ಬೇಸಿಗೆಯಲ್ಲಿ ತ್ವಚೆ ಮಾತ್ರವೇ ಅಷ್ಟೇ ಅಲ್ಲ ಕಣ್ಣುಗಳ ಆರೈಕೆ ಮಾಡುವುದು ಕೂಡಾ ಅಗತ್ಯ. ದೀರ್ಘಕಾಲದವರೆಗೆ ಬಿಸಿಲ ತಾಪಕ್ಕೆ, ಮಾಲಿನ್ಯ, ಧೂಳು ಕಣ್ಣಿನ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುತ್ತದೆ. ಅನೇಕ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇದರಿಂದಾಗಿ ಕಾರ್ನಿಯಲ್ ಬರ್ನಸ್, ರಿಟಿನಾಕ್ಕೆ ಹಾನಿ, ಕಾಂಜಕ್ವಿಟಿವಿಸ್ ಹಾಗೂ ಕಾರ್ನಿಯಲ್ ಸೋಂಕುಗಳು ಸೇರಿದಂತೆ ಹಲವಾರು ಕಣ್ಣಿನ ಸಮಸ್ಯೆಗಳು ಉದ್ಭವವಾಗುತ್ತದೆ. ಅತಿಯಾದ ಯುವಿಗೆ ಒಡ್ಡಿಕೊಳ್ಳುವುದು, ಕ್ಲೋರಿನೇಟೆಡ್ ನೀರಿನಿಂದ ಕಣ್ಣಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಮುಂಬೈನ ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆಯ ಪ್ರಾದೇಶಿಕ ಮುಖ್ಯಸ್ಥೆ ಡಾ.ವಂದನಾ ಜೈನ್ ಹೇಳುವ ಪ್ರಕಾರ, ಹೊರಾಂಗಣ ಚಟುವಟಿಕೆಯನ್ನು ಆಹ್ಲಾದಿಸಲು ಇರುವ ಅತ್ಯುತ್ತಮ ಸಮಯ ಎಂದರೆ ಬೇಸಿಗೆ. ಆದರೆ ನಮ್ಮ ಕಣ್ಣಿನ ಆರೈಕೆಯನ್ನು ಮರೆಯುತ್ತೇವೆ. ಬೇಸಿಗೆ ಕಣ್ಣಿಗೆ ಸಾಕಷ್ಟು ಸವಾಲನ್ನು ಹಾಕಬಹುದು. ಅಧಿಕವಾಗಿ ಯುವಿ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಕಾರ್ನಿಯನ್ ಬರ್ನ್ಸ್, ರೆಟಿನಲ್ ಹಾನಿ ಸೇರಿದಂತೆ ಇನ್ನಿತರ ಕಣ್ಣಿನ ಸಮಸ್ಯೆಗಳು ಕಾಡಬಹುದು. ದೀರ್ಘಕಾಲ ಗಾಳಿ ವಾತಾವರಣಕ್ಕೆ ತೆರೆದುಕೊಳ್ಳುವುದರಿಂದ ಕಣ್ಣು ಶುಷ್ಕವಾಗಬಹುದು. ಬೇಸಿಗೆ ತಾಪಮಾನವೂ ಅನೇಕ ವೈರಲ್ ಮತ್ತು ಅಲರ್ಜಿ ಉಂಟು ಮಾಡಿ ಕಣ್ಣಿನ ಅಸ್ವಸ್ಥತೆ ಮತ್ತು ಕಿರಿಕಿರಿ ಉಂಟು ಮಾಡಬಹುದು. ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆಗೆ ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಬಹುದು.
ಯುವಿಯಿಂದ ರಕ್ಷಣೆಗೆ ಸನ್ಗ್ಲಾಸ್ ಬಳಕೆ : ಬೇಸಿಗೆಯಲ್ಲಿ ಸೂರ್ಯನಿಂದ ರಕ್ಷಿಸಲು ಸನ್ಗ್ಲಾಸ್ ಬಳಸುವುದು ಅವಶ್ಯಕ. ಈ ಕನ್ನಡಕಗಳು ಕಣ್ಣನ್ನು ಸಂಪೂರ್ಣವಾಗಿ ಮುಚ್ಚುವಂತೆ ಇರಲಿ. ಇದರಿಂದ ಕಣ್ಣಿನ ಬದಿಯಿಂದ ಉಂಟಾಗುವ ಹಾನಿ ತಡೆಯಬಹುದು.
ದೊಡ್ಡ ಹ್ಯಾಟ್ ಬಳಕೆ: ಸನ್ಗ್ಲಾಸ್ ಜೊತೆಗೆ ಅಗಲವಾದ ಟೋಪಿಗಳನ್ನು ಧರಿಸಿ, ಇದು ಮುಖದ ತ್ವಚೆಗೆ ಕಣ್ಣಿನ ರಕ್ಷಣೆ ನೀಡುತ್ತದೆ.