ಬೆಂಗಳೂರು: ಅಧಿಕ ಉಪ್ಪು ಸೇವನೆಯಿಂದಾಗಿ ಉಂಟಾಗುವ ಅಧಿಕ ರಕ್ತದೊತ್ತಡ ಮಾತ್ರವಲ್ಲದೇ, ಭಾವನಾತ್ಮಕ ಮತ್ತು ಅರಿವಿನ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ಜಪಾನ್ ಫುಜಿತ್ ಹೆಲ್ತ್ ಯುನಿವರ್ಸಿಟಿ ಅಧ್ಯಯನ ನಡೆಸಿದೆ. ಈ ವೇಳೆ, ಹೆಚ್ಚಿನ ಉಪ್ಪು ಸೇವನೆ ರಕ್ತದೊತ್ತಡ ನಿಯಂತ್ರಣ ವ್ಯವಸ್ಥೆ ಮತ್ತು ಲಿಪಿಡ್ ಅಣುಗಳ ನಡುವೆ ಅನಗತ್ಯ ಸಿಂಗ್ನಿಲಿಂಗ್ಗೆ ಕಾರಣವಾಗುತ್ತದೆ. ಇದರಿಂದ ಮಿದುಳಿನಲ್ಲಿ ಅಪಸಾಮಾನ್ಯ ಕ್ರಿಯೆ ಏರ್ಪಡುತ್ತದೆ ಎನ್ನಲಾಗಿದೆ.
ಅರಿವಿನ ದುರ್ಬಲತೆ ಅಧಿಕ ಉಪ್ಪು ಸೇವನೆಯೊಂದಿಗೆ ಸಂಬಂಧ ಹೊಂದಿದೆ. ಅಧಿಕ ಉಪ್ಪು ಸೇವನೆಯಿಂದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದು ವಿಷಯ. ಆಂಜಿಯೋಟೆನ್ಸಿನ್ 2 ಹಾರ್ಮೋನ್ ರಕ್ತದೊಡ್ಡ ನಿಯಂತ್ರ ಮತ್ತು ದ್ರವ ಸಮತೋಲನ ನಿಯಂತ್ರಿಸುವಲ್ಲಿ ಪ್ರಮುಖ ಹಾರ್ಮೋನ್ ಆಗಿದೆ. ಎಟಿ1 ಇದರ ಗ್ರಾಹಕವಾಗಿದೆ.
ಅಪಾಯಕಾರಿ ಕ್ರಿಯೆಗೆ ಕಾರಣ: ಈ ಅಧ್ಯಯನವು ಆಂಗ್ 2 ಎಟಿ1 ಮತ್ತು ಪಿಜಿಇ2- ಇಪಿ1 ನಡುವಿನ ಕ್ರಾಸ್‌ಸ್ಟಾಕ್‌ನಿಂದ ಮಧ್ಯಸ್ಥಿಕೆ ವಹಿಸುವ ಅಧಿಕ ರಕ್ತದೊತ್ತಡವು ಹೇಗೆ ಭಾವನಾತ್ಮಕ ಮತ್ತು ಅರಿವಿನ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗುತ್ತದೆ ಎಂಬುದನ್ನು ತೋರಿಸಿದೆ. ಅತಿಯಾದ ಉಪ್ಪು ಸೇವನೆಯು ಅಧಿಕ ರಕ್ತದೊತ್ತಡ, ಅರಿವಿನ ಅಪಸಾಮಾನ್ಯ ಕ್ರಿಯೆ ಮತ್ತು ಬುದ್ಧಿಮಾಂದ್ಯತೆಗೆ ಅಪಾಯಕಾರಿ ಅಂಶ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಬಾಹ್ಯ ಮತ್ತು ಕೇಂದ್ರ ನರಮಂಡಲದ ನಡುವಿನ ಪರಸ್ಪರ ಕ್ರಿಯೆಯ ಮೇಲೆ ಕೇಂದ್ರೀಕರಿಸುವ ಅಧ್ಯಯನಗಳು ಈ ಸಂಬಂಧವನ್ನು ಸಾಕಷ್ಟು ತನಿಖೆ ಮಾಡಿಲ್ಲ ಎಂದಿದ್ದಾರೆ.