ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬರಲ್ಲ ಎಂಬ ಗಾದೆ ಮಾತನ್ನು ನಾವು ನೀವೆಲ್ಲಾ ಕೇಳಿದ್ದೀವಿ. ಇದರ ಅರ್ಥವೆನೆಂದರೇ, ಒಂದು ಬಾರಿ ಕೋಪದಲ್ಲಿ ಮಾಡಿದ ತಪ್ಪನ್ನು ಮತ್ತೆ ಸರಿಪಡಿಸಲು ಆಗುವುದಿಲ್ಲ. ಅತಿಯಾದ ಕೋಪವು ಮನಸ್ಸಿನ ಮೇಲೆ ಪರಿಣಾಮ ಬೀರುವುದಲ್ಲದೆ, ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಕೋಪ ಎಂಬುದು ನಮ್ಮ ಸಾಮಾಜಿಕ, ಕುಟುಂಬ ಮತ್ತು ಕೆಲಸದ ಮೇಲೂ ಪರಿಣಾಮ ಬೀರಬಹುದು. ಕೆಲವೊಮ್ಮೆ ಇದು ಮಾನಸಿಕ ಕಾಯಿಲೆ, ಕ್ಲಿನಿಕಲ್ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.
ಕೋಪದಿಂದ ಹಿಂಸಾತ್ಮಕ ಕೃತ್ಯ: ಹೆಚ್ಚು ಕೋಪವನ್ನು ಹೊಂದಿರುವ ವ್ಯಕ್ತಿ ರೋಗಿಯೂ ಆಗುವ ಸಾಧ್ಯತೆ ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಕೋಪಗೊಳ್ಳುತ್ತಾನೆ. ವ್ಯಕ್ತಿಯ ಅಧ್ಯಯನ, ಕೆಲಸ, ಸಂಬಂಧಗಳು, ದೈಹಿಕ ಸಮಸ್ಯೆಗಳು ಹೀಗೆ ಅನೇಕ ಕಾರಣಗಳು ಕೋಪವನ್ನು ಉಂಟುಮಾಡಬಹುದು. ಸಾಮಾನ್ಯವಾಗಿ ಕೆಲವರು ಕೋಪದಲ್ಲಿ ತಮ್ಮ ಅಭಿಪ್ರಾಯ ಅಥವಾ ಭಾವನೆಯನ್ನು ವ್ಯಕ್ತಪಡಿಸಿ, ಸ್ವಲ್ಪ ಸಮಯದ ನಂತರ ಶಾಂತವಾಗುತ್ತಾರೆ. ಆದರೆ ಕೆಲವೊಮ್ಮೆ ಕೆಲವರಿಗೆ ತಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಅವರ ಕೋಪ ಎಷ್ಟರಮಟ್ಟಿಗೆ ಹೆಚ್ಚಾಗುತ್ತದೆ ಎಂದರೆ ಅವರು ಹಿಂಸಾತ್ಮಕವಾಗಿ ತಿರುಗಲು ಸಹ ಕಾರಣವಾಗುತ್ತದೆ.
ಇಂತಹ ಸ್ಥಿತಿಯು ವ್ಯಕ್ತಿಗಳಲ್ಲಿ ಸಮಸ್ಯೆಯನ್ನು ಉಂಟುಮಾಡಬಹುದು ಎಂದು ಮನೋವಿಜ್ಞಾನಿಗಳು ನಂಬುತ್ತಾರೆ. ಅತಿಯಾದ ಕೋಪವು ಓರ್ವ ವ್ಯಕ್ತಿಯ ಕೆಲಸದ ಜೀವನದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೇ, ಯಾವುದೇ ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಹುದು. ಆದರೆ ಅತಿಯಾದ ಕೋಪವು ಕೆಲವೊಮ್ಮೆ ವ್ಯಕ್ತಿಯನ್ನು ಹಿಂಸಾಚಾರ ಮತ್ತು ಅಪರಾಧದ ಕಡೆಗೆ ಕರೆದೊಯ್ಯುತ್ತದೆ.
ಜನರಲ್ಲಿ ಹೆಚ್ಚುತ್ತಿರುವ ಕೋಪ:ಅಮೆರಿಕನ್ ಫಿಸಿಯೋಲಾಜಿಕಲ್ ಅಸೋಸಿಯೇಷನ್ ನೀಡಿದ ಕೋಪದ ವ್ಯಾಖ್ಯಾನದ ಪ್ರಕಾರ, "ಕೋಪವು ಪ್ರತಿಕೂಲ ಸಂದರ್ಭಗಳಲ್ಲಿ ಸಹಜವಾದ ಅಭಿವ್ಯಕ್ತಿಯಾಗಿದೆ. ಇದು ಆರೋಪಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಥವಾ ಒಬ್ಬರ ಅಸ್ತಿತ್ವವನ್ನು ರಕ್ಷಿಸಲು ಅಗತ್ಯವಾಗಿರುತ್ತದೆ.
ಅದೇ ಸಮಯದಲ್ಲಿ, ನಮ್ಮ ಭಾರತೀಯ ಸಾಹಿತ್ಯದಲ್ಲಿ, ಕೋಪವನ್ನು ಒಂದು ಪ್ರಮುಖ ರಸ ಅಥವಾ ಭಾವನೆ ಎಂದು ಪರಿಗಣಿಸಲಾಗುತ್ತದೆ. ಆದರೆ ಪ್ರಸ್ತುತ, ಪ್ರಪಂಚದಾದ್ಯಂತ ವಿವಿಧ ಕಾರಣಗಳಿಂದ ಜನರಲ್ಲಿ ಕೋಪ ಮತ್ತು ಒತ್ತಡದಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕೋಪ ಅಥವಾ ಕೋಪದ ಸಮಸ್ಯೆಗಳು ಮತ್ತು ಅದರಿಂದ ಉಂಟಾಗುವ ಕ್ಲಿನಿಕಲ್ ಅಸ್ವಸ್ಥತೆಗಳು ಪ್ರಪಂಚದಾದ್ಯಂತ ಹೆಚ್ಚುತ್ತಿವೆ.
ಆತಂಕದ ಯುಗ: ಜಗತ್ತಿನಾದ್ಯಂತ ನಡೆದ ಹಲವು ಸಂಶೋಧನೆಗಳಲ್ಲೂ ಈ ವಿಷಯ ದೃಢಪಟ್ಟಿದೆ. ಈ ಕಾರಣದಿಂದಾಗಿ, ಪ್ರಪಂಚದಾದ್ಯಂತದ ಮನಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರಜ್ಞರು ಇಂದಿನ ಯುಗವನ್ನು 'ಆತಂಕದ ಯುಗ' ಎಂಬ ಹೆಸರಿನಿಂದ ಸಂಬೋಧಿಸುತ್ತಿದ್ದಾರೆ.
ಮಾನಸಿಕ ಸಮಸ್ಯೆ ಹೆಚ್ಚಳ: ಉತ್ತರಾಖಂಡ ಮೂಲದ ಮನಶಾಸ್ತ್ರಜ್ಞ ಡಾ. ರೇಣುಕಾ ಶರ್ಮಾ ಅವರ ಪ್ರಕಾರ, ತೀವ್ರವಾದ ಕೋಪವನ್ನು ಹೊಂದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಆದರೆ ಇದು ಕೆಲವೊಮ್ಮೆ ಕೆಲವು ಇತರ ಮಾನಸಿಕ ಸಮಸ್ಯೆಗಳು ಮತ್ತು ಅಸ್ವಸ್ಥತೆಗಳನ್ನು ಪ್ರಚೋದಿಸಬಹುದು. ಇಲ್ಲವೇ ಈಗಾಗಲೇ ಸೈಕೋಸಿಸ್ನಿಂದ ಬಳಲುತ್ತಿರುವ ವ್ಯಕ್ತಿಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.
ಕೋಪವು ಅಸ್ವಸ್ಥತೆಯಾಗಿ ಬದಲಾದಾಗ, ಅದು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇದು ನಮ್ಮ ಜೀವನದ ಗುಣಮಟ್ಟವನ್ನು ಹಾಳುಮಾಡುತ್ತದೆ ಎಂದು ಅವರು ಹೇಳುತ್ತಾರೆ. ಪ್ರಸ್ತುತ, ಕ್ಲಿನಿಕಲ್ ಆತಂಕದ ಕಾಯಿಲೆ ಸೇರಿದಂತೆ ಅನೇಕ ಮಾನಸಿಕ ಅಸ್ವಸ್ಥತೆಗಳಿಗೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಅತಿಯಾದ ಕೋಪವೂ ಒಂದು ಕಾರಣವಾಗಿದೆ.