ಕರ್ನಾಟಕ

karnataka

ಶುಂಠಿ ಸಿಪ್ಪೆ ವೇಸ್ಟ್​ ಅಂತಾ ಬಿಸಾಕಬೇಡಿ , ಈ ಸಿಪ್ಪೆಯಿಂದಲೂ ಇದೆ ಹಲವು ಪ್ರಯೋಜನ: ಹೇಗೆ ಗೊತ್ತಾ?

By ETV Bharat Karnataka Team

Published : Nov 7, 2023, 9:21 PM IST

ಶುಂಠಿಯ ಸಿಪ್ಪೆಯನ್ನು ಹಲವು ರೀತಿಯಾಗಿ ಉಪಯೋಗಿಸಬಹುದು ಎನ್ನುತ್ತಾರೆ ತಜ್ಞರು. ಅದರ ಕೆಲವು ಪ್ರಯೋಜನೆಗಳು ಇಲ್ಲಿವೆ.

Etv Bharatginger-peel-can-be-used-in-many-ways-dot-do-you-know-how
ಶುಂಠಿ ಸಿಪ್ಪೆ ವೇಸ್ಟ್​ ಅಲ್ಲ, ಈ ಸಿಪ್ಪೆಯಿಂದಲೂ ಇದೆ ಹಲವು ಪ್ರಯೋಜನೆಗಳು: ಹೇಗೆ ಗೊತ್ತಾ?

ಹಲವರು ಸಿಪ್ಪೆ ಸುಲಿದ ಶುಂಠಿಯನ್ನು ಬಳಕೆ ಮಾಡಿ, ನಂತರ ಶುಂಠಿ ಸಿಪ್ಪೆಯನ್ನು ಬಿಸಾಡುವುದನ್ನು ನಾವು ಸಾಮಾನ್ಯ ನೋಡಿರುತ್ತೇವೆ. ಕೆಲವರು ಶುಂಠಿಯ ಸಿಪ್ಪೆಯಿಂದ ಚಹಾ ಮಾಡುತ್ತಾರೆ. ಹೀಗೆ ಶುಂಠಿಯ ಸಿಪ್ಪೆಯನ್ನು ಹಲವು ರೀತಿಯಾಗಿ ಉಪಯೋಗಿಸಬಹುದು ಎನ್ನುತ್ತಾರೆ ತಜ್ಞರು. ಶುಂಠಿ ಸಿಪ್ಪೆ ಕೆಲವು ಉಪಯೋಗಗಳು ಇಲ್ಲಿವೆ.

ಕೆಮ್ಮು ಹೋಗಲಾಡಿಸಲು: ಚಳಿಗಾಲದ ಆರಂಭದಲ್ಲಿ ಹವಾಮಾನ ಬದಲಾವಣೆಯಿಂದ ಕೆಮ್ಮು, ನೆಗಡಿ ಮೊದಲಾದ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಇವುಗಳನ್ನು ಹೋಗಲಾಡಿಸಲು ಅನೇಕರು ಟೀ ತಯಾರಿಕೆಯಲ್ಲಿ ಶುಂಠಿಯ ಸಿಪ್ಪೆಯನ್ನು ಬಳಸುತ್ತಾರೆ. ಇದರೊಂದಿಗೆ ಒಂದು ಅಥವಾ ಎರಡು ಲವಂಗ ಮತ್ತು ಏಲಕ್ಕಿ ಹಾಕಿ ಕುದಿಸಿದ ಚಹಾವನ್ನು ಕುಡಿದರೆ ಕೆಮ್ಮು ಮತ್ತು ನೆಗಡಿಯಿಂದ ಶೀಘ್ರವಾಗಿ ನೀವು ಗುಣಮುಖರಾಗುತ್ತೀರಿ. ಶುಂಠಿಯ ಸಿಪ್ಪೆ ಒಣಗಿಸಿ ಪುಡಿ ಮಾಡಬೇಕು. ಒಂದು ಚಮಚ ಜೇನುತುಪ್ಪಕ್ಕೆ ಸ್ವಲ್ಪ ಶುಂಠಿ ಸಿಪ್ಪೆಯ ಪುಡಿಯನ್ನು ಸೇರಿಸಿ ಸೇವಿಸುವುದರಿಂದಲೂ ಕೆಮ್ಮು, ನೆಗಡಿಯಂತಹ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಶುಂಠಿ ಸಿಪ್ಪೆಯಿಂದ ನೈಸರ್ಗಿಕ ಗೊಬ್ಬರ:ನಾವು ನಮ್ಮ ತೋಟ, ಹೂವಿನ ಕುಂಡಗಳಲ್ಲಿ ಹಾಕಿರುವ ಗಿಡಗಳಿಗೆ ವಿವಿಧ ರೀತಿಯ ನೈಸರ್ಗಿಕ ಗೊಬ್ಬರಗಳನ್ನು ಬಳಸುತ್ತೇವೆ. ಅವುಗಳ ಪಟ್ಟಿಯಲ್ಲಿ ಶುಂಠಿಯ ಸಿಪ್ಪೆಯನ್ನೂ ಸೇರಿಸಬಹುದು ಎನ್ನುತ್ತಾರೆ ತಜ್ಞರು. ಇದನ್ನು ಸಸ್ಯಗಳಿಗೆ ನೈಸರ್ಗಿಕ ಗೊಬ್ಬರದ ರೀತಿ ಬಳಸಲಾಗುತ್ತದೆ. ಸಿಪ್ಪೆಯಲ್ಲಿ ಹೇರಳವಾಗಿರುವ ರಂಜಕವು ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಕೀಟಗಳ ಬಾಧೆಯಿಂದ ಅವುಗಳನ್ನು ರಕ್ಷಿಸುತ್ತದೆ.

ರುಚಿ ಹೆಚ್ಚಿಸಲು: ಕೊತ್ತಂಬರಿ ಸೊಪ್ಪು, ಪುದೀನಾ, ವಿನೆಗರ್, ನಿಂಬೆ ರಸ ಇತ್ಯಾದಿಗಳನ್ನು ವಿವಿಧ ಖಾದ್ಯಗಳ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಅದೇ ರೀತಿ ಶುಂಠಿಯ ಸಿಪ್ಪೆಯನ್ನು ಸಹ ಬಳಸಬಹುದು ಎಂದು ತಜ್ಞರು ಹೇಳುತ್ತಾರೆ. ಕರಿಬೇವು ಬೇಯಿಸುವಾಗ ಒಂದು ಚಿಟಿಕೆ ಶುಂಠಿಯ ಸಿಪ್ಪೆ ಹಾಕಿದರೆ ಖ್ಯಾದ್ಯಕ್ಕೆ ರುಚಿ ನೀಡುವುದರ ಜೊತೆಗೆ ಆರೋಗ್ಯ ವೃದ್ಧಿಸುತ್ತದೆ.

ತರಕಾರಿ ಬೇಯಿಸುವಾಗ: ಬ್ರೊಕೋಲಿ, ಹೂಕೋಸು, ಎಲೆಕೋಸು ಮುಂತಾದ ತರಕಾರಿಗಳನ್ನು ಬೇಯಿಸಿ ಬಳಸುವುದು ರೂಢಿ. ಅಡುಗೆ ಮಾಡುವುದಕ್ಕೂ ಮೊದಲು ಇವುಗಳನ್ನು ಬೇಯಿಸುವಾಗ ಸ್ವಲ್ಪ ಶುಂಠಿಯ ಸಿಪ್ಪೆಯನ್ನು ಸೇರಿಸಿ ಇದು ಉತ್ತಮ ಸುವಾಸನೆಯನ್ನು ನೀಡುತ್ತದೆ. ಕೆಲವು ಖಾದ್ಯಗಳನ್ನು ಹಬೆಯಲ್ಲಿ ಬೇಯಿಸಲಾಗುತ್ತದೆ. ಈ ಸಂದರ್ಭದಲ್ಲಿ ನೀವು ಖಾದ್ಯದ ಮೇಲೆ ಸ್ವಲ್ಪ ಶುಂಠಿ ಸಿಪ್ಪೆಯನ್ನು ಹಾಕಿದರೆ ಅದು ಸ್ವಲ್ಪ ಮಸಾಲೆಯುಕ್ತವಾಗುತ್ತವೆ ಮತ್ತು ರುಚಿಯೂ ಹೆಚ್ಚಾಗುತ್ತದೆ.

ವಿವಿಧ ಖಾದ್ಯಗಳನ್ನು ಮಾಡಲು: ಸೂಪ್​​​​ಗಳು, ಗ್ರೇವಿ, ಪಲ್ಯಗಳು ಮತ್ತು ಇತರ ಖಾದ್ಯದಲ್ಲಿ ಶುಂಠಿಯನ್ನು ಹೇಗೆ ಬಳಸಬೇಕು ಎಂದು ನಮಗೆ ಗೊತ್ತಿದೆ. ಅದರೆ ಇತಂಹ ಖಾದ್ಯಗಳನ್ನು ಶುಂಠಿ ಸಿಪ್ಪೆಯೊಂದಿಗೂ ಸಹ ತಯಾರಿಸಬಹುದು ಎಂದು ತಜ್ಞರು ಹೇಳುತ್ತಾರೆ. ಇದಕ್ಕಾಗಿ, ಅರ್ಧ ಕಪ್ ಶುಂಠಿ ಸಿಪ್ಪೆಯನ್ನು ಆರು ಕಪ್ ನೀರಿಗೆ ಸೇರಿಸಿ ಅರ್ಧ ಗಂಟೆ ಕುದಿಸಬೇಕು. ಈ ಮಿಶ್ರಣ ಸಂಪೂರ್ಣವಾಗಿ ತಣ್ಣಗಾದ ನಂತರ ಸೋಸಿ ಸಂಗ್ರಹಿ, ಇದನ್ನು ನೀವು ಸೂಪ್, ಗ್ರೇವಿ ಮತ್ತು ಇತರ ಪಲ್ಯಗಳಲ್ಲಿ ಬಳಸಬಹುದು.

ಇದನ್ನೂ ಓದಿ:ಪಳ ಪಳ ಹೊಳೆಯುವ ಹಲ್ಲು ನಿಮ್ಮದಾಗಬೇಕಾ; ನೈಸರ್ಗಿಕ ಪದಾರ್ಥಗಳಲ್ಲೇ ಇದೆ ಪರಿಹಾರ

ABOUT THE AUTHOR

...view details