೊರತಾಗಿ ಕೆಲವು ವಂಶವಾಹಿನಿ ಅಥವಾ ಸಿಂಡ್ರೋಮ್​ ಡಿಸಾರ್ಡರ್​ ಕೂಡ ಕಾರಣವಾಗಬಹುದು.

ಇದನ್ನು ತಡೆಯಲು ಸಾಧ್ಯವೇ?:ಮಕ್ಕಳ ಜೀವನಶೈಲಿಯಲ್ಲಿ ಸರಿಯಾದ ವ್ಯಾಯಾಮದ ಅಭ್ಯಾಸ, ಸಮತೋಲಿತ ಆಹಾರ, ಕಡಿಮೆ ಸಕ್ಕರೆ, ಕಾರ್ಬೋಹೈಡ್ರೇಟ್​, ಕೊಬ್ಬಿಗೆ ಬದಲಾಗಿ ಹಣ್ಣುಗಳು ಅಥವಾ ಮನೆಯಲ್ಲಿ ತಯಾರಿಸಿ ಆಹಾರಗಳ ಸೇವನೆ ಪ್ರಮುಖ ಪಾತ್ರವಹಿಸುತ್ತದೆ. ಮಕ್ಕಳಿಗೆ ದಿನದಲ್ಲಿ ಕನಿಷ್ಟ 30ರಿಂದ 1 ಗಂಟೆ ದೈಹಿಕ ಚಟುವಟಿಕೆ ಅಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು. ಈಜು, ಸೈಕಲಿಂಗ್​ ಅಥವಾ ಇನ್ನಿತರೆ ಹೊರಾಂಗಣ ಚಟುವಟಿಕೆಯಲ್ಲಿ ಅವರನ್ನು ತಲ್ಲೀನರಾಗಿಸಬೇಕು.

ಪೋಷಕಾರ ಜೊತೆಯಲ್ಲಿಯೇ ಶಾಲೆಗಳು ಮತ್ತು ಶಿಕ್ಷಕರು ಕೂಡ ಮಕ್ಕಳಲ್ಲಿ ಆಟದ ಪಾತ್ರವನ್ನು ಅರಿತು ಅವರ ಜಢ ಜೀವಶೈಲಿಗೆ ಕತ್ತರಿ ಹಾಕಿ, ಆರೋಗ್ಯಯುತ ಚಟುವಟಿಕೆಯಲ್ಲಿ ಅವರನ್ನು ತೊಡಗಿಸಬೇಕು. ಜೊತೆಗೆ ಶಾಲೆಗಳಲ್ಲಿ ಅವರಿಗೆ ಜಂಕ್​ ಫುಡ್​​ ತರದಂತೆ ಅಥವಾ ಕ್ಯಾಂಟೀನ್​ನಲ್ಲಿ ಮಾರಾಟ ಮಾಡದಂತೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಆರೋಗ್ಯಯುತವಾಗಿ ಕಾಣುವ ಜ್ಯೂಸ್​ನಲ್ಲೂ ಯಥೇಚ್ಚ ಸಕ್ಕರೆ ಇರುತ್ತದೆ. ಮ್ಯಾಗಿ, ಕೋಲ್ಡ್​​ ಡ್ರಿಂಕ್​ಗಳಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್​ ಇರುತ್ತದೆ. ಈ ಹಿನ್ನೆಲೆ ಟೀಚರ್​ಗಳು ಕೂಡ ಮಕ್ಕಳಿಗೆ ಅನಾರೋಗ್ಯಕರ ಆಹಾರ ಸೇವನೆ ಮಾಡದಂತೆ ಶಿಕ್ಷಣ ನೀಡುವ ಅವಶ್ಯಕತೆ ಇದೆ.

ಇದನ್ನೂ ಓದಿ:ಮೆಡಿಟರೇನಿಯನ್ ಡಯಟ್​ನಿಂದ ಮೆದುಳಿನ ಯೌವನ ಕಾಪಾಡಬಹುದು: ಸಂಶೋಧನೆ

ABOUT THE AUTHOR

...view details