ನವದೆಹಲಿ: ಪರೀಕ್ಷೆ ಎಂದರೆ ಕೇವಲ ಮಕ್ಕಳಿಗೆ ಮಾತ್ರವಲ್ಲ, ಅವರ ಪೋಷಕರಿಗೂ ಒತ್ತಡ ಸಹಜ. ಮಕ್ಕಳ ಕಲಿಕೆ ವಿಷಯದಲ್ಲಿ ಒತ್ತಡಕ್ಕೆ ಒಳಗಾಗಿ ಆರೋಗ್ಯದ ವಿಷಯದ ಬಗ್ಗೆ ಪ್ರಾಮುಖ್ಯತೆ ನೀಡುವುದಿಲ್ಲ. ಆದರೆ, ಪರೀಕ್ಷೆ ಸಮಯದಲ್ಲಿ ಆರೋಗ್ಯದ ಮೇಲೆ ಕಾಳಜಿ ವಹಿಸುವುದು ಅವಶ್ಯವಾಗಿದೆ. ಇದು ಶಕ್ತಿಯುತ ಮತ್ತು ಕೇಂದ್ರಿಕೃತವಾಗಿರಲು ಸಹಾಯ ಮಾಡುತ್ತದೆ.
ಅನೇಕ ಆಹಾರಗಳು ಗ್ಯಾಸ್ಟ್ರಿಕ್, ಹೊಟ್ಟೆ ನೋವು, ತೇಗಿಗೆ ಕಾರಣವಾಗುತ್ತದೆ. ಕೆಲವು ವಿಧದ ಆಹಾರಗಳು ಆಲಸ್ಯ ಮತ್ತು ನಿದ್ರೆಗೂ ಕಾರಣವಾಗುತ್ತದೆ. ಈ ಹಿನ್ನೆಲೆ ಪರೀಕ್ಷೆಗೆ ಮುನ್ನ ಆಹಾರದ ಆಯ್ಕೆ ಮತ್ತು ಪ್ರಮಾಣದ ಮುಖ್ಯವಾಗುತ್ತದೆ. ಈ ಹಿನ್ನೆಲೆ ಪರೀಕ್ಷೆಗೆ ಹೋಗುವ ಮುನ್ನ ಯಾವ ರೀತಿ ಆಹಾರ ಸೇವನೆ ಮಾಡಬೇಕು ಎಂಬದರ ಬಗ್ಗೆ ತಿಳಿಯಬೇಕು.
ಇದಕ್ಕೆ ಮೊದಲು ಪರೀಕ್ಷೆಗೆ ಮುಂಚೆ ನಮ್ಮ ದೇಹದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯಬೇಕು. ಪರೀಕ್ಷೆ ಸಮಯದಲ್ಲಿ ಎಲ್ಲ ವಯೋಮಾನದವರು ಒತ್ತಡಕ್ಕೆ ಒಳಗಾಗುತ್ತಾರೆ. ಈ ಹಿನ್ನೆಲೆ ಪರೀಕ್ಷೆ ತಯಾರಿಯಲ್ಲಿ ಸರಿಯಾದ ಯೋಜನೆ, ಸಮಯ ಜೋಡಣೆ ಮತ್ತು ಆಹಾರ ಅವಶ್ಯಕತೆ ಇದೆ. ಉತ್ತಮ ಡಯಟ್ ಕೂಡ ಮಕ್ಕಳ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಕ್ಕಳ ಆತಂಕವನ್ನು ತೊಡೆದು ಹಾಕುವ, ಪರೀಕ್ಷೆ ತಯಾರಿಗೆ ಸಹಾಯ ಮಾಡುವ ಆಹಾರವನ್ನು ಸೇವಿಸಬೇಕು.
ಮಿಸ್ ಮಾಡಬೇಡಿ ಬ್ರೇಕ್ಫಾಸ್ಟ್: ಪರೀಕ್ಷೆ ಎಂಬುದು ಪ್ರತಿ ವಿದ್ಯಾರ್ಥಿಗಳ ವಾರ್ಷಿಕ ಪ್ರಯಾಣದ ಪ್ರಮುಖ ಕಾಲಘಟ್ಟವಾಗಿದೆ. ಈ ಪರೀಕ್ಷೆ ಸಮಯದಲ್ಲಿ ಆರೋಗ್ಯ ಹಾಳಾಗದಂತೆ ಉತ್ತಮ ಆಹಾರವನ್ನು ಸರಿಯಾದ ಸಮಯಕ್ಕೆ ಮಕ್ಕಳು ಸೇವನೆ ಮಾಡುವ ಮೂಲಕ ಅವರು ಉತ್ಸಾಹದಿಂದ ಇರುವಂತೆ ನೋಡಿಕೊಳ್ಳಬೇಕು. ಅದರಲ್ಲೂ ಬೆಳಗಿನ ತಿಂಡಿ ಡಯಟ್ನಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬೆಳಗಿನ ಉಪಹಾರ ತಪ್ಪಿಸುವುದರಿಂದ ಅಥವಾ ಬಹಳ ಹೊತ್ತು ಉಪವಾಸ ಇರುವುದರಿಂದ ರಕ್ತದ ಸಕ್ಕರೆ ಮಟ್ಟ ಕುಸಿಯುತ್ತದೆ. ಇದು ಏಕಾಗ್ರತೆ ಮೇಲೆ ಪರಿಣಾಮ ಬೀರುತ್ತದೆ.
ಮಕ್ಕಳು ಅನೇಕ ಪರೀಕ್ಷೆ ಭಯದಿಂದ ಆಹಾರವನ್ನು ತಿನ್ನುವುದನ್ನು ತಪ್ಪಿಸುತ್ತಾರೆ. ಈ ಹಿನ್ನಲೆ ಪೋಷಕರು ಅವರ ತಿನ್ನುವಿಕೆ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಪರೀಕ್ಷೆಗೆ ಮುನ್ನ ಆರೋಗ್ಯಯುತ ಬೆಳಗಿನ ಆಹಾರ ಸೇವನೆ ಮಾಡುವಂತೆ ನೋಡಿಕೊಳ್ಳಬೇಕಿದೆ. ಮಿದುಳಿಗೆ ಶಕ್ತಿ ಅವಶ್ಯಕತೆ ಇದೆ. ಅದು ಆಹಾರದಿಂದ ಮಾತ್ರ ಸಾಧ್ಯ. ಈ ಹಿನ್ನೆಲೆ ಮಕ್ಕಳ ಏಕಾಗ್ರತೆ ಪರೀಕ್ಷೆ ಮೇಲೆ ಇರುವಂತೆ ನೋಡಿಕೊಳ್ಳಬೇಕು ಹೊರತು ಹಸಿವಿನ ಮೇಲೆ ಅಲ್ಲ. ಹಸಿವಿನಿಂದ ಬಳಲುವ ಮಗು ಓದಿನಲ್ಲಿ ಅಸಕ್ತಿ, ಏಕಾಗ್ರತೆ ತೋರಿಸಲು ಸಾಧ್ಯವುಲ್ಲ. ಏಕಾಗ್ರತೆ ಕೊರತೆಯಿಂದ ಪರೀಕ್ಷೆ ತಯಾರಿ ಕೂಡ ಕಡಿಮೆಯಾಗುತ್ತದೆ.
ಬ್ರೇಕ್ಫಾಸ್ಟ್ ಹೀಗಿರಲಿ: ಬ್ರೇಕ್ಫಾಸ್ಟ್ನಲ್ಲಿ ಧಾನ್ಯಗಳಿಂದ ಕೂಡಿರುವಂತೆ ನೋಡಿಕೊಳ್ಳಿ. ಜೊತೆಗೆ ಕಡಿಮೆ ಫ್ಯಾಟ್ ಹಾಲು, ಮುಸಲಿ ಅಥವಾ ಮೊಟ್ಟೆ, ಜಾಮ್ ಟೊಸ್ಟ್ ಇದ್ರೆ ಬೆಸ್ಟ್. ಭಾರತೀಯ ಆಹಾರದಲ್ಲಿ ತರಕಾರಿ ಭರಿತ ಅವಲಕ್ಕಿ ಅಥವಾ ಒಣಹಣ್ಣುಗಳ ಓಟ್ಸ್. ಹಣ್ಣಿನಲ್ಲಿ ಬಾಳೆ ಹಣ್ಣು, ಸೇಬು ಹಣ್ಣು, ಪೇರ್, ಪಪ್ಪಾಯ, ಚಿಕ್ಕೂವನ್ನು ನೀಡಬಹುದು. ರಾಗಿ ಅಥವಾ ರವೆ ಇಡ್ಲಿ ಅಥವಾ ದೋಸವನ್ನು ಕೂಡ ನೀಡಬಹುದು. ಒಣ ಹಣ್ಣು ಮತ್ತು ನಟ್ಸ್ ಮಕ್ಕಳ ಏಕಾಗ್ರತೆ ಮತ್ತು ಶಕ್ತಿ ನೀಡುವಲ್ಲಿ ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತದೆ.
ಯೋಗರ್ಟ್ ಹೈ ಪ್ರೋಟಿನ್ ಜೊತೆಗೆ ಉತ್ತಮ ಪ್ರೊಬಯೋಟಿಕ್ ಹೊಂದಿದ್ದು, ಇದು ಕರುಳಿನ ಆರೋಗ್ಯಕ್ಕೆ ಉತ್ತಮ. ಗ್ಯಾಸ್ಟ್ರಿಕ್, ತೇಗು ಅಥವಾ ಇನ್ನಿತರ ಸಮಸ್ಯೆ ನಿವಾರಣೆ ಮಾಡುತ್ತದೆ. ಕಾರ್ಬೋ ಹೈಡ್ರೇಟ್ ಯುಕ್ತ ಮತ್ತು ಎಣ್ಣೆ ಪದಾರ್ಥಗಳ ಸೇವನೆ ಬೇಡ. ಕಿತ್ತಾಳೆ, ಬಾಳೆಹಣ್ಣು, ಸೇಬು ಮತ್ತು ದ್ರಾಕ್ಷಿ ಮತ್ತು ಹಸಿರು ಎಲೆ ತರಕಾರಿಗಳು ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುತ್ತದೆ. ಪರೀಕ್ಷೆಯಲ್ಲಿ ಮಕ್ಕಳ ಉತ್ತಮ ಪ್ರದರ್ಶನಕ್ಕಾಗಿ ಈ ಕ್ರಮವನ್ನು ಅನುಸರಿಸಬಹುದಾಗಿದೆ.
ಮಕ್ಕಳು ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಿ