ಲಂಡನ್:ಬ್ರಿಟನ್‌ನಲ್ಲಿ ಹಂದಿಗಳಲ್ಲಿ ಪ್ರಸರಣವಾಗುತ್ತಿರುವ ಹಂದಿ ಜ್ವರದ ರೀತಿಯಲ್ಲೇ ಇದೇ ಮೊದಲ ಬಾರಿಗೆ ಮಾನವನ ಅಪರೂಪದ ಇನ್ಫುಯೆಂಜಾ ಎ (ಎಚ್1ಎನ್2) ಪ್ರಕರಣ ಗೋಚರಿಸಿದೆ ಎಂದು ಬ್ರಿಟನ್ ಆರೋಗ್ಯ ರಕ್ಷಣಾ ದಳ (ಯುಕೆಎಚ್ಎಸ್ಎ) ತಿಳಿಸಿದೆ.
ಯುಕೆಯಲ್ಲಿ ದಾಖಲಾಗಿರುವ ಮೊದಲ ಮಾನವ ಜ್ವರದ ತಳಿ ಇದು ಎಂದು ಯುಕೆಎಚ್ಎಸ್ಎ ಹೇಳಿಕೆ ಬಿಡುಗಡೆ ಮಾಡಿದೆ. ಮಾನವನ ಆರೋಗ್ಯದ ಮೇಲೆ ಇದು ಒಡ್ಡುವ ಅಪಾಯ ಮತ್ತು ಈ ರೋಗಕಾರಕಗಳ ಗುಣಲಕ್ಷಣಗಳ ಕುರಿತು ಸೂಕ್ಷ್ಮ ಅಧ್ಯಯನ ನಡೆಸಲು ಸಂಸ್ಥೆ ಮುಂದಾಗಿದೆ.
2005ರಲ್ಲಿ ಜಾಗತಿಕವಾಗಿ ಎಚ್1ಎನ್2ನ ತಳಿಯ ಇನ್ಫುಯೆಂಜಾದ 50 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಯಾವುದೇ ಆನುವಂಶಿಕ ತಳಿಯಿಲ್ಲ. ಇನ್ಫುಯೆಂಜಾ ಎ(ಎಚ್1ಎನ್2) ಈ ಹಿಂದೆ ಯುಕೆಯಲ್ಲಿ ಮನುಷ್ಯರಲ್ಲಿ ಕಂಡುಬಂದಿತ್ತು.
ಹಂದಿ ಇನ್ಫುಯೆಂಜಾ ವೈರಸ್‌ನೊಂದಿಗೆ ಮಾನವ ಸೋಂಕು ಕೂಡ ಸಾಂದರ್ಭಿಕವಾಗಿ ಪತ್ತೆಯಾಗುತ್ತದೆ. ಈ ಮೊದಲಿನ ಮಾಹಿತಿ ಅನುಸಾರ, ಯುಕೆಯಲ್ಲಿ ಪತ್ತೆಯಾದ ಸೋಂಕು (1ಬಿ.1.1) ಜಗತ್ತಿನ ಬೇರೆಡೆ ಕಂಡುಬಂದ ಮಾನವನ ಪ್ರಕರಣಕ್ಕಿಂತ (ಎಚ್1ಎನ್2) ಭಿನ್ನ. ಇದು ಬ್ರಿಟನ್ನ ಹಂದಿ ಜ್ವರದ ವೈರಸ್ ಲಕ್ಷಣ ಹೊಂದಿದೆ.
ಸೋಂಕಿನ ಮೂಲ ಪತ್ತೆಗೆ ಕ್ರಮ:ಎಚ್1ಎನ್2 ಗೋಚರಿಸಿದ ರೋಗಿಗಳು ಉಸಿರಾಟ ಸಮಸ್ಯೆ ಎದುರಿಸುತ್ತಿದ್ದಾರೆ. ರೋಗಿಗಳ ಮೇಲೆ ಯುಕೆಎಚ್ಎಸ್ಎ ಅಡಿಯ ರಾಷ್ಟ್ರೀಯ ಜ್ವರ ಕಣ್ಗಾವಲು ಮತ್ತು ರಾಯಲ್ ಕಾಲೇಜ್ ಆಫ್ ಜನರಲ್ ಪ್ರಾಕ್ಟಿಷನರಿ ಕಣ್ಗಾವಲಿರಿಸಿದೆ. ಈ ಸೋಂಕು ಹೊಂದಿರುವ ರೋಗಿಗಳಲ್ಲಿ ಸೌಮ್ಯ ಸ್ವಭಾವದ ಅನಾರೋಗ್ಯ ಕಂಡುಬಂದಿದ್ದು, ಅವರು ಸಂಪೂರ್ಣ ಚೇತರಿಕೆ ದರ ಹೊಂದಿದ್ದಾರೆ. ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ, ಇನ್ನೂ ತನಿಖೆ ಮುಂದುವರೆಸಲಾಗಿದೆ.
ದೈನಂದಿನ ಜ್ವರದ ಕಣ್ಗಾವಲು ಮತ್ತು ಜಿನೋಮ್ ಸಿಕ್ವೆನ್ಸಿಂಗ್ನಿಂದ ಈ ವೈರಸ್ ಪತ್ತೆಯಾಗಿದೆ. ಸೋಂಕಿನ ಸಂಪರ್ಕ ಮತ್ತು ಯಾವುದರಿಂದ ಪ್ರಸರಣವಾಗಿದೆ ಎಂಬುದರ ಪತ್ತೆಗೆ ಸಂಶೋಧನೆ ಆರಂಭಿಸಲಾಗಿದೆ ಎಂದು ಯುಕೆಎಚ್ಎಸ್ಎ ಇನ್ಸಿಡೆಂಟ್ ಡೈರೆಕ್ಟರ್ ಮೀರಾ ಚಂದ್ ತಿಳಿಸಿದ್ದಾರೆ.
ಜನರಲ್ಲಿ ಉಸಿರಾಟ ಸಮಸ್ಯೆ ಲಕ್ಷಣಗಳು ಕಂಡುಬಂದ ರೋಗಿಗಳ ಸಂಪರ್ಕವನ್ನು ತಪ್ಪಿಸುವುದು ಅಗತ್ಯವೆಂದು ಇದೇ ವೇಳೆ ಯುಕೆಎಚ್ಎಸ್ಎ ಜನರಿಗೆ ಸಲಹೆ ನೀಡಿದೆ.
2009ರಲ್ಲಿ ಮಾನವ ಸಂಬಂಧ ಇನ್ಫುಯೆಂಜಾ ಪ್ರಕರಣ ಸಾಂಕ್ರಾಮಿಕತೆ ಉದ್ಬವಿಸಿತ್ತು. ಇದನ್ನು ಸ್ವೈನ್ ಫ್ಲೂ/ ಹಂದಿ ಜ್ವರ ಎಂದು ಕರೆಯಲಾಗಿತ್ತು.(ಐಎಎನ್ಎಸ್)
ಇದನ್ನೂ ಓದಿ: ಬಿಹಾರದಲ್ಲಿ ನಿಗೂಢ ಕಾಯಿಲೆ: ತನಿಖೆಗೆ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಆಗಮನ