ಕರ್ನಾಟಕ

karnataka

ETV Bharat / sukhibhava

ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್​ ಪ್ರಕರಣ ಹೆಚ್ಚಳ: ಪತ್ತೆ ಹೇಗೆ? ರೋಗ ಲಕ್ಷಣಗಳು ಗೊತ್ತೇ?

ಇತ್ತೀಚಿನ ದಿನದಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಮಾನ್ಯ ವಿಧದ ಕ್ಯಾನ್ಸರ್​ನಲ್ಲಿ ಸ್ತನ ಕ್ಯಾನ್ಸರ್​ ಪ್ರಮುಖವಾಗಿದೆ. ಇದಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

Increase in breast cancer cases among young Indian women
Increase in breast cancer cases among young Indian women

By ETV Bharat Karnataka Team

Published : Oct 31, 2023, 4:35 PM IST

ನವದೆಹಲಿ: 20ರಿಂದ 40 ವರ್ಷ ವಯೋಮಾನದ ನಡುವಿನ ಯುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್​ ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಂಡಿದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಜಾಗತಿಕವಾಗಿ ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಕ್ಯಾನ್ಸರ್​ಗಳಲ್ಲಿ ಸ್ತನ ಕ್ಯಾನ್ಸರ್​ ಕೂಡಾ ಒಂದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2020ರಲ್ಲಿ ಜಾಗತ್ತಿನಲ್ಲಿ 20 ಲಕ್ಷ ಮಹಿಳೆಯರು ಸ್ತನ ಕ್ಯಾನ್ಸರ್​ಗೆ ತುತ್ತಾಗಿದ್ದಾರೆ. ಆರು ಲಕ್ಷಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ.

ಆರಂಭದಲ್ಲೇ ಸ್ತನ ಕ್ಯಾನ್ಸರ್ ಲಕ್ಷಣ ಪತ್ತೆ ಹಚ್ಚುವುದು ಪರಿಣಾಮಕಾರಿ ಚಿಕಿತ್ಸೆಗೆ ನಿರ್ಣಾಯಕವಾಗಿದೆ. ಮಹಿಳೆಯರು ತಮ್ಮ ಸ್ತನದಲ್ಲಿ ಗಡ್ಡೆ, ಸ್ತನದ ವಿನ್ಯಾಸದಲ್ಲಿ ಬದಲಾವಣೆ, ತ್ವಚೆಯಲ್ಲಿ ಬದಲಾವಣೆ, ಸ್ತನದಲ್ಲಿ ರಕ್ತಸ್ರಾವದಂತಹ ಆರಂಭಿಕ ಲಕ್ಷಣವನ್ನು ಪತ್ತೆ ಮಾಡಬೇಕು ಎಂದು ಫರೀದಾಬಾದ್​ನ ಅಮ್ರಿತ್​ ಹಾಸ್ಪಿಟಲ್​ನ ಹಿರಿಯ ವೈದ್ಯ ಡಾ.ಸಫಲ್ಟ ಬಗ್ಮರ್​ ತಿಳಿಸಿದ್ದಾರೆ.

ಈ ರೋಗಲಕ್ಷಣಗಳು ಕ್ಯಾನ್ಸರ್ ಅಲ್ಲದ ಪರಿಸ್ಥಿತಿಗಳಿಗೂ ಸಂಬಂಧಿಸಿರಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಈ ಸಂದರ್ಭದಲ್ಲಿ ಯಾವುದೇ ಅನುಮಾನ ಬಂದರೆ ವೃತ್ತಿಪರರ ಮಾರ್ಗದರ್ಶನದ ಮೂಲಕ ಆರಂಭದಲ್ಲೇ ಬಗೆಹರಿಸಿಕೊಳ್ಳಬಹುದು ಎಂದಿದ್ದಾರೆ.

ಭಾರತದಲ್ಲಿ ಹೆಚ್ಚುತ್ತಿರುವ ಪ್ರಕರಣ: ಭಾರತದಲ್ಲೂ ಕೂಡ ಅನೇಕ ಮಹಿಳೆಯರಲ್ಲಿ ಈ ಸ್ತನ ಕ್ಯಾನ್ಸರ್​ ಪತ್ತೆಯಾಗುತ್ತಿದೆ. 2020ರಲ್ಲಿ 2 ಲಕ್ಷ ಭಾರತೀಯ ಮಹಿಳೆಯರು ಸ್ತನ ಕ್ಯಾನ್ಸರ್​​ಗೆ ತುತ್ತಾಗಿದ್ದಾರೆ. ಇದರಿಂದ ಅಂದಾಜು 76 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಆ್ಯಂಡ್ ರಿಸರ್ಚ್‌ ವರದಿ ಮಾಡಿದ ರಾಷ್ಟ್ರೀಯ ಕ್ಯಾನ್ಸರ್ ರಿಜಿಸ್ಟ್ರಿ ಕಾರ್ಯಕ್ರಮದ ವರದಿ ಹೇಳಿದೆ. ಈ ವರದಿಯನುಸಾರ 2025ಕ್ಕೆ ಈ ಪ್ರಕರಣಗಳ ಏರಿಕೆ ಕಾಣಬಹುದಾಗಿದ್ದು, 2.3 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತದಲ್ಲಿ ಯುವ ಮಹಿಳೆಯರಲ್ಲಿ ಅದರಲ್ಲೂ 20 ಮತ್ತು 30 ವರ್ಷದೊಳಗಿನ ಅನೇಕರಲ್ಲಿ ಸ್ತನ ಕ್ಯಾನ್ಸರ್​ ಪ್ರಕರಣಗಳು ಏರಿಕೆ ಕಾಣುತ್ತಿವೆ. ಗರ್ಭಕಂಠದ ಕ್ಯಾನ್ಸರ್​ ಮತ್ತು ಬಾಯಿಯ ಕ್ಯಾವಿಟಿಗಿಂತ ಹೆಚ್ಚಾಗಿ ಸ್ತನ ಕ್ಯಾನ್ಸರ್​​ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗಿದೆ. 2030ರ ಹೊತ್ತಿಗೆ ಸ್ತನ ಕ್ಯಾನ್ಸರ್​​ ಜಾಗತಿಕವಾಗಿಯೂ ದೊಡ್ಡ ಹೊರೆಯಾಗಲಿದೆ. 20 ವರ್ಷಗಳ ಬಳಿಕ ಮಹಿಳೆಯರು ನಿಯಮಿತವಾಗಿ ಸ್ತನ ಕ್ಯಾನ್ಸರ್​ ಆರಂಭಿಕ ಪತ್ತೆಗೆ ಒಳಗಾಗುವುದು ಒಳಿತು ಎಂದು ಗುರುಗ್ರಾಮದ ಸಿಕೆ ಬಿರ್ಲಾ ಆಸ್ಪತ್ರೆಯ ವೈದ್ಯ ಡಾ.ರೋಹನ್​ ಖಂಡೆಲ್ವಾಲ್​ ಹೇಳುತ್ತಾರೆ.

ಉಳಿಯುವಿಕೆ ದರದಲ್ಲಿ ಮತ್ತು ಗುಣಪಡಿಸುವಿಕೆಯಲ್ಲಿ ಆರಂಭಿಕ ಪತ್ತೆ ನಿರ್ಣಾಯಕ. ವೈದ್ಯರ ಅನುಸಾರ, ಶೇ 60ರಷ್ಟು ಸ್ತನ ಕ್ಯಾನ್ಸರ್​ಗಳು ಅಡ್ವಾನ್ಸ್ಡ್​​ ಹಂತದಲ್ಲಿ ಪತ್ತೆ ಆಗುತ್ತದೆ. ಇದರ ಪರಿಹಾರ ದರ ಕಡಿಮೆ ಆಗಿದೆ. (ಐಎಎನ್​ಎಸ್​)

ಇದನ್ನೂ ಓದಿ: Breast cancer​ : ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್​.. ಜೀವನಶೈಲಿ ಬದಲಾವಣೆ ಅಗತ್ಯ

ABOUT THE AUTHOR

...view details