ಹೈದರಾಬಾದ್: ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಭಾರತೀಯರಲ್ಲಿ ಚಿನ್ನದ ಮೇಲೆ ವ್ಯಾಮೋಹ ಹೆಚ್ಚು ಎಂದು ಹೇಳಬಹುದು. ಆದರೆ, ಈ ಹಳದಿ ಲೋಹದಿಂದ ಮಾಡಿದ ಗೆಜ್ಜೆ ಅಥವಾ ಉಂಗುರವನ್ನು ಕಾಲು, ಕಾಲಿನ ಬೆರಳುಗಳಿಗೆ ಧರಿಸುವುದಿಲ್ಲ. ಏಕೆಂದರೆ ಅವು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಪ್ರತಿನಿಧಿಸುತ್ತವೆ ಎಂಬ ನಂಬಿಕೆ.
ಇದರ ಪರಿಣಾಮವಾಗಿ ಕಾಲು ಚೈನ್ ಹಾಗೂ ಕಾಲಿನ ಬೆರಳಿಗೆ ಬಳಸುವ ಉಂಗುರಗಳು ಸಂಪೂರ್ಣವಾಗಿ ಬೆಳ್ಳಿಯಿಂದ ಮಾಡಿರುವುದನ್ನೇ ಧರಿಸುತ್ತಾರೆ. ಕಾಲು ಗೆಜ್ಜೆಗಳು ನಗರ ಪ್ರದೇಶಗಳಲ್ಲಿ ಮಾಯವಾಗುತ್ತಿದ್ದು, ಕೇವಲ ಮದುವೆಯಂತ ಸಮಾರಂಭಗಳಿಗೆ ಸಮೀತವಾಗುತ್ತಿವೆ ಎಂದು ಜ್ಯುವೆಲ್ಲರಿ ಕಂಪನಿಯೊಂದರ ಸಹಾಯಕ ನಿರ್ದೇಶಕ ಅಮಿತ್ ಗಿಲ್ರಾ ಹೇಳಿದ್ದಾರೆ.
ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬೆಳ್ಳಿಯನ್ನು ಉಡುಗೊರೆಯಾಗಿ ನೀಡಲಾಗುತ್ತೆ. ಶಿಶುಗಳ ನಾಮಕರಣ ಸಮಾರಂಭದಲ್ಲಿ, ನಿಶ್ಚಿತಾರ್ಥ ಸಮಾರಂಭಗಳಲ್ಲಿ ಮತ್ತು ದೀಪಾವಳಿ ಮತ್ತು ಹೋಳಿ ಮುಂತಾದ ಪ್ರಮುಖ ಭಾರತೀಯ ಹಬ್ಬಗಳ ಸಮಯದಲ್ಲಿ ಪೂಜೆಗಳ ಸಮಯದಲ್ಲಿ ಪವಿತ್ರ ಪೂಜಾ ವಸ್ತುವಾಗಿಯೂ ಇವುಗಳನ್ನು ಬಳಸಲಾಗುತ್ತದೆ. ಭಾರತೀಯ ಪ್ರಾಚೀನ ಜ್ಯೋತಿಷಿಗಳ ಪ್ರಕಾರ, ಬೆಳ್ಳಿಯು ಚಂದ್ರನೊಂದಿಗೆ ಸಂಬಂಧ ಹೊಂದಿದೆ. ಶಿವನ ಕಣ್ಣುಗಳಿಂದ ಬೆಳ್ಳಿ ಉತ್ಪತ್ತಿಯಾಗುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ಬೆಳ್ಳಿ ಸಮೃದ್ಧಿಯ ಸಂಕೇತವಾಗಿದೆ. ಆದ್ದರಿಂದ ಯಾರು ಬೆಳ್ಳಿಯನ್ನು ಧರಿಸುತ್ತಾರೋ ಅವರು ಸಂಪ್ರದಾಯಗಳ ಪ್ರಕಾರ ಸಮೃದ್ಧಿಯಾಗುತ್ತಾರೆ ಎಂಬ ನಂಬಿಕೆ ಇದೆ.
ಆಭರಣಕ್ಕಿಂತ ಹೆಚ್ಚು, ಔಷಧಕ್ಕಿಂತ ಕಡಿಮೆ
1. ಭಾರತೀಯ ಸಂಸ್ಕೃತಿಯಲ್ಲಿ ಕಾಲಿನ ಗೆಜ್ಜೆ ಪ್ರಧಾನ ಪ್ರಾಮುಖ್ಯತೆಯನ್ನು ಹೊಂದಿದೆ. ಈಜಿಪ್ಟ್ ಮತ್ತು ಮಧ್ಯಪ್ರಾಚ್ಯದ ಪ್ರಾಚೀನ ಸಂಸ್ಕೃತಿಗಳಲ್ಲಿ ಆಭರಣವು ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ಏಕೆಂದರೆ ಇದು ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದ ಅಂಶಗಳಲ್ಲಿ ಸೌಂದರ್ಯ ಮತ್ತು ಹಲವು ಪ್ರಯೋಜನಗಳನ್ನು ಹೊಂದಿದೆ.
2. ಬೆಳ್ಳಿಯು ಪ್ರತಿಕ್ರಿಯಾತ್ಮಕ ಲೋಹವಾಗಿದೆ. ದೇಹದಿಂದ ಹೊರಸೂಸಲ್ಪಟ್ಟ ಶಕ್ತಿಯನ್ನು ಪ್ರತಿಫಲಿಸುತ್ತದೆ ಮತ್ತು ಹಿಂತಿರುಗಿಸುತ್ತದೆ. ನಮ್ಮ ಹೆಚ್ಚಿನ ಶಕ್ತಿಗಳು ನಮ್ಮ ದೇಹವನ್ನು ಕೈ ಮತ್ತು ಪಾದಗಳಿಂದ ಬಿಡುತ್ತವೆ. ಬೆಳ್ಳಿ, ಕಂಚು ಮುಂತಾದ ಲೋಹಗಳು ಈ ಶಕ್ತಿ ಕುಂದದಂತೆ ಕಾರ್ಯನಿರ್ವಹಿಸುತ್ತವೆ. ಇದು ಹೆಚ್ಚು ಸಕಾರಾತ್ಮಕತೆ ಮತ್ತು ಉತ್ಸಾಹವನ್ನು ಪಡೆಯಲು ಕೂಡ ನೆರವಾಗುತ್ತದೆ.