ಬಹುತೇಕರ ಜೀವನದಲ್ಲಿ ಚಹಾಕ್ಕೆ ಮಹತ್ವದ ಸ್ಥಾನವಿದೆ. ಚಹಾ ಇಲ್ಲದೇ ಹಲವರ ದಿನಚರಿಯೇ ಶುರುವಾಗದು. ಬೆಳಗ್ಗೆದ್ದಾಗ ಚಹಾ ಕುಡಿದರೆ ಅದೇನೋ ಮನಸ್ಸಿಗೆ ಉಲ್ಲಾಸ. ಕೆಲವರಿಗಂತೂ ಚಹಾ ಅನ್ನುವುದು ಮೆಡಿಸಿನ್ ರೀತಿಯಲ್ಲೇ ಕೆಲಸ ಮಾಡುತ್ತದೆ. ಅದರಲ್ಲೂ ಭಾರತೀಯರಿಗೆ ಚಹಾ ಎಂಬ ಪಾನಕ ಬಹಳಷ್ಟು ಪ್ರಿಯ. ಪ್ರಮುಖ ಚಹಾ ಉತ್ಪಾದನಾ ದೇಶವಾಗಿರುವ ಭಾರತದಲ್ಲಿ ಇಂದು ಅಂತಾರಾಷ್ಟ್ರೀಯ ಚಹಾ ದಿನಾಚರಿಸುತ್ತಿದ್ದೇವೆ. ಇದರ ಸಲುವಾಗಿ ಕೆಲವೊಂದು ದೇಶಿ ಚಹಾದ ಬಗ್ಗೆ ತಿಳಿದುಕೊಳ್ಳೋಣ.
ಮಸಾಲ ಚಹಾ:ಭಾರತದಲ್ಲಿ ಅತೀ ಹೆಚ್ಚು ಜನರು ಚಹಾ ಇಷ್ಟಪಡುತ್ತಾರೆ. ಅದರಲ್ಲಂತೂ ಮಸಾಲ ಚಾಯ್(ಚಹಾ) ತುಂಬಾ ಸ್ಪೆಷಲ್. ಇದು ಹಾಲು, ಸಕ್ಕರೆ, ಶುಂಠಿ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಒಳಗೊಂಡಿರುತ್ತದೆ. ಚಹಾ ಕುದಿಯುತ್ತಿದ್ದಂತೆ ಅದರ ಸುವಾಸನೆ ಮನಸ್ಸಿಗೂ ಆಹ್ಲಾದಕರ.
ಕಾಶ್ಮೀರಿ ಕಹ್ವಾ: ಕಾಶ್ಮೀರಿ ಕಹ್ವಾ ಇದು ಕುಡಿಯಲು ಬಹಳ ಕಹಿ. ಆದರೆ ಕಹ್ವಾ ದೇಹವನ್ನು ಬೆಚ್ಚಗೆ ಮಾಡುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಕಾಶ್ಮೀರಿ ಗ್ರೀನ್ ಟೀ ಎಲೆಗಳ ಜೊತೆಗೆ ಕೇಸರಿ, ದಾಲ್ಚಿನ್ನಿ, ಗುಲಾಬಿ ಎಸಳು ಮತ್ತು ಏಲಕ್ಕಿಯನ್ನು ಬೆರೆಸಿ ಕಾಶ್ಮೀರಿ ಕಹ್ವಾ ಮಾಡಲಾಗುತ್ತದೆ. ಬೇಕಿದ್ದಲ್ಲಿ ಬಾದಾಮಿ ಮತ್ತು ಜೇನನ್ನೂ ಬಳಸಬಹುದು.