ಹೈದರಾಬಾದ್: ಕಲುಷಿತ ನೀರನ್ನು ಸೇವಿಸಿದಾಗ ಅಥವಾ ಇದರ ಸಂಪರ್ಕಕ್ಕೆ ಒಳಗಾದಾಗ ನೀರಿನಿಂದ ಹರಡುವ ರೋಗಗಳಿಗೆ ತುತ್ತಾಗುತ್ತೇವೆ. ಇದು ಹಾನಿಕಾರಕ ರೋಗಗಳನ್ನು ಹರಡುತ್ತದೆ. ಕಲುಷಿತ ನೀರಿನ ಸೇವನೆ ಅಥವಾ ಇಂತಹ ನೀರಿನಿಂದ ಅಡುಗೆ ತಯಾರಿಸುವುದು, ಶುಚಿಗೊಳಿಸುವುದು ಅಥವಾ ಇನ್ನಿತರ ಚಟುವಟಿಕೆಯಲ್ಲಿ ಬಳಕೆ ಮಾಡಿದಾಗ ಈ ನೀರಿನಿಂದ ಹರಡುವ ರೋಗಗಳಿಗೆ ತುತ್ತಾಗುತ್ತೇವೆ. ನೀರಿನಿಂದ ಹರಡುವ ಪ್ರಮುಖ ರೋಗಗಳು ಎಂದರೆ ಕಲಾರ, ಅತಿಸಾರ, ಹೆಪಟೈಟಿಸ್ ಎ, ಗಿಯಾರ್ಡಿಯಾಸಿಸ್.
ನೀರಿನಿಂದ ಹರಡುವ ರೋಗಗಳು ವಿವಿಧ ರೀತಿಯಲ್ಲಿದೆ. ಕೆಲವು ಸೌಮ್ಯ ಸ್ವಭಾವದಿಂದ ಕೂಡಿದ್ದು, ಕೆಲವು ಅಂಗಾಂಗಗಳ ಹಾನಿಯವರೆಗೆ ಪರಿಣಾಮವನ್ನು ಬೀರುತ್ತದೆ. ಇಂತಹ ನೀರಿನ ಮೂಲಗಳ ರೋಗಗಳಿಂದ ತಪ್ಪಿಸಿಕೊಳ್ಳಬೇಕು ಎಂದರೆ ಅದಕ್ಕೆ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ. ಇದರಿಂದ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.
ಶುದ್ದೀಕರಿಸಿದ ನೀರು: ನೀರಿನ ಸೇವನೆ ವಿಚಾರದಲ್ಲಿ ಸದಾ ಜಾಗ್ರತೆ ಅವಶ್ಯ. ಯಾವಾಗರೂ ಸುರಕ್ಷಿತ ನೀರಿನ ಸೇವನೆ ಮಾಡಬೇಕು. ಅದರಲ್ಲೂ ಶುದ್ಧೀಕರಿಸಿದ ಅಥವಾ ಕುದಿಸಿದ ನೀರಿನ ಸೇವನೆ ಉತ್ತಮ.
ಕೈ ಶುದ್ದತೆ ಕಾಯ್ದುಕೊಳ್ಳಿ: ನೀರಿನ ಶುದ್ದತೆ ಜೊತೆಗೆ ಕೈಗಳ ಶುದ್ದತೆಯೂ ಅತಿ ಮುಖ್ಯ. ಕೈಗಳನ್ನು ಕನಿಷ್ಠ 30 ಸೆಕೆಂಡ್ ಕಾಲ ಸೋಪ್ ಮತ್ತು ಶುದ್ದ ನೀರಿನಿಂದ ಸ್ವಚ್ಛ ಮಾಡಬೇಕು. ವಿಶೇಷವಾಗಿ ಏನಾದರೂ ಸೇವನೆ ಮಾಡುವಾಗ, ಕುಡಿಯುವ ಮುನ್ನ, ಹಾಗೆಯೇ ಶೌಚಾಲಯ ಬಳಕೆ ಮಾಡಿದ ನಂತರ ಕೈ ತೊಳೆಯುವುದನ್ನು ಮರೆಯಬಾರದು.
ಸ್ನಾನದ ಶುಚಿತ್ವ: ಹಾನಿಕಾರಕ ಜೀವಜಂತುಗಳಿರುವ ನೀರುಗಳಿಂದ ಸ್ನಾನ ಮಾಡುವುದರಿಂದಲೂ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಲುಷಿತ ನೀರಿನಿಂದ ಸ್ನಾನ ಮಾಡಿದಾಗ ಸೂಕ್ಷ್ಮಣು ಜೀವಿಗಳು ಬಾಯಿ, ಮೂಗು ಅಥವಾ ಕಣ್ಣಿನ ಮೂಲಕ ದೇಹವನ್ನು ಸೇರುವ ಸಾಧ್ಯತೆ ಇದೆ.
ಆಹಾರ ನಿರ್ವಹಣೆ: ತರಕಾರಿ, ಹಣ್ಣು ಅಥವಾ ಇನ್ನಿತರ ತಿನ್ನುವ ವಸ್ತುಗಳನ್ನು ಬಿಸಿ ನೀರಿನಿಂದ ತೊಳೆಯುವುದರಿಂದಲೂ ಶುಚಿತ್ವ ಕಾಪಾಡಬಹುದು. ಜೊತೆ ಆಹಾರವನ್ನು ಸದಾ ಶುದ್ದ ನೀರಿನಲ್ಲಿ ಬೇಯಿಸಬೆಕು.