ಲಂಡನ್: ಕೋವಿಡ್ 19ಗೆ ಕಾರಣವಾಗುವ ಸಾರ್ಸ್ ಕೋವ್ 2 ವೈರಸ್ ಕೋವಿಡ್ ಸೋಂಕಿನಿಂದ ಚೇತರಿಕೆ ಕಂಡ ಬಳಿಕವೂ 18 ತಿಂಗಳು ಕಾಲ ಅದು ಶ್ವಾಸಕೋಶದಲ್ಲೇ ಉಳಿದಿರುವ ಬಗ್ಗೆ ಶಂಕೆ ಇದೆ ಎಂದು ಅಧ್ಯಯನ ತಿಳಿಸಿದೆ.
ಜರ್ನಲ್ ಆಫ್ ನೇಚರ್ ಇಮ್ಯೂನೋಲಾಜಿಯಲ್ಲಿ ಪ್ರಟಕವಾದ ಅಧ್ಯಯನ ಅನುಸಾರ, ಕೋವಿಡ್ ವೈರ್ಸ್ ಬಂದ ಒಂದರಿಂದ ಎರಡು ವಾರದ ಬಳಿಕ ಸಾರ್ಸ್ ಕೋವ್ 2 ವೈರಸ್ ಶ್ವಾಸಕೋಶದ ಮೇಲ್ಭಾಗದಲ್ಲಿ ಇದ್ದು, ಪತ್ತೆಯಾಗದ ರೀತಿ ನೆಲೆಯೂರುತ್ತದೆ ಎಂದಿದ್ದಾರೆ.
ಆದರೆ, ಕೆಲವು ಬಾರಿ ವೈರಸ್ ಸೋಂಕು ಪತ್ತೆಯಾಗದ ರೀತಿಯಲ್ಲಿ ದೇಹದಲ್ಲಿ ಇರುತ್ತದೆ. ಇದನ್ನು ವೈರಸ್ ರಿಸರ್ವೆರಿಸ್ ಎಂದು ಕರೆಯಲಾಗುವುದು. ಇದು ಶ್ವಾಸಕೋಶದ ಮೇಲ್ಭಾಗ ಅಥವಾ ರಕ್ತದಲ್ಲಿ ಕಂಡು ಬರುತ್ತದೆ.
ಹೆಚ್ಐವಿ ಕೆಲವು ಪ್ರಕರಣದಲ್ಲಿ ಸೋಂಕು ಸುಪ್ತವಾಗಿ ನಿರ್ದಿಷ್ಟ ಇಮ್ಯೂನ್ ಸೆಲ್ಗಳಲ್ಲಿ ಇರುತ್ತದೆ. ಇದು ಯಾವಾಗ ಬೇಕಾದರೂ ಉಲ್ಬಣವಾಗಬಹುದು. ಇದು ಕೋವಿಡ್ 19 ಕಾರಣವಾಗುವ ಸಾರ್ಸ್ ಕೋವ್ 2 ಇದೇ ರೀತಿ ಆಗುತ್ತದೆ ಎಂದು ಅಧ್ಯಯನ ನಡೆಸಿದ ತಂಡ ತಿಳಿಸಿದೆ. ಇದರ ಮೊದಲ ಹೈಪೊಥಿಸಿಸ್ ಥಿಯರಿ 2021ರಲ್ಲಿ ಮಾಡಲಾಗಿದ್ದು, ಇದೀಗ ಪ್ರಿಕ್ಲಿನಿಕಲ್ ಮಾಡೆಲ್ನಲ್ಲಿ ದೃಢಪಡಿಸಲಾಗಿದೆ.
ಸಾರ್ಸ್ ಕೋವ್ 2 ವೈರಸ್ನಿಂದ ಸೋಂಕಿಗೆ ಒಳಗಾದವರಲ್ಲಿ ಉರಿಯೂತವು ದೀರ್ಘಕಾಲದವರೆಗೆ ಇರುವುದನ್ನು ನಾವು ಗಮನಿಸಿದ್ದೇವೆ. ಹೀಗಾಗಿ ದೇಹದಲ್ಲಿ ವೈರಾಣು ಇರುವ ಕಾರಣ ಇದಾಗಿರಬಹುದು ಎಂದು ಶಂಕಿಸಿದ್ದೇವೆ ಎಂದು ಇನ್ಸಿಟಿಟ್ಯೂಟ್ ಪಸ್ಟೆರಸ್ನ ಎಚ್ಐವಿ ಇನ್ಫ್ಲಮೆಷನ್ ಅಂಡ್ ಪರ್ಸಿಸ್ಟೆನ್ಸ್ ಯುನಿಟ್ ಮುಖ್ಯಸ್ಥ ಮಿಷೆಲಾ ಮುಲ್ಲರ್ ತ್ರುಟ್ವಿನ್ ತಿಳಿಸಿದ್ದಾರೆ.
ಸಾರ್ಸ್ ಕೋವ್ 2 ವೈರಸ್ ಇರುವಿಕೆ ಅಧ್ಯಯನದಲ್ಲಿ ವಿಜ್ಞಾನಿಗಳು ವೈರಸ್ ಸೋಂಕಿಗೆ ಒಳಗಾದ ಪ್ರಾಣಿಗಳ ಮಾದರಿಗಳಿಂದ ಬಯೋಲಾಜಿಕಲ್ ಸ್ಯಾಂಪಲ್ ಅನ್ನು ವಿಶ್ಲೇಷಣೆ ಮಾಡಿದ್ದಾರೆ. ಈ ವೇಳೆ ಶ್ವಾಸಕೋಶದಲ್ಲಿ ಓಮಿಕ್ರಾನ್ ತಳಿ ಕಡಿಮೆ ಮಟ್ಟದಲ್ಲಿ ಮತ್ತು ಸಾರ್ಸ್ ಕೋವ್ 2 ತಳಿ ವೈರಸ್ ಇರುವಿಕೆಯ ಮೌಲ್ಯ ಪತ್ತೆಯಾಗಿದೆ ಎಂದು ಅಧ್ಯಯನ ವಿವರಿಸಿದೆ.
ನಿರ್ದಿಷ್ಟ ಇಮ್ಯೂನ್ ಕೋಶದಲ್ಲಿ ವೈರಸ್ಗಳು ಇರುವುದನ್ನು ಗಮನಿಸಿ ಆಶ್ಚರ್ಯವಾಯಿತು. ಆದರೂ ಎನ್ಕೆ ಕೋಶಗಳು ವೈರಲ್ ಸೋಂಕು ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಅನ್ನೋದು ತಿಳಿದು ಬಂದಿಲ್ಲ ಎಂದು ಅಧ್ಯಯನ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ದಿನಕ್ಕೆ 4 ಗಂಟೆಗಿಂತ ಹೆಚ್ಚು ಸ್ಮಾರ್ಟ್ಫೋನ್ ಬಳಕೆಯಿಂದ ಆರೋಗ್ಯ ಸಮಸ್ಯೆ