ಕರ್ನಾಟಕ

karnataka

ETV Bharat / sukhibhava

ಚಳಿಗಾಲದಲ್ಲಿ ಹೆಚ್ಚುತ್ತಿದೆ ಕಿವಿ ಸೋಂಕಿನ ಪ್ರಕರಣ; ಮುಂಜಾಗ್ರತೆ ಅಗತ್ಯ - ಕಿವಿ ಸೋಂಕಿನ ಮುನ್ನೆಚ್ಚರಿಕೆ

ಚಳಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಕಿವಿಯ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ.

ear infections cases rising in winter
ear infections cases rising in winter

By ETV Bharat Karnataka Team

Published : Dec 14, 2023, 11:08 AM IST

ನವದೆಹಲಿ:ಕಿವಿ ಸೋಂಕಿನ ಹಿನ್ನೆಲೆ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ರೋಗಿಗಳ ಸಂಖ್ಯೆ ಅಧಿಕ ಆಗಿದ್ದು, ಇದಕ್ಕೆ ಕಾರಣ ಚಳಿಗಾಲ ಎಂದು ವೈದ್ಯರು ತಿಳಿಸಿದ್ದಾರೆ.

ಕಿವಿ ಸೋಂಕಿನ ಜೊತೆಗೆ ಕೆರೆತ ಮತ್ತು ಊತಗಳು ಎಲ್ಲ ವಯಸ್ಸಿನವರನ್ನು ಕಾಡುತ್ತಿದೆ. ಕಾರಣ ಚಳಿ ಹವಾಮಾನದಿಂದ ವೈರಲ್​ ಉರಿಯೂತ ಆಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತೀಚಿನ ದಿನದಲ್ಲಿ ಎಲ್ಲಾ ವಯೋಮಾನದ ಗುಂಪಿನವರಲ್ಲಿ ಕಿವಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಕಾರಣ ಚಳಿ ತಾಪಮಾನವೂ ಬ್ಯಾಕ್ಟಿರೀಯಾ ಮತ್ತು ವೈರಸ್​ ಪ್ರತಿಕೂಲ ಹವಾಮಾನ ಇದ್ದು, ಇದು ಅವರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಸಮಸ್ಯೆಗೆ ಕಾರಣವಾಗುತ್ತದೆ. ಇದರ ಪರಿಣಾಮ ಬ್ಯಾಕ್ಟಿರಿಯಲ್​ ಅಥವಾ ವೈರಲ್​ ಉರಿಯೂತ ಉಂಟಾಗಿ ಅದು ಕಿವಿಗೆ ಹಾನಿಯಾಗುತ್ತದೆ ಎಂದು ದೆಹಲಿಯ ಅಪೊಲೋ ಸ್ಪೆಕ್ಟ್ರಂನ ಇಎನ್​ಟಿ ಸರ್ಜನ್​ ಡಾ ಸಂಜೀವ್​ ಡಾಂಗ್​ ತಿಳಿಸಿದ್ದಾರೆ.

ಚಳಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಅದು ಕಿವಿಯಲ್ಲಿ ಉರಿಯೂತ, ನೋವಿಗೆ ಕಾರಣವಾಗುತ್ತದೆ. ಯುಸ್ಟಾಚಿಯನ್ ಟ್ಯೂಬ್ ಅನ್ನು ನಿರ್ಬಂಧಿಸಿದಂತೆ ಗಂಟಲು ಕೆರೆತ ಅಥವಾ ಶ್ವಾಸಕೋಶ ಸೋಂಕಿಗೂ ಇದು ಕಾರಣವಾಗಬಹುದು. ಇದು ಅಸಹನೀಯ ನೋವು ಉಂಟು ಮಾಡಬಹುದು ಎಂದಿದ್ದಾರೆ.

ಈ ಕಿವಿ ನೋವಿನ ಸೋಂಕಿನಲ್ಲಿ ತಲೆ ನೋವು, ಊತ, ಅಸಹಜ ಡಿಸ್ಚಾರ್ಜ್, ತಲೆತಿರುಗುವಿಕೆ ಮತ್ತು ತಾತ್ಕಾಲಿಕ ಶ್ರವಣ ನಷ್ಟದ ಸಮಸ್ಯೆ ಕಾಡಬಹುದು. ಇದಕ್ಕೆ ಇಯರ್​ ಡ್ರಾಪ್​ ಬಳಕೆ ಮಾಡಬಹುದು ಎಂದು ಮುಂಬೈನ ಝಿನೋವಾ ಶಾಲ್ಬಿ ಆಸ್ಪತ್ರೆಯ ಇಎನ್​ಟಿ ಸರ್ಜನ್​ ಡಾ ಭವಿಕ್​ ಶಾ ತಿಳಿಸಿದ್ದಾರೆ.

ಇದೇ ವೇಳೆ ವೈದ್ಯರ ಸಲಹೆ ಬಳಿಕ ಮಾತ್ರವೇ ಆ್ಯಂಟಿ ಬಯೋಟಿಕ್​, ಆ್ಯಂಟಿಹಿಸ್ಟಾಮೈನ್​ಗಳು ಮತ್ತು ನೋವು ನಿವಾರಕಗಳನ್ನು ತೆಗೆದುಕೊಳ್ಳಬೇಕು. ನಿಮ್ಮ ವೈದ್ಯರನ್ನು ಸಂಪರ್ಕಿಸದೆ ಯಾವುದೇ ಔಷಧ ಅಥವಾ ಇಯರ್​ ಡ್ರಾಪ್​ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.

ಈ ಮುನ್ನೆಚ್ಚರಿಕೆ ಇರಲಿ: ಕಿವಿ ನೋವನ್ನು ಕಡಿಮೆ ಮಾಡಲು ಹೀಟಿಂಗ್ ಪ್ಯಾಡ್ ಅಥವಾ ಆರ್ದ್ರ ಬಟ್ಟೆಯನ್ನು ಬಳಸಬಹುದು. ಕಿವಿಯಲ್ಲಿ ನೀರು ಸಂಗ್ರಹವಾಗಲು ಬಿಡಬೇಡಿ. ಶೀತ ಗಾಳಿ ತಡೆಯುವ ಉದ್ದೇಶದಿಂದ ಕಿವಿಗಳಲ್ಲಿ ಹತ್ತಿಯನ್ನು ಬಳಸಬೇಡಿ. ಈ ರೀತಿ ಮಾಡುವುದರಿಂದ ಕಿವಿಯಲ್ಲಿ ಊತ ಉಂಟಾಗುತ್ತದೆ. ಇಯರ್ ಬಡ್ಸ್ ಬಳಸಬೇಡಿ. ಇಯರ್‌ಬಡ್‌ಗಳು ಕಿವಿ ಕ್ಯಾನಲ್​ ಮೇಲೆ ಪರಿಣಾಮ ಬೀರಲಿವೆ.

ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆಯುವ ಮೂಲಕ ಸ್ವಚ್ಛತೆ ಕಾಪಾಡಲು ಮುಂದಾಗಿ. ಕಾಲ ಕಾಲಕ್ಕೆ ಫ್ಲೂ ಲಸಿಕೆಯನ್ನು ಪಡೆಯಿರಿ. ಧೂಮಪಾನ ನಿಲ್ಲಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕಿವಿಯ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಮತ್ತು ಸಾಮಾನ್ಯ ಶೀತ, ಜ್ವರ ಮತ್ತು ಸೈನಟಿಸ್ ಅನ್ನು ತಡೆಗಟ್ಟಲು ಸ್ನಾನ ಮತ್ತು ಈಜುವಾಗ ಕಿವಿ ಪ್ಲಗ್​​ಗಳನ್ನು ಧರಿಸಬಹುದು ಎಂಬುದು ರಜ್ಞರ ಸಲಹೆಯಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಕಿವಿಯ ವ್ಯಾಕ್ಸ್‌ ತೆಗೆಯುವ ಅಭ್ಯಾಸವಿದೆಯೇ?: ತಜ್ಞರ ಎಚ್ಚರಿಕೆ ಗಮನಿಸಿ

ABOUT THE AUTHOR

...view details