ನವದೆಹಲಿ: ಜಾಗತಿಕ ಆರೋಗ್ಯ ಮೂಲ ಸೌಕರ್ಯ ಬಲ ಪಡಿಸುವುದು, ಆರೋಗ್ಯ ಒದಗಿಸುವುದು ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯಂತಹ ಮೂರು ಆರೋಗ್ಯ ಪ್ರಾಧಾನ್ಯತೆಗಳನ್ನು ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ದೇಶವು ಗುರುತಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ- ಪೂರ್ವ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಪೂನಂ ಕ್ಷೇತ್ರಪಾಲ್ ಸಿಂಗ್ ತಿಳಿಸಿದ್ದಾರೆ.
ವಿಡಿಯೋದಲ್ಲಿ ಈ ಕುರಿತು ಮಾತನಾಡಿರುವ ಅವರು, ಜಿ 20 ಅಧ್ಯಕ್ಷತೆ ಅಡಿಯಲ್ಲಿ ಭಾರತ ಆರೋಗ್ಯವನ್ನು ಗುರುತಿಸಿ ಆದ್ಯತೆ ನೀಡಿದ್ದಕ್ಕೆ ಭಾರತಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಮೊದಲ ಡಿಜಿಟಲ್ ಆರೋಗ್ಯ ಭವಿಷ್ಯದ ಆರೋಗ್ಯವಾಗಿದೆ. ಭಾರತದ ಜಿ 20 ಅಧ್ಯಕ್ಷತೆಯಲ್ಲಿ ಡಿಜಿಟಲ್ ಆರೋಗ್ಯದ ಉಪಕ್ರಮ ಹೊಂದಿಸಿಕೊಂಡು ಟೆಲಿಮೆಡಿಸಿನ್ ಮತ್ತು ಕೃತಕ ಬುದ್ಧಿಮತ್ತೆಯಂತಹ ಸಾಧನಗಳನ್ನು ಸಂಯೋಜಿಸುವ ಪ್ರಯತ್ನವನ್ನು ಹೆಚ್ಚಿಸುವ ಮೂಲಕ ಆರೋಗ್ಯ ರಕ್ಷಣೆಗೆ ಉತ್ತೇಜಿಸುತ್ತಿದೆ ಎಂದರು.
ಡಬ್ಲ್ಯೂಎಚ್ಒ ಮತ್ತು ಜಿ 20ಯ ಭಾರತದ ಅಧ್ಯಕ್ಷತೆಯಲ್ಲಿ ಕಳೆದ ತಿಂಗಳು ಡಿಜಿಟಲ್ ಆರೋಗ್ಯದ ಹೊಸ ಜಾಗತಿಕ ಉಪಕ್ರಮದ ರೂಪಾಂತರವನ್ನು ಬೆಂಬಲಿಸುವ ಗುರಿಯನ್ನು ಉದ್ಘಾಟಿಸಲಾಗಿದೆ ಎಂದರು.
ಭಾರತದ ಅಧ್ಯಕ್ಷತೆಯಲ್ಲಿ ಜಿ20 ಕೂಡ ಆರೋಗ್ಯ ತುರ್ತುಸ್ಥಿತಿಯ ಸನ್ನದ್ಧತೆ ಬಲಪಡಿಸಲು ಆದ್ಯತೆ ನೀಡಿದೆ. ಆ್ಯಂಟಿ ಮೈಕ್ರೋಬಿಯಲ್ ಗುರಿಯಾಗಿಸಿ, ಒನ್ ಹೆಲ್ತ್ ಫ್ರೇಮ್ ಡರ್ಕ್ ಮೂಲಕ ಜನರು, ಪ್ರಾಣಿಗಳು ಮತ್ತು ಸಸ್ಯಗಳ ನಡುವಿನ ಸಂಪರ್ಕವನ್ನು ಗುರುತಿಸುತ್ತದೆ. ಇವು ಭವಿಷ್ಯದ ಸೋಂಕು ಮಾತ್ರವಲ್ಲ, ಇನ್ನಿತರೆ ಎಲ್ಲಾ ವಿಧದ ಆರೋಗ್ಯ ಅಪಾಯವನ್ನು ಗುರುತಿಸುತ್ತದೆ.