ಕರ್ನಾಟಕ

karnataka

ETV Bharat / sukhibhava

ಇಷ್ಟವಿಲ್ಲದ ಆಹಾರ ಹೊಟ್ಟೆಯಲ್ಲೇ ತಿರಸ್ಕರಿಸುವ ಭ್ರೂಣ..ಅಮ್ಮ ತಿನ್ನಬೇಕು ಕಂದ ಮೆಚ್ಚುವ ಊಟ - ಯಾವ ರುಚಿ ಅಳುವಿನ ಮುಖ

ತಾಯಂದಿರು ಸುವಾಸನೆ ಸೇವಿಸಿದ ಸ್ವಲ್ಪ ಸಮಯದ ನಂತರ ಭ್ರೂಣಗಳು ಕ್ಯಾರೆಟ್​ ಅಥವಾ ಕೇಲ್​ ರುಚಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಸಂಶೋಧಕರು ನೋಡಿದ್ದಾರೆ. ಮಕ್ಕಳು ಯಾವ ರುಚಿ ನಗು ಹಾಗೂ ಯಾವ ರುಚಿ ಅಳುವಿನ ಮುಖ ತೋರಿಸುತ್ತವೆ ಎಂಬುದನ್ನು ಕಂಡುಕೊಳ್ಳಲಾಗಿದೆ.

Fetus senses taste and smell while in womb
ಇಷ್ಟವಿಲ್ಲದ ಆಹಾರ ತಿಂದರೆ ಮುಖ ಸಿಂಡರಿಸುವ ಶಿಶು

By

Published : Sep 29, 2022, 7:34 PM IST

Updated : Sep 29, 2022, 7:56 PM IST

ಇನ್ನೂ ಹುಟ್ಟದೇ ಇರುವ, ಹೊಟ್ಟೆಯಲ್ಲಿರುವ ಕಂದಮ್ಮಗಳು ತಮ್ಮ ತಾಯಂದಿರು ತಿನ್ನುವ ಆಹಾರದ ರುಚಿಗಳಿಗೆ ಯಾವ ರೀತಿ ಪ್ರತಿಯೆ ನೀಡುತ್ತವೆ ಎಂಬುದನ್ನು ಅಧ್ಯಯನ ನಡೆಸಲು ಯುಕೆಯ ಡುರ್ಹಮ್​ ವಿಶ್ವವಿದ್ಯಾಲಯದ ಫೆಟಲ್​ ಅಂಡ್​​​ ನಿಯೋನಟಲ್​ ರಿಸರ್ಚ್​ ಲ್ಯಾಬ್​ನ ವಿಜ್ಞಾನಿಗಳು 100 ಗರ್ಭಿಣಿ ಮಹಿಳೆಯರ 4D ಆಲ್ಟ್ರಾಸೌಂಡ್​ ಸ್ಕ್ಯಾನ್​ ನಡೆಸಿದ್ದಾರೆ. ಅದರಲ್ಲೂ ತಂಡ ಕೇಲ್​ ಹಾಗೂ ಕ್ಯಾರೆಟ್​ ರುಚಿಗಳಿಗೆ ಭ್ರೂಣಗಳ ಮುಖದ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಂಡುಹಿಡಿಯಲು ಸ್ಕ್ಯಾನ್​ ಮಾಡಿದೆ.

ತಾಯಂದಿರು ಸುವಾಸನೆ ಸೇವಿಸಿದ ಸ್ವಲ್ಪ ಸಮಯದ ನಂತರ ಭ್ರೂಣಗಳು ಕ್ಯಾರೆಟ್​ ಅಥವಾ ಕೇಲ್​ ರುಚಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಸಂಶೋಧಕರು ನೋಡಿದ್ದಾರೆ. ಕ್ಯಾರೆಟ್‌ ರುಚಿಗೆ ಭ್ರೂಣಗಳು ಹೆಚ್ಚು ನಗು - ಮುಖ ಪ್ರತಿಕ್ರಿಯೆಗಳನ್ನು ತೋರಿಸಿದರೆ ಕೇಲ್‌ ರುಚಿಗೆ ಹೆಚ್ಚು ಅಳುವ - ಮುಖದ ಪ್ರತಿಕ್ರಿಯೆಗಳನ್ನು ತೋರಿಸಿವೆ. ಮಾನವನ ರುಚಿ ಮತ್ತು ವಾಸನೆ ಗ್ರಾಹಕಗಳ ಬೆಳವಣಿಗೆಯ ಬಗ್ಗೆ ಸಂಶೋಧನೆಗಳು ಈ ವಿಚಾರ ಹೇಳಿವೆ.

ಹೊಟ್ಟೆಯಲ್ಲಿರುವ ಮಕ್ಕಳ ಮೇಲೆ ಆಹಾರದ ಪ್ರಭಾವ:ಗರ್ಭಿಣಿಯರು ತಿನ್ನುವ ಆಹಾರಗಳು, ಮಕ್ಕಳು ಹುಟ್ಟಿದ ಮೇಲೆ ಅವುಗಳ ರುಚಿಯ ಆದ್ಯತೆ ಮೇಲೆ ಪ್ರಭಾವ ಬೀರಬಹುದು. ಅದರ ಜೊತೆಗೆ ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿ ಸ್ಥಾಪಿಸುವಲ್ಲಿಯೂ ಪರಿಣಾಮ ಬೀರುವ ಸಾಧ್ಯತೆ ಇರುತ್ತವೆ. ಈ ಅಧ್ಯಯನವು ಸೈಕಲಾಜಿಕಲ್ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ನಾವು ಮನುಷ್ಯರು ಆಹಾರದ ರುಚಿ ಮತ್ತು ವಾಸನೆಯ ಸಂಯೋಜನೆಯ ಮೂಲಕ ಅದನ್ನು ಅನುಭವಿಸುತ್ತೇವೆ. ಭ್ರೂಣಗಳಲ್ಲಿ ಇದು ಗರ್ಭಾಶಯದಲ್ಲಿನ ಆಮ್ನಿಯೋಟಿಕ್ ದ್ರವವನ್ನು ಉಸಿರಾಡುವ ಮತ್ತು ನುಂಗುವ ಮೂಲಕ ಸಂಭವಿಸಬಹುದು ಎಂದು ಭಾವಿಸಲಾಗಿದೆ.

ಶಿಶುಗಳು ಗರ್ಭದಲ್ಲಿರುವಾಗಲೇ ರುಚಿ ಮತ್ತು ವಾಸನೆಯನ್ನು ಗ್ರಹಿಸುತ್ತವೆ ಎಂದು ಹಲವಾರು ಅಧ್ಯಯನಗಳು ಸೂಚಿಸಿವೆ. ಆದರೆ ಅವು ಜನನದ ನಂತರದ ಫಲಿತಾಂಶಗಳನ್ನು ಆಧರಿಸಿವೆ. ಆದರೆ ನಮ್ಮ ಅಧ್ಯಯನವು ಜನನದ ಮೊದಲು ಈ ಪ್ರತಿಕ್ರಿಯೆಗಳನ್ನು ನೋಡಿರುವುದು ಮೊದಲು ಎಂದು ಡರ್ಹಾಮ್ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಫೆಟಲ್​ ಮತ್ತು ನಿಯೋನಾಟಲ್ ರಿಸರ್ಚ್ ಲ್ಯಾಬ್‌ನಲ್ಲಿ ಸ್ನಾತಕೋತ್ತರ ಸಂಶೋಧಕರಾದ ಪ್ರಮುಖ ಸಂಶೋಧಕ ಬೆಯ್ಜಾ ಉಸ್ತುನ್ ಹೇಳಿದ್ದಾರೆ.

ಗರ್ಭದಲ್ಲಿರುವ ಮಕ್ಕಳು ಸುವಾಸನೆ ಮೆಚ್ಚಿಕೊಳ್ಳುತ್ತವೆ:ಈ ಅಧ್ಯಯನದಿಂದಾಗಿ ಮಗು ಗರ್ಭದಲ್ಲಿರುವಾಗಲೇ ಮಕ್ಕಳು ಯಾವ ಸುವಾಸನೆಯನ್ನು ಮೆಚ್ಚಿಕೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳುವುದರಿಂದ ಮಕ್ಕಳು ಹುಟ್ಟಿದ ನಂತರದ ಆಹಾರದ ಆದ್ಯತೆಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಸ್ಕ್ಯಾನ್‌ಗಳ ಸಮಯದಲ್ಲಿ ಕೇಲ್ ಅಥವಾ ಕ್ಯಾರೆಟ್ ರುಚಿಗೆ ಹುಟ್ಟಲಿರುವ ಶಿಶುಗಳ ಪ್ರತಿಕ್ರಿಯೆಯನ್ನು ನೋಡುವುದು ಮತ್ತು ಆ ಕ್ಷಣಗಳನ್ನು ಅವರ ಪೋಷಕರೊಂದಿಗೆ ಹಂಚಿಕೊಳ್ಳುವುದು ನಿಜವಾಗಿಯೂ ಅದ್ಭುತವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಯುಕೆಯ ಆಸ್ಟನ್ ವಿಶ್ವವಿದ್ಯಾಲಯ, ಬರ್ಮಿಂಗ್ಹ್ಯಾಮ್ ಮತ್ತು ಫ್ರಾನ್ಸ್​ನ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್-ಯುನಿವರ್ಸಿಟಿ ಆಫ್ ಬರ್ಗಂಡಿ ವಿಶ್ವವಿದ್ಯಾಲಯಗಳು ಕೂಡಾ ಈ ಅಧ್ಯಯನದಲ್ಲಿ ಭಾಗಿಯಾಗಿವೆ. ವಿಜ್ಞಾನಿಗಳ ತಂಡ ಕೇಲ್ ಮತ್ತು ಕ್ಯಾರೆಟ್ ರುಚಿಗಳಿಗೆ ಭ್ರೂಣದ ಮುಖದ ಪ್ರತಿಕ್ರಿಯೆಗಳನ್ನು ತಿಳಿಯಲು 18 ರಿಂದ 40 ವರ್ಷ ವಯಸ್ಸಿನ 32 ವಾರಗಳು ಮತ್ತು 36 ವಾರಗಳ ಗರ್ಭಾವಸ್ಥೆಯಲ್ಲಿದ್ದ ತಾಯಂದಿರನ್ನು ಸ್ಕ್ಯಾನ್ ಮಾಡಿದೆ.

ಅಧ್ಯಯನ ನಡೆದಿದ್ದು ಹೀಗೆ:ಪ್ರತಿ ಸ್ಕ್ಯಾನ್‌ಗೆ ಸುಮಾರು 20 ನಿಮಿಷಗಳ ಮೊದಲು ತಾಯಂದಿರಿಗೆ ಸರಿಸುಮಾರು 400mg ಕ್ಯಾರೆಟ್ ಅಥವಾ 400mg ಕೇಲ್ ಪೌಡರ್ ಹೊಂದಿರುವ ಒಂದೇ ಕ್ಯಾಪ್ಸುಲ್ ಅನ್ನು ನೀಡಲಾಯಿತು. ಅವರ ಸ್ಕ್ಯಾನ್‌ಗೆ ಒಂದು ಗಂಟೆ ಮೊದಲು ಯಾವುದೇ ಆಹಾರ ಅಥವಾ ಸುವಾಸನೆಯ ಪಾನೀಯಗಳನ್ನು ಸೇವಿಸದಂತೆ ಹೇಳಲಾಗಿತ್ತು. ಭ್ರೂಣದ ಪ್ರತಿಕ್ರಿಯೆಗಳ ಮೇಲೆ ಪರಿಣಾಮ ಬೀರುವ ಅಂಶಗಳನ್ನು ನಿಯಂತ್ರಿಸಲು ತಾಯಂದಿರು ತಮ್ಮ ಸ್ಕ್ಯಾನ್‌ನ ದಿನದಂದು ಕ್ಯಾರೆಟ್ ಅಥವಾ ಕೇಲ್ ಹೊಂದಿರುವ ಏನನ್ನೂ ತಿನ್ನುವುದು ಅಥವಾ ಕುಡಿಯುವುದು ಮಾಡಿರಲಿಲ್ಲ.

ಡರ್ಹಾಮ್ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಫೆಟಲ್​ ಮತ್ತು ನಿಯೋನಾಟಲ್ ರಿಸರ್ಚ್ ಲ್ಯಾಬ್‌ನ ಮುಖ್ಯಸ್ಥೆ, ಸಹ-ಲೇಖಕಿ ಪ್ರೊಫೆಸರ್ ನಡ್ಜಾ ರೀಸ್‌ಲ್ಯಾಂಡ್, ಬೇಯ್ಜಾ ಉಸ್ತುನ್ ಅವರ ಸಂಶೋಧನೆಯನ್ನು ಮೇಲ್ವಿಚಾರಣೆ ಮಾಡಿದರು. ನನ್ನ ಪ್ರಯೋಗಾಲಯದಲ್ಲಿ ನಡೆಸಲಾದ ಹಿಂದಿನ ಸಂಶೋಧನೆಯು 4D ಅಲ್ಟ್ರಾಸೌಂಡ್ ಸ್ಕ್ಯಾನ್​ಗಳು ಭ್ರೂಣಗಳು ತಾಯಿಯ ಆರೋಗ್ಯ ನಡವಳಿಕೆಗಳಾದ ಧೂಮಪಾನ ಮತ್ತು ಒತ್ತಡ, ಖಿನ್ನತೆ ಮತ್ತು ಆತಂಕ ಸೇರಿದಂತೆ ಅವರ ಮಾನಸಿಕ ಆರೋಗ್ಯಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ವಿವರಿಸಿತ್ತು.

ಇತ್ತೀಚಿನ ಅಧ್ಯಯನವು ತಮ್ಮ ತಾಯಂದಿರು ಸೇವಿಸುವ ಆಹಾರದಿಂದ ವಿಭಿನ್ನ ರುಚಿಗಳು ಮತ್ತು ವಾಸನೆಗಳನ್ನು ಗ್ರಹಿಸುವ ಮತ್ತು ವ್ಯತ್ಯಾಸ ಗುರುತಿಸುವ ಭ್ರೂಣದ ಸಾಮರ್ಥ್ಯ ಕಂಡುಹಿಡಿಯಲು ಪರಿಣಾಮಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ತಾಯಿಯ ಆಹಾರದ ಮೂಲಕ ಭ್ರೂಣಕ್ಕೆ ರವಾನೆ:ಫ್ರಾನ್ಸ್‌ನ ಬರ್ಗಂಡಿಯ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್-ಯೂನಿವರ್ಸಿಟಿಯ ಸಹ-ಲೇಖಕ ಪ್ರೊಫೆಸರ್ ಬೆನೊಯಿಸ್ಟ್ ಸ್ಚಾಲ್, ಭ್ರೂಣದ ಮುಖದ ಪ್ರತಿಕ್ರಿಯೆಗಳನ್ನು ನೋಡುವಾಗ ಹಲವಾರು ರಾಸಾಯನಿಕ ಪ್ರಚೋದನೆಗಳು ತಾಯಿಯ ಆಹಾರದ ಮೂಲಕ ಭ್ರೂಣದ ಪರಿಸರಕ್ಕೆ ಹಾದು ಹೋಗುತ್ತವೆ ಎಂಬುದನ್ನು ನಾವು ಊಹಿಸಬಹುದು.

ನಮ್ಮ ರುಚಿ ಮತ್ತು ವಾಸನೆ ಗ್ರಾಹಕಗಳ ಅಭಿವೃದ್ಧಿ ಮತ್ತು ಸಂಬಂಧಿತ ಗ್ರಹಿಕೆ ಮತ್ತು ಸ್ಮರಣೆಯ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳಲು ಇದು ಸಹಕಾರಿ ಎಂದಿದ್ದಾರೆ. ಈ ಸಂಶೋಧನೆಗಳಿಂದ ತಾಯಂದಿರು ಗರ್ಭಾವಸ್ಥೆಯಲ್ಲಿ ಯಾವ ರೀತಿ ರುಚಿ ಮತ್ತು ಆರೋಗ್ಯಕರ ಆಹಾರಕ್ಕೆ ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ಹೇಳಲು ಸಹಾಯ ಮಾಡಬಹುದು ಎಂದು ಸಂಶೋಧಕರು ಹೇಳುತ್ತಾರೆ.

ಇಷ್ಟದ ಸುವಾಸನೆಗಳನ್ನು ನೀಡಿ ಪರೀಕ್ಷೆ:ಗರ್ಭಾಶಯದಲ್ಲಿರುವಾಗ ಅವರು ಅನುಭವಿಸಿದ ರುಚಿಗಳ ಪ್ರಭಾವ ಅವರು ಹುಟ್ಟಿದ ಮೇಲೆ ಅವರು ಸ್ವೀಕರಿಸುವ ಆಹಾರಗಳ ಮೇಲೆ ಪ್ರಭಾವ ಬೀರಿದೆಯೇ ಎಂಬುದನ್ನು ಕಂಡುಕೊಳ್ಳಲು ವಿಜ್ಞಾನಿಗಳು ಆ ಮಕ್ಕಳ ಮೇಲೆ ಮುಂದಿನ ಅಧ್ಯಯನ ಪ್ರಾರಂಭಿಸಿದ್ದಾರೆ.

ಆಸ್ಟನ್ ವಿಶ್ವವಿದ್ಯಾಲಯದ ಸಂಶೋಧನಾ ಸಹ-ಲೇಖಕ ಪ್ರೊಫೆಸರ್ ಜಾಕಿ ಬ್ಲಿಸೆಟ್, ಪ್ರಸವಪೂರ್ವದಲ್ಲಿ ಪದೇ ಪದೇ ಪರಿಮಳವನ್ನು ನೀಡಿ ಪರೀಕ್ಷಿಸುವುದು, ಪ್ರಸವನಂತರದ ಮಕ್ಕಳ ಆಯ್ಕೆಯ ಮೇಲೆ ಪರಿಣಾಮ ಬೀರಬಹುದು. ಯಾವ ರೀತಿ ಎಂದರೆ ಭ್ರೂಣಕ್ಕೆ ಕಡಿಮೆ ಇಷ್ಟಪಡುವ ಸುವಾಸನೆಗಳನ್ನು ನೀಡುವುದರಿಂದ ಉದಾಹರಣೆಗೆ ಕೇಲ್, ಆ ಸುವಾಸನೆಯನ್ನು ಪದೇ ಪದೇ ಆಸ್ವಾಧಿಸಿ, ಗರ್ಭಾಶಯದಲ್ಲಿರುವಾಗ ಮಗು ಆ ಸುವಾಸನೆಗಳಿಗೆ ಒಗ್ಗಿಕೊಂಡಿರುತ್ತವೆ.

ಭ್ರೂಣಗಳು ಕಾಲಾನಂತರದಲ್ಲಿ ಈ ಸುವಾಸನೆಗಳಿಗೆ ಕಡಿಮೆ ಋಣಾತ್ಮಕ ಪ್ರತಿಕ್ರಿಯೆಗಳನ್ನು ತೋರಿಸುತ್ತವೆಯೇ ಎಂಬುದನ್ನು ಪರೀಕ್ಷಿಸುವುದು ಮುಂದಿನ ಹಂತವಾಗಿದೆ. ಇದರ ಪರಿಣಾಮವಾಗಿ ಶಿಶುಗಳು ಗರ್ಭಾಶಯದ ಹೊರಗೆ ಬಂದ ನಂತರ ಮೊದಲು ಅವುಗಳನ್ನು ರುಚಿ ಮಾಡಿದಾಗ ಆ ಸುವಾಸನೆಗಳನ್ನು ಶೀಘ್ರದಲ್ಲೇ ಸ್ವೀಕರಿಸಿ ಬಿಡುತ್ತವೆ ಎನ್ನುತ್ತಾರೆ.

ಇದನ್ನೂ ಓದಿ:ಇಮ್ಯುನೊ ಡಿಫಿಷಿಯನ್ಸಿ ಕಾಯಿಲೆ ಇರುವ ಮಕ್ಕಳು ಕೋವಿಡ್‌ನಿಂದ ಹೆಚ್ಚು ಅಪಾಯ

Last Updated : Sep 29, 2022, 7:56 PM IST

ABOUT THE AUTHOR

...view details