ನವದೆಹಲಿ: ಡಯಟ್ ವಿಚಾರದಲ್ಲಿ ಒಬ್ಬಬ್ಬರದ್ದು ಒಂದೊಂದು ನಿಯಮ. ಕೆಲವರು ಚೆನ್ನಾಗಿ ಬೆಂದ ಪೌಷ್ಟಿಕಾಂಶಗಳನ್ನು ಸೇವಿಸಿದರೆ, ಮತ್ತೊಬ್ಬರು ಬಣ್ಣ ಬಣ್ಣದ ತರಕಾರಿ ಮತ್ತು ಹಣ್ಣುಗಳು, ಮಿಲೆಟ್ ಸೇರಿದಂತೆ ಅನೇಕ ಧಾನ್ಯಗಳಿಂದ ಕೂಡಿದ ಆಹಾರ, ಕಡಿಮೆ ಬೊಜ್ಜಿನ ಡೈರಿ ಐಟಂಗಳ ಜೊತೆಗೆ ಮೀನು ಮತ್ತು ಪೌಲ್ಟ್ರಿ ಉತ್ಪನ್ನಗಳನ್ನು ಆಯ್ಕೆ ಮಾಡುತ್ತಾರೆ
ಆರೋಗ್ಯವನ್ನು ಕಾಪಾಡಲು ಪ್ರತಿಯೊಂದು ಅಹಾರವೂ ಪ್ರಮುಖವಾಗಿದೆ. ಆದರೆ, ತಿನ್ನುವ ಪ್ರಮಾಣದಲ್ಲಿ ಕಾಳಜಿ ಇರುವುದು ಅವಶ್ಯ. ಇದೆ ಕಾರಣಕ್ಕೆ ತರಕಾರಿ ಮತ್ತು ಹಣ್ಣುಗಳ ಹೊರತಾಗಿ ಈ ಎಲ್ಲ ಆಹಾರಗಳನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಉತ್ತಮ ಎನ್ನಲಾಗುತ್ತದೆ. ಈ ರೀತಿಯ ವಿವಿಧ ಡಯಟ್ ನಿಯಮಗಳ ಅನುಸಾರ ಐಸಿಎಂಆರ್-ಎನ್ಐಎನ್ 2020 ಭಾರತೀಯರು ಏನನ್ನು ತಿನ್ನುತ್ತಾರೆ ಎಂಬುದರ ಕುರಿತು ವರದಿ ಮಾಡಿದ್ದು, ಹಲವು ಆಸಕ್ತಿಕರ ಸಂಗತಿಗಳನ್ನು ತಿಳಿಸಿದೆ. ಈ ಆರೋಗ್ಯಯುತ ಡಯಟ್ನಲ್ಲಿ ಕನಿಷ್ಠ ಐದು ಆಹಾರದ ಗುಂಪುಗಳನ್ನು ಕಾಣಬಹುದಾಗಿದೆ. ಇದರ ಹೊರಾತಾಗಿ ಅನೇಕ ಪದಾರ್ಥಗಳು, ಅಡುಗೆ ಪ್ರಕ್ರಿಯೆಗಳು ರುಚಿ, ಬಣ್ಣ, ಜೀರ್ಣಕ್ರಿಯೆ, ಹೀರುಕೊಳ್ಳಿವಿಬೆ ಮತ್ತು ಪೌಷ್ಟಿಕಾಂಶಯುಕ್ತ ಆಹಾರದಲ್ಲೂ ಪ್ರಮುಖ ಪಾತ್ರವಹಿಸುತ್ತದೆ.
ಅಡುಗೆ ಬೇಯಿಸುವ ವಿಧಾನದಲ್ಲಿ ಅನೇಕ ಮಂದಿ ಸ್ಟೂಯಿಂಗ್ (ಸೂಪ್ ರೀತಿಯ ಆಹಾರ) ಮತ್ತು ಸ್ಟೀಮಿಂಗ್ (ಬೇಯಿಸಿದ ಆಹಾರ)ಕ್ಕೆ ಹೆಚ್ಚಿನ ಸ್ಕೋರ್ ನೀಡಲಾಗಿದೆ. ಇದರ ಹೊರತಾಗಿ ಹುರಿದ (ಸಣ್ಣ ಪ್ರಮಾಣದ ಫ್ಯಾಟ್ ಹೊಂದಿರುವ ಹುರಿದ ಆಹಾರ) ಆಹಾರ ಕೂಡ ಆರೋಗ್ಯಕರ ಎಂದು ಸ್ವೀಕರಿಸಲಾಗಿದೆ ಎಂದು ಡಯಟೀಶನ್ ಮತ್ತು ವೆಲ್ನೆಸ್ ಸಮಾಲೋಚಕಿ ನೀಲಂಜನ್ ತಿಳಿಸಿದ್ದಾರೆ. ಪ್ರತಿಯೊಂದು ಅಡುಗೆ ಬೇಯಿಸುವ ವಿಧಾನದಲ್ಲಿ ಕೆಲವು ಪ್ರಯೋಜನ ಮತ್ತು ಗಡುವುಗಳಿರುತ್ತದೆ. ಈ ಮಾರ್ಗದರ್ಶನವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಆರೋಗ್ಯಕ್ಕೆ ಉತ್ತಮವಾಗಿದೆ ಎನ್ನುತ್ತಾರೆ ಅವರು.
ಸಣ್ಣ ಬೇಯಿಸುವ ವಿಧಾನ: ಯಾವುದೇ ಬೇಯಿಸುವ ವಿಧಾನವಿರಲಿ, ಅತಿಯಾಗಿ ಅದನ್ನು ಬೇಯಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು. ಅತಿ ಹೆಚ್ಚು ಬೇಯಿಸುವುದರಿಂದ ಅದರಲ್ಲಿನ ಪೋಷಕಾಂಶಗಳು ಜೊತೆಗೆ ಬಣ್ಣ ಮತ್ತು ಆಹಾರದ ಮೇಲ್ಕೆ ಬದಲಾಗುತ್ತದೆ. ಇದೇ ಕಾರಣಕ್ಕೆ ಕಡಿಮೆ ಸಮಯ ಬೇಯಿಸುವುದಕ್ಕೆ ಆದ್ಯತೆ ನೀಡಬೇಕು. ಇದಕ್ಕೆ ಪ್ರೆಷರ್ ಕುಕ್ಕಿಂಗ್ ಮತ್ತು ಮೈಕ್ರೋವೆವಿಂಗ್ ಉತ್ತಮ ಉದಾಹರಣೆಯಾಗಿದೆ.