ಕರ್ನಾಟಕ

karnataka

ETV Bharat / sukhibhava

Ghee Benefits: ಅಡುಗೆಯ ಘಮ ಹೆಚ್ಚಿಸುವ ತುಪ್ಪ ಮುಖದ ಸೌಂದರ್ಯ ವೃದ್ಧಿಯಲ್ಲೂ ಸಹಾಯಕ!.. ಅದು ಹೇಗೆ?

ಭಾರತೀಯ ಅಡುಗೆ ಮನೆಯಲ್ಲಿರುವ ತುಪ್ಪವೂ ಹಲವು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ.

ghee-helpful-in-enhancing-the-beauty-of-the-face
ghee-helpful-in-enhancing-the-beauty-of-the-face

By ETV Bharat Karnataka Team

Published : Oct 19, 2023, 2:38 PM IST

ಇದು ಹಬ್ಬದ ಸಮಯ. ಅದರಲ್ಲೂ ನವರಾತ್ರಿಯಂತಹ ಒಂಬತ್ತು ದಿನವೂ ದೇವರಿಗೆ ಪ್ರಸಾದ ಅರ್ಪಿಸುವುದು ಸಾಮಾನ್ಯ. ದೇವರಿಗೆ ಮಾಡುವ ಸಿಹಿ ಭಕ್ಷ್ಯಗಳನ್ನು ತುಪ್ಪದಿಂದಲೇ ತಯಾರಿಸುತ್ತೇವೆ. ತುಪ್ಪದ ಅರ್ಪಣೆ ಇಲ್ಲದ ಆಹಾರವನ್ನು ಅಪೂರ್ಣ ಎಂಬ ಭಾವ ಭಾರತೀಯರಲ್ಲಿ ಇದೆ. ಈ ತುಪ್ಪವು ಕೇವಲ ಆಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಅನೇಕ ಪ್ರಯೋಜನವನ್ನು ಹೊಂದಿದ್ದು, ಆರೋಗ್ಯಕ್ಕೂ ಲಾಭ ನೀಡುತ್ತದೆ. ಅಷ್ಟೇ ಅಲ್ಲದೇ, ಈ ತುಪ್ಪ ನಿಮ್ಮ ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಈ ತುಪ್ಪವನ್ನು ಕೊಂಚ ನಿಮ್ಮ ಮುಖಕ್ಕೆ ಹಚ್ಚುವುದರಲ್ಲೂ ತಪ್ಪಿಲ್ಲ. ಇದರಿಂದ ನಿಮ್ಮ ಮುಖದ ಕಾಂತಿ ವೃದ್ಧಿ ಆಗುವುದರಲ್ಲಿ ಸಂಶಯವಿಲ್ಲ. ಅಂತಹ ಕೆಲವು ಬ್ಯೂಟಿ ಟಿಪ್ಸ್​ಗಳು ಇಲ್ಲಿವೆ.

ಒಂದು ಟೇಬಲ್​ಸ್ಪೂನ್​ ಕಡಲೆ ಹಿಟ್ಟಿಗೆ ಎರಡು ಸ್ಪೂನ್​ ತುಪ್ಪ, ಸ್ವಲ್ಪ ನೀರು ಬೆರಿಸಿ ಚೆನ್ನಾಗಿ ಪೇಸ್ಟ್​ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಐದು ನಿಮಿಷ ಬಿಡಬೇಕು. ಬಳಿಕ ಒದ್ದೆ ಕೈಗಳಿಂದ ಚೆನ್ನಾಗಿ ಮುಖವನ್ನು ಮಸಾಜ್​ ಮಾಡಿ. ಈ ರೀತಿ ಮಾಡುವುದರಿಂದ ಮುಖದಲ್ಲಿರುವ ಸತ್ತ ಕೋಶಗಳು ನಾಶವಾಗಿ ಹೊಸ ಚೈತನ್ಯ ಬರಲಿದೆ. ಅಷ್ಟೆ ಏಕೆ ಮುಖವೂ ಕಾಂತಿಯುತವಾಗುತ್ತದೆ.

ಒಂದು ಟೇಬಲ್​ ಸ್ಪೂನ್​ ತುಪ್ಪ ಮತ್ತು ಜೇನು ತುಪ್ಪವನ್ನು ಚೆನ್ನಾಗಿ ಬೆರಸಿ, ಅದನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ಚೆನ್ನಾಗಿ ತೊಳೆಯಿರಿ. ಜೇನು ತುಪ್ಪದಲ್ಲಿನ ಆ್ಯಂಟಿ -ಬ್ಯಾಕ್ಟೀರಿಯಲ್​ ಗುಣಗಳು ಮುಖದ ಊರಿಯುತ ಮತ್ತು ಮೊಡವೆಯನ್ನು ಕಡಿಮೆ ಮಾಡುತ್ತದೆ. ತುಪ್ಪ ಮುಖಕ್ಕೆ ಮಾಶ್ಚರೈಸರ್​ ಒದಗಿಸಿ, ತ್ವಚೆಯನ್ನು ಆರೋಗ್ಯವಾಗಿ ಇರಿಸುತ್ತದೆ.

ಒಂದು ಸ್ಪೂನ್​ ತುಪ್ಪಕ್ಕೆ ಚಿಟಿಕೆ ಅರಿಶಿಣ ಹಾಕಿ ಕಲಸಿ ಮುಖಕ್ಕೆ ಹಚ್ಚಿ. ನಂತರ ಐದು ನಿಮಿಷ ಮೃದುವಾಗಿ ಮಸಾಜ್​ ಮಾಡಿ ಬಳಿಕ ಮುಖ ತೊಳೆಯಿರಿ. ಅರಿಶಿಣದಲ್ಲಿನ ಊರಿಯೂತ ವಿರೋಧಿ ಗುಣವು ಚರ್ಮಕ್ಕೆ ಕಾಂತಿ ನೀಡುತ್ತದೆ. ತುಪ್ಪ ಅಗತ್ಯವಾದ ಪೋಷಕಾಂಶವನ್ನು ನೀಡಿ, ಚರ್ಮವನ್ನು ತಾಜಾತನದಿಂದ ಇಡುತ್ತದೆ.

ಸೂರ್ಯನಿಗೆ ಒಡ್ಡಿಕೊಡ್ಡು ನಿಮ್ಮ ಚರ್ಮ ಟ್ಯಾನ್​ ಆಗಿದ್ದು, ಸುಟ್ಟ ಅನುಭವ ನಿಮಗೆ ಆಗಿದ್ದರೆ, ಆಲೋವೆರಾ ಮತ್ತು ತುಪ್ಪವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಹತ್ತು ನಿಮಿಷಗಳ ಬಳಿಕ ಮುಖವನ್ನು ಚೆನ್ನಾಗಿ ತೊಳೆಯಿರಿ.

ಒಂದು ಸ್ಪೂನ್​ ತುಪ್ಪವನ್ನು ಅರ್ಧ ಸ್ಪೂನ್​ ಗಂಧದ ಪುಡಿಯಲ್ಲಿ ಬೆರಿಸಿ ಹಚ್ಚುವುದರಿಂದಲೂ ಮುಖವೂ ಕಾಂತಿಯುತವಾಗುತ್ತದೆ.

ಇದನ್ನೂ ಓದಿ:ಭಾರತೀಯರ ಆರೋಗ್ಯ ಗುರಿಗಳ ಮೇಲೆ ಕುಟುಂಬ, ಸ್ನೇಹಿತರ ಪ್ರಭಾವ ಹೆಚ್ಚು, ಸಾಮಾಜಿಕ ಮಾಧ್ಯಮವಲ್ಲ: ಸಮೀಕ್ಷೆ

ABOUT THE AUTHOR

...view details