ಭಾರತದ ಆಹಾರ ಪದ್ಧತಿಯಲ್ಲಿ ಜಿಂಕ್, ಫೈಬರ್ ಹೆಚ್ಚಿರುತ್ತದೆ. ನಿಯಮಿತವಾಗಿ ಟೀ ಮತ್ತು ಆಹಾರದಲ್ಲಿ ಅರಿಶಿಣ ಸೇವಿಸುವುದರಿಂದ ಕೋವಿಡ್ ತೀವ್ರತೆ ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನ ಏಪ್ರಿಲ್ ಸಂಚಿಕೆ ಈ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಕೋವಿಡ್ 19 ಸಾಕ್ರಾಂಮಿಕತೆ ಸಮಯದಲ್ಲಿ, ಕಡಿಮೆ ಜನಸಂಖ್ಯೆಯುಳ್ಳ ಪಶ್ಚಿಮ ದೇಶಗಳಿಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ಸಾವಿನ ಪ್ರಕರಣ ಶೇ 5- 8 ರಷ್ಟು ಕಡಿಮೆ ವರದಿ ಆಗಿದೆ. ಭಾರತ, ಬ್ರೆಜಿಲ್, ಜೋರ್ಡಾನ್, ಸ್ವಿಜರ್ಲೆಂಡ್ ಮತ್ತು ಸೌದಿ ಅರೇಬಿಯಾ ಒಳಗೊಂಡ ಅಂತಾರಾಷ್ಟ್ರೀಯ ತಂಡ ಈ ಅಧ್ಯಯನ ನಡೆಸಿದೆ. ಭಾರತ ಮತ್ತು ಪಶ್ಚಿಮಾತ್ಯ ದೇಶಗಳ ಆಹಾರ ಪದ್ದತಿ ಅಭ್ಯಾಸಗಳು ಕೋವಿಡ್ 19 ತೀವ್ರತೆ ಮತ್ತು ಸಾವು ನಡುವಿನ ಸಂಬಂಧವನ್ನು ಅಧ್ಯಯನ ನಡೆಸಿದೆ.
ಭಾರತದಲ್ಲಿ ತೀವ್ರತೆ ಕಡಿಮೆ: ಪಾಶ್ಚಿಮಾತ್ಯ ಜನಸಂಖ್ಯೆಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ಕೋವಿಡ್ 19 ತೀವ್ರತೆ ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡುವಲ್ಲಿ ಆಹಾರ ಪದಾರ್ಥ ಪ್ರಮುಖ ಪಾತ್ರವಹಿಸಿದೆ ಎಂದು ಅಧ್ಯಯನ ತಿಳಿಸಿದೆ. ಆದಾಗ್ಯೂ, ಪ್ರಸ್ತುತ ಫಲಿತಾಂಶ ಬೆಂಬಲಿಸಲು ಹೆಚ್ಚಿನ ಬಹು ಕೇಂದ್ರಿತ ಪ್ರಕರಣದಲ್ಲಿ ನಿಯಂತ್ರಣ ಅಧ್ಯಯನ ಅವಶ್ಯಕತೆ ಇದೆ ಎಂದು ತಿಳಿಸಿದೆ.
ಭಾರತೀಯ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಕಬ್ಬಿಣ ಮತ್ತು ಜಿಂಕ್ ಇದೆ. ಅಲ್ಲದೇ ಸಮೃದ್ಧ ಫೈಬರ್ ಆಹಾರಗಳು ಇಂಗಾಲದ ಡೈ ಆಕ್ಸೆಡ್ ಮತ್ತು ಎಲ್ಪಿಎಸ್ ತಡೆಯುವಲ್ಲಿ ಪ್ರಮುಖವಾಗಿದೆ. ಈ ಎಲ್ಪಿಎಸ್ ಮಿದುಳಿನ ಉರಿಯೂತ ಪ್ರಚೋದಿಸಲು ಉರಿಯುತದ ಪ್ರಕ್ರಿಯೆಯಾಗಿದೆ.