ಋತು ಚಕ್ರ ಎಂಬುದು ಎಲ್ಲ ಮಹಿಳೆಯರಿಗೆ ಒಂದೇ ರೀತಿಯ ಅನುಭವ ನೀಡದು. ಕೆಲವರಲ್ಲಿ ಇದು ಸರಾಗವಾಗಿದ್ದರೆ ಮತ್ತೆ ಕೆಲವರಲ್ಲಿ ವಿಳಂಬ, ನೋವು ಮತ್ತಿತ್ತರ ಸಮಸ್ಯೆಗೆ ಕಾರಣವಾಗುತ್ತದೆ. ಮಹಿಳೆ ಆರೋಗ್ಯದಿಂದ ಇರಲು ಮಾಸಿಕ ಋತುಬಂಧಕ್ಕೆ ಒಳಗಾಗುವುದು ಅವಶ್ಯ. ಈ ಹಿನ್ನೆಲೆ ಋತುಚಕ್ರದಲ್ಲಿ ಆಗುವ ಬದಲಾವಣೆಗಳನ್ನು ನಿರ್ಲಕ್ಷ್ಯಿಸಬಾರದು ಎಂದು ತಜ್ಞರು ತಿಳಿಸುತ್ತಾರೆ.
ಇನ್ನು ಬಹುತೇಕ ಮಹಿಳೆಯರು, ಯುವತಿಯರನ್ನು ಅನಿಯಮಿತ ಋತುಚಕ್ರ ಕಾಡುತ್ತದೆ. ಕೆಲವರಲ್ಲಿ ಈ ಋತುಚಕ್ರ ತಡವಾದರೆ, ಮತ್ತೆ ಕೆಲವರಲ್ಲಿ ಯಾವುದೇ ಸಮಸ್ಯೆ ಕಂಡುಬರುವುದಿಲ್ಲ. ಈ ರೀತಿ ಅವಧಿ ಪೂರ್ವ ಮತ್ತು ತಡವಾಗಿ ಮಾಸಿಕ ಋತುಬಂಧನಕ್ಕೆ ಒಳಗಾಗುವುದರ ಹಿಂದಿನ ಕಾರಣ ಒತ್ತಡ ಮತ್ತು ಹಾರ್ಮೋನ್ಗಳ ಅಸಮತೋಲನ. ಇಂತಹ ಸಮಸ್ಯೆ ನಿಮಗೂ ಕಾಡುತ್ತಿದ್ದರೆ, ಅದರಿಂದ ಹೊರ ಬರಲು ಇಲ್ಲಿದೆ ನೈಸರ್ಗಿಕ ಉಪಾಯಗಳು.
ಶುಂಠಿ ಚಹಾ:ನಿಯಮಿತ ಋತುಚಕ್ರಕ್ಕೆ ಪ್ರತಿನಿತ್ಯ ಶುಂಠಿ ಚಹಾ ಸೇವನೆ ಉತ್ತಮ ಪರಿಹಾರವಾಗಿದೆ,. ಇದು ದೇಹದಲ್ಲಿ ಶಾಖವನ್ನು ಉತ್ಪಾದಿಸುತ್ತದೆ. ಇದರಿಂದ ಋತುಚಕ್ರಕ್ಕೆ ಪ್ರಚೋದನೆ ನೀಡುತ್ತದೆ. ಅಷ್ಟೆ ಅಲ್ಲದೇ, ಈ ಸಮಯದಲ್ಲಿ ಕಾಣಿಸಿಕೊಳ್ಳುವ ನೋವಿಗೂ ಇದು ಮದ್ದಾಗಲಿದೆ. ಶುಂಠಿಯಲ್ಲಿನ ಆ್ಯಂಟಿ ಆಕ್ಸಿಡೆಂಟ್ ಮತ್ತು ಊರಿಯೂತ ವಿರೋಧಿ ಗುಣಗಳು ನೋವಿನ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಪಪ್ಪಾಯ:ಕಚ್ಛಾ ಪಪ್ಪಾಯವನ್ನು ನಿಮ್ಮ ದೈನಂದಿನ ಡಯಟ್ನಲ್ಲಿ ಸೇರಿಸುವುದು ಉತ್ತಮ. ಇದು ಋತುಚಕ್ರದ ನಿಯಮಿತಗೊಳಿಸುತ್ತದೆ. ಪಪ್ಪಾಯದಲ್ಲಿರುವ ಎಂಜಿಮಾ ಇದ್ದು, ಇದರನ್ನು ಪಾಪಿನ್ ಎಂದು ಗುರುತಿಸಲಾಗಿದೆ. ಪಪ್ಪಾಯ ಮಹಿಳೆಯರಲ್ಲಿನ ಹಾರ್ಮೋನ್ ಅನ್ನು ನಿಯಂತ್ರಸುತ್ತದೆ. ಇದರಲ್ಲಿನ ಕ್ಯಾರೊಟೆನ್ ಈಸ್ಟ್ರೋಜನ್ ಹಾರ್ಮೋನ್ ಅನ್ನು ಉತ್ತೇಜಿಸುತ್ತದೆ. ಇದು ಋತುಚಕ್ರಕ್ಕೆ ಕಾರಣವಾಗುವ ಅಂಶವಾಗಿದೆ.