ಬ್ರೆಸಿಲಿಯಾ:ಅಮೆರಿಕ ಮೂಲದ ಬಹುರಾಷ್ಟ್ರೀಯ ಜಾನ್ಸನ್ ಅಂಡ್ ಜಾನ್ಸನ್ನ ಔಷಧೀಯ ವಿಭಾಗ ಜಾನ್ಸೆನ್ - ಸಿಲಾಗ್ ಕಂಪನಿಯು ಬ್ರೆಜಿಲ್‌ನಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಜಾನ್ಸನ್ ಕಂಪನಿ ತಯಾರಿಸಿರುವ ಕೋವಿಡ್ ಲಸಿಕೆಯ ಮೂರನೇ ಹಾಗೂ ಅಂತಿಮ ಹಂತದಲ್ಲಿ ಸುಮಾರು 60,000 ಜನರ ಮೇಲೆ ಕ್ಲಿನಿಕಲ್ ಪ್ರಯೋಗ ನಡೆಸಲಾಯಿತು. ಪ್ರಾಯೋಗಿಕ ಪರೀಕ್ಷೆಗೆ ಒಳಪಟ್ಟವರಿಗೆ ವಿವರಿಸಲಾಗದ ಕಾಯಿಲೆಗಳು ಕಾಣಿಸಿಕೊಂಡಿವೆ. ಹೀಗಾಗಿ, ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ನಿಯಂತ್ರಣ ಸಂಸ್ಥೆ ಬ್ರೆಜಿಲಿಯನ್ ಆರೋಗ್ಯ ಕಣ್ಗಾವಲು ಸಂಸ್ಥೆ (ಅನ್ವಿಸಾ) ತಿಳಿಸಿದೆ.
ವಿಎಸಿ 31518ಸಿಒವಿ 3001 ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವ ನಿರ್ಧರಿಸುವ ಪರೀಕ್ಷೆ ವೇಳೆ ವಿದೇಶದಲ್ಲಿ ಸ್ವಯಂ ಸೇವಕರಲ್ಲಿ ಗಂಭೀರವಾದ ಪ್ರತಿಕೂಲ ಲಕ್ಷಣಗಳು ಗೋಚರಿಸಿದ್ದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಾನ್ಸೆನ್ - ಸಿಲಾಗ್ ಅನ್ವಿಸಾಗೆ ಸೂಚಿಸಿದೆ.