ಸಿಡ್ನಿ: ತೀವ್ರ ಸಾಂಕ್ರಾಮಿಕತೆ ಸಮಯದಲ್ಲಿ ಅರ್ಧದಷ್ಟು ಮೊಬೈಲ್ ಫೋನ್ಗಳಲ್ಲಿ ಸಾರ್ಸ್-ಕೋವ್-2 ವೈರಸ್ನಿಂದ ಕೂಡಿದ್ದವು ಎಂದು ಹೊಸ ಅಧ್ಯಯನ ತಿಳಿಸಿದೆ. ಈ ಸಾಧನಗಳು ಕೋವಿಡ್ 19 ಹರಡುವಿಕೆಯಲ್ಲಿ ಹೆಚ್ಚಿನ ಪಾತ್ರ ಹೊಂದಿದ್ದವು ಎಂಬ ಸಿದ್ದಾಂತವನ್ನು ಈ ಅಧ್ಯಯನ ಬಲಪಡಿಸಿದೆ.
ಆಸ್ಟ್ರೇಲಿಯಾದಲ್ಲಿನ ಬೊಂಡ್ ಯುನಿವರ್ಸಿಟಿಯ ಸಂಶೋಧಕರು ಈ ಸಂಬಂಧ ವ್ಯವಸ್ಥಿತ ವಿಶ್ಲೇಷಣೆ ನಡೆಸಿದ್ದಾರೆ. 10 ದೇಶದಲ್ಲಿ 15 ಸಂಶೋಧನೆ ನಡೆಸಿದ್ದು, 2019ರಿಂದ 2023ರಲ್ಲಿ ಆಸ್ಪತ್ರೆಗಳಲ್ಲಿ ಮೊಬೈಲ್ ಫೋನ್ಗಳು ಸಾರ್ಸ್ ಕೋವ್ 2 ವೈರಸ್ನಿಂದ ಕೂಡಿದ್ದರ ಕುರಿತು ಪರಿಶೀಲನೆ ನಡೆಸಲಾಗಿದೆ. ಈ ಅಧ್ಯಯನದ ಫಲಿತಾಂಶವನ್ನು ಜರ್ನಲ್ ಆಫ್ ಇನ್ಫೆಕ್ಷನ್ ಅಂಡ್ ಪಬ್ಲಿಕ್ ಹೆಲ್ತ್ನಲ್ಲಿ ಪ್ರಕಟಿಸಲಾಗಿದೆ.
511 ಮೊಬೈಲ್ ಫೋನ್ನಲ್ಲಿ 231 ಅಂದರೆ ಶೇ 45ರಷ್ಟು ಮೊಬೈಲ್ಗಳಲ್ಲಿ ಪಾಸಿಟಿವ್ ಬಂದಿದ್ದು, ಇದರಲ್ಲಿ ಕೋವಿಡ್ 19 ಕಾರಣವಾಗುವ ಸಾರ್ಸ್ ಕೋವ್ 2 ಸೋಂಕು ಇರುವುದು ದೃಢಪಟ್ಟಿದೆ. 2022ರಲ್ಲಿ ಫ್ರಾನ್ಸ್ನಲ್ಲಿ ನಡೆದ ಅಧ್ಯಯನದಲ್ಲಿ 19ರಲ್ಲಿ 19 ಫೋನ್ಗಳು ವೈರಸ್ನಿಂದ ಕೂಡಿದ್ದವು.
ವರ್ಸಿಟಿಯ ಮೊಲೆಕ್ಯೂಲರ್ ಬಯೋಲಾಜಿಯ ಅಸೋಸಿಯೇಟ್ ಪ್ರೋಫೆಸರ್ ಡಾ ಲೊಟ್ಟೊ ತಜೊರಿ ಸಂಶೋಧನೆ ಕುರಿತು ಮಾತನಾಡಿದ್ದು, ಲಾಕ್‌ಡೌನ್, ಗಡಿ ನಿರ್ಬಂಧ, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಕಟ್ಟುನಿಟ್ಟಾದ ನಿಯಂತ್ರಣ ಕ್ರಮಗಳ ಹೊರತಾಗಿಯೂ ವಿಶ್ವದಾದ್ಯಂತ ಕೋವಿಡ್ -19 ರ ತ್ವರಿತ ಹರಡುವಿಕೆಗೆ ವ್ಯವಸ್ಥಿತ ಪರಿಶೀಲನೆಯು ಬಲವಾದ ವಿವರಣೆಯನ್ನು ಈ ಅಧ್ಯಯನ ಒದಗಿಸಿದೆ ಎಂದು ಅವರು ತಿಳಿಸಿದರು.
ಈ ಹಿಂದಿನ ಅಧ್ಯಯನಗಳು ಸಾರ್ಸ್ ಕೋವ್ 2 ವೈರಸ್ಗಳು ಮೊಬೈಲ್ ಫೋನ್ನಂತ ಗಾಜಿನ ಮೇಲ್ಮೈ ಮೇಲೆ 28 ದಿನಗಳ ಕಾಲ ಇರುತ್ತದೆ ಎಂಬುದನ್ನು ತಿಳಿಸಿತು. ಡಾ ತಜೌರಿ ಹೇಳುವಂತೆ, ಜಗತ್ತಿನಾದ್ಯಂತ 7 ಬಿಲಿಯನ್ ಮೊಬೈಲ್ ಫೋನ್ಗಳನ್ನು ಬಳಕೆ ಮಾಡಲಾಗಿತ್ತು. ಈ ಸಾಧನಗಳು ಪರಿಣಾಮಕಾರಿಯಾಗಿ ಥರ್ಡ್ ಹ್ಯಾಂಡ್ ಆಗಿ ಕಾರ್ಯ ನಿರ್ವಹಿಸಿದೆ.
ಎಷ್ಟು ಸಲ ಬೇಕಾದರೂ ನೀವು ಕೈಯನ್ನು ತೊಳೆದು ಮೊಬೈಲ್ ಫೋನ್ ಅನ್ನು ಮುಟ್ಟಿದಾಗ ನೀವು ಮತ್ತೆ ಕ್ರಾಸ್ ಕಂಟಮಿನೆಟ್ಗೆ ಒಳಗಾಗುತ್ತಿದ್ದೀರಿ ಎಂದು ಅವರು ತಿಳಿಸಿದ್ದಾರೆ. ಬಿಲಿಯನ್ಗಟ್ಟಲೆ ಜನರು ಪ್ರತ್ಯೇಕವಾಗಿ ತಮ್ಮ ಮೊಬೈಲ್ ಫೋನ್ ಹೊಂದಿದ್ದು, ಕೈ ತೊಳೆಯುವ ಅಭ್ಯಾಸವನ್ನು ಹೊಂದಿದ್ದರು, ಅವರು ಜಗತ್ತಿನೆಲ್ಲೆಡೆ ವೈರಸ್ ಕೊಂಡೊಯ್ಯುತ್ತಿದ್ದರು.
ಈ ಹಿಂದಿನ ಅಧ್ಯಯನದಲ್ಲಿ ಆಸ್ಪತ್ರೆಯ ಮಕ್ಕಳ ನಿಗಾ ಘಟಕ ಮತ್ತು ಮಕ್ಕಳ ತುರ್ತು ಘಟಕಗಳ ಬಗ್ಗೆ ಅಧ್ಯಯನ ಮಾಡಲಾಗಿತ್ತು. 11,163 ಮೈಕ್ರೋಬ್ಸ್ಗಳು 26 ಆರೋಗ್ಯ ಕಾರ್ಯಕರ್ತರ ಮೊಬೈಲ್ ಫೋನ್ನಲ್ಲಿ ಪತ್ತೆಯಾಗಿದ್ದು, ಇದು ಗಂಭೀರ ವೈರಸ್ ಮತ್ತು ಆ್ಯಂಟಿಬಯೋಟಿಕ್ ರೆಸಿಸ್ಟಂಟ್ ಬ್ಯಾಕ್ಟೀರಿಯಾ ಆಗಿತ್ತು.
ಹೆಚ್ಚಿನ ಅಪಾಯ ಸ್ಥಳದಲ್ಲಿ ಅಂದರೆ, ಆಸ್ಪತ್ರೆ, ರೆಸ್ಟೋರೆಂಟ್, ವಿಮಾನ ನಿಲ್ದಾಣ, ಮಕ್ಕಳ ಮತ್ತು ವೃದ್ಧರ ಆರೋಗ್ಯ ಘಟಕದಲ್ಲಿ ಅಲ್ಟ್ರಾವೈಲಟ್ ಸಿ ಲೈನ್ ಫೋನ್ ಸ್ಯಾನಿಟೈಸರ್ ಅನ್ನು ಕೈ ತೊಳೆಯುವ ಸ್ಥಾನದಲ್ಲಿ ಅಳವಡಿಸಬೇಕಿದೆ ಎಂದು ಸಂಶೋಧಕರು ಶಿಫಾರಸು ಮಾಡಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಆರೋಗ್ಯದಿಂದಿರಲು ವ್ಯಾಯಾಮ ಅಗತ್ಯ.. ಉತ್ತಮ ಫಲಿತಾಂಶಕ್ಕೆ ಎಷ್ಟು ದಿನದ ವರ್ಕ್ಔಟ್ ಪ್ರಯೋಜನಕಾರಿ ಎಂಬ ಬಗ್ಗೆ ಇದ್ಯಾ ಐಡಿಯಾ?