ಭುವನೇಶ್ವರ್: ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಇನ್ಸುಟಿಟ್ಯೂಷನ್ ಆಫ್ ಲೈಫ್ ಸೈನ್ಸ್ (ಜೀವ ವಿಜ್ಞಾನ ಸಂಸ್ಥೆ- ಐಎಲ್ಎಸ್) ಮತ್ತೊಂದು ಮಹತ್ತರ ಸಾಧನೆ ಮಾಡಿದೆ. ಐಎಲ್ಎಸ್ ಎನ್ಸಿಒಆರ್ 1 ( NCoR 1- ನ್ಯೂಕ್ಲಿಯರ್ ರೆಸೆಪ್ಟೊರ್ ಕೊ-ರೆಪ್ರೆಸರ್ 1) ಎಂಬ ಅತಿಥೇಯ ಪ್ರೋಟಿನ್ ಅನ್ನು ಆವಿಷ್ಕರಿಸಿದ್ದು, ಇದು ಅನೇಕ ಸಂಕೀರ್ಣ ರೋಗವನ್ನು ಉಪಶಮನ ಮಾಡಲು ಸಮರ್ಥವಾಗಿದೆ. ಕ್ಷಯ ಮತ್ತು ವೈರಲ್ ಸೋಂಕಿನ ವಿರುದ್ಧ ಹೋರಾಡುವಲ್ಲಿ ಇದು ಸಾಮರ್ಥ್ಯದಾಯಕವಾಗಿದೆ. ಕ್ಯಾನ್ಸರ್ನಂತಹ ರೋಗಗಳಿಗೆ ಪ್ರೋಟಿನ್ ಸಂಶೋಧನೆ ಮಾಡುವಲ್ಲಿ ಐಎಲ್ಎಸ್ ಯಶಸ್ವಿಯಾಗಿದೆ. ಇನ್ನು ಈ ಕುರಿತು ಸಂಪೂರ್ಣ ವಿವರವನ್ನು ಪಿಎಲ್ಎಸ್ ಬಯೋಲಾಜಿ ಅಂಡ್ ಆಟೋಫಜಿಯಲ್ಲಿ ಪ್ರಕಟಿಸಲಾಗಿದೆ.
ಸಂಸ್ಥೆ ನೀಡುವ ಮಾಹಿತಿ ಅನುಸಾರ, ಪ್ರೋಟಿನ್ ಎನ್ಸಿಒಆರ್1 ಅನೇಕ ವಿಧದ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವಾಗಿ ಪ್ರೋಟಿನ್ ಮೌಲ್ಯ ಕಡಿಮೆ ಆದಾಗ, ದೇಹವು ವಿವಿಧ ಮಾರಣಾಂತಿಕ ವೈರಸ್‌ಗಳಿಂದ ಸೋಂಕಿಗೆ ಹೆಚ್ಚು ಒಳಗಾಗುತ್ತದೆ. ಈ ರೋಗಗಳು ದೇಹದಲ್ಲಿ ದೀರ್ಘಕಾಲವಾಗಿ ಇರುತ್ತದೆ.
ಸಂಶೋಧಕರು ಕ್ಷಯರೋಗದಿಂದ ಚೇತರಿಕೆ ಕಂಡ ರೋಗಿಗಳಲ್ಲಿ ಪ್ರೋಟಿನ್ ಮಟ್ಟ ಕಡಿಮೆಯಾಗಿರುವುದು ಕಂಡು ಬಂದಿದೆ. ಆದಾಗ್ಯೂ, ಐಎಲ್ಎಸ್ ಸಂಶೋಧಕರು ಈ ಬಗ್ಗೆ ಹೆಚ್ಚಿನ ಕಲಿಕೆ ಮುಂದುವರೆಸಿದ್ದಾರೆ. ವಿಜ್ಞಾನಿಗಳು ಪ್ರೋಟಿನ್ನ ಆ್ಯಂಟಿ ವೈರಲ್ ಸಾಮರ್ಥ್ಯದ ಸಂಶೋಧನೆಯನ್ನು ಮುಗಿಸಿದ್ದಾರೆ. ಸಂಶೋಧಕರು ದುರ್ಬಲ ರೋಗ ನಿರೋಧಕ ವ್ಯವಸ್ಥೆ ಹೊಂದಿರುವವರಿಗೆ ಪ್ರೋಟಿನ್ ಚಿಕಿತ್ಸೆಯ ಪಾತ್ರದ ಕುರಿತು ಗಮನಿಸಿದ್ದಾರೆ.