ಟೊರೊಟೊ (ಕೆನಡಾ): ಕೋವಿಡ್ 19 ಬಳಿಕ ಮಕ್ಕಳು ಮತ್ತು ಹದಿ ಹರೆಯದವರಲ್ಲಿ ಟೈಪ್ 1 ಮಧುಮೇಹ ಪ್ರಕರಣಗಳು ಏರಿಕೆ ಕಂಡಿದೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. 19 ವರ್ಷದೊಳಗಿನ ಮಕ್ಕಳು ಮತ್ತು ಹದಿಹರೆಯದ 1,02,984 ಮಂದಿಯ ಅಧ್ಯಯನ ಸೇರಿದಂತೆ 42 ಅಧ್ಯಯನಗಳ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಇದು ಯುವಜನತೆ ಈ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ ಎಂದು ಈ ವರದಿ ತಿಳಿಸಿದೆ.
ಟೈಪ್-1 ಮಧುಮೇಹದ ಪ್ರಮಾಣವು ಮೊದಲ ವರ್ಷಕ್ಕಿಂತ 1.14 ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನದ ಫಲಿತಾಂಶವು ಹೇಳಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಆರಂಭದ ನಂತರದ ಎರಡನೇ ವರ್ಷದಲ್ಲಿ ಇದು 1.27 ಪಟ್ಟು ಹೆಚ್ಚಾಗಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಟೈಪ್ 2 ಮಧುಮೇಹ ಪ್ರಕರಣಗಳು ಮತ್ತಷ್ಟು ಹೆಚ್ಚಿವೆ. ಡಯಾಬಿಟಿಕ್ ಕೀಟೋ ಆಸಿಡೋಸಿಸ್ನ ಆಗಾಗ್ಗೆ ಪ್ರಕರಣಗಳನ್ನು ಅಧ್ಯಯನವು ಕಂಡುಹಿಡಿದಿದೆ. ಅದರ ಪ್ರಮಾಣವು ಸಾಂಕ್ರಾಮಿಕ ರೋಗಕ್ಕಿಂತ ಮೊದಲು 1.26 ಪಟ್ಟು ಹೆಚ್ಚಾಗಿದೆ. ಮಧುಮೇಹದ ಗಂಭೀರ ಪರಿಣಾಮ ಟೈಪ್ 1 ಆಗಿದ್ದು, ಇದು ಅಪಾಯಕಾರಿಯಾಗಿದೆ. ಟೈಪ್-1 ಮಧುಮೇಹದಲ್ಲಿ, ಜೀವಕೋಶಗಳಲ್ಲಿ ಸಾಕಷ್ಟು ಇನ್ಸುಲಿನ್ ಇರುವುದರಿಂದ ದೇಹವದ ರಕ್ತದಲ್ಲಿನ ಸಕ್ಕರೆಯನ್ನು ಶಕ್ತಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಮಧುಮೇಹದಿಂದ ಬಳಲುತ್ತಿರುವ ಮಕ್ಕಳು ಮತ್ತು ಹದಿಹರೆಯದವರ ಸಂಖ್ಯೆಗೆ ಚಿಕಿತ್ಸೆ ನೀಡಲು ಹೆಚ್ಚುವರಿ ಸಂಪನ್ಮೂಲಗಳ ಅಗತ್ಯವಿದೆ ಎಂದು ಕೆನಡಾದ ಟೊರೊಂಟೊ ವಿಶ್ವವಿದ್ಯಾನಿಲಯದ ತಜ್ಞರು ತಿಳಿಸಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ, ಮಕ್ಕಳು ಮತ್ತು ಹದಿಹರೆಯದವರಲ್ಲಿ ಮಧುಮೇಹ ಹೆಚ್ಚಿರುವುದು ಕಂಡು ಬಂದಿದೆ. ಈ ವೇಳೆ ತಜ್ಞರುಗಳು ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.