ಕರ್ನಾಟಕ

karnataka

ETV Bharat / sukhibhava

ಹವಾಮಾನ ಬದಲಾವಣೆಗಳು ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು; ಅಧ್ಯಯನ

ಈ ರೋಗಗಳ ಹರಡುವಿಕೆ ತಾಪಮಾನ ಅಥವಾ ಮಳೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಅಧ್ಯಯನವೊಂದು ತಿಳಿಸಿದೆ.

Climate change can alter risk of succumbing to infectious diseases
Climate change can alter risk of succumbing to infectious diseases

By ETV Bharat Karnataka Team

Published : Sep 12, 2023, 3:47 PM IST

ಲಂಡನ್​: ಹವಾಮಾನ ಬದಲಾವಣೆ ಪರಿಸ್ಥಿತಿ ಹೆಚ್ಚಾದಂತೆ ಸೋಂಕಿನ ರೋಗಗಳು ಹೆಚ್ಚಾಗುವ ಅಪಾಯ ಹೊಂದಿದ್ದು, ಇವು ಮನುಷ್ಯನಿಗೆ ಮಾರಕವಾಗಿದೆ ಎಂದು ಅಧ್ಯಯನ ಎಚ್ಚರಿಸಿದೆ. ಈ ಕುರಿತು ಸೈಂಟಿಫಿಕ್​ ಜರ್ನಲ್​ ಎಕೊಗ್ರಾಫಿಯಲ್ಲಿ ಪ್ರಕಟಿಸಲಾಗಿದೆ. ಯುರೋಪ್​ನಾದ್ಯಂತ ಈ ತನಿಖೆ ನಡೆಸಿದ್ದು, ಹವಾಮಾನ ಬದಲಾವಣೆಗಳಿಂದ ಪ್ರೊಟೊಜೋವಾ, ಬ್ಯಾಕ್ಟೀರಿಯಾ ಮತ್ತು ವೈರಸ್​ ಸಾಮರ್ಥ್ಯದ ರೋಗಗಳು ಮನುಷ್ಯರು ಮತ್ತು ಸಾಕು ಪ್ರಾಣಿಗಳಿಗೆ ಹರಡುವ ಸಾಧ್ಯತೆ ಇದೆ. ಈ ರೋಗಗಳ ಹರಡುವಿಕೆ ತಾಪಮಾನ ಅಥವಾ ಮಳೆಗಳೊಂದಿಗೆ ಸಂಬಂಧ ಹೊಂದಿದೆ.

ಹೊಸ ಅಧ್ಯಯನವೂ ಯುರೋಪ್​​ನಲ್ಲಿರುವ 75 ರೋಗಕಾರಕ ಮತ್ತು 400 ಪಕ್ಷಿ ಮತ್ತು 40 ಬಾವಲಿ ಜಾತಿಗಳ ಕುರಿತು ಮಾಹಿತಿಯನ್ನು ಅಧ್ಯಯನ ಮಾಡಿದ್ದು, ಈ ದತ್ತಾಂಶಗಳ ಸಂಯೋಜನೆಯಲ್ಲಿ ಬಯಲಾದ ಅಂಶದಲ್ಲಿ ಬಹುತೇಕ ರೋಗಕಾರಗಳು ತಾಪಮಾನ ಮತ್ತು ಮಳೆಯೊಂದಿಗೆ ಸಂಬಂಧ ಹೊಂದಿದೆ.

ಸಾಮಾನ್ಯವಾಗಿ ರೋಗಕಾರರಕ ಬ್ಯಾಕ್ಟೀರಿಯಗಳು ಬೆಚ್ಚಗಿನ ಮತ್ತು ಶುಷ್ಕ ಪರಿಸರದಲ್ಲಿ ಹೆಚ್ಚುತ್ತದೆ. ಮತ್ತೊಂದೆಡೆ, ರೋಗಕಾರಕ ವೈರಸ್​ಗಳು ಶೀತ ವಾತಾವರಣವನ್ನು ಆದ್ಯತೆಯಾಗಿಸುತ್ತವೆ ಎಂದು ಫಿನ್ಲ್ಯಾಂಡ್​​ನ ಯುನಿವರ್ಸಿಟಿ ಆಫ್​ ಹೆಲ್ಸಿಂಕಿಯ ಅಧ್ಯಯನ ಪ್ರಮುಖ ಲೇಖಕರಾದ ಯಂಜಿ ಕ್ಸು ತಿಳಿಸಿದ್ದಾರೆ.

ಹವಾಮಾನದ ಅಂಶ ಮತ್ತು ರೋಗಕಾರಕ ನಡುವಿನ ಸಂಬಂಧವನ್ನು 17 ರೋಗಾಕಾರಣ ಟಾಕ್ಸಾ ಜೊತೆಗಿನ ದತ್ತಾಂಶದೊಂದಿಗೆ ತನಿಖೆ ಮಾಡಲಾಗಿದೆ. ಈ ವೇಳೆ, ಹಲವು ವ್ಯತ್ಯಾಸಗಳು ಹೊಂದಿರುವುದನ್ನು ಗಮನಿಸಲಾಗಿದೆ. ಏವಿಯನ್​ ಫ್ಲು ವೈರಸ್​, ಮಲೇರಿಯಾ-ಪಾರಸೈಟ್​ ಮತ್ತು ಬ್ಯಾಕ್ಟೀರಿಯಾ ತಾಪಮಾನದೊಂದಿಗೆ ಸಕಾರಾತ್ಮಕ ಸಂಬಂಧವನ್ನು ತೋರಿಸಿದೆ ಎಂದು ಫಿನ್​ಲ್ಯಾಂಡ್​ನ ತುರ್ಕು ಆಫ್​ ಬಯೋಮೆಡಿಸಿನ್​ ಯುನಿವರ್ಸಿಟಿಯ ಪ್ರಾಧ್ಯಾಪಕ ಅರ್ಟೊ ಫುಲಿಯನೆನ್​ ತಿಳಿಸಿದ್ದಾರೆ.

ಈ ರೋಗಕಾರಕಗಳಿಗೆ ಮಳೆಯು ಸಕರಾತ್ಮಕ ಮತ್ತು ನಕಾರಾತ್ಮಕ ಸಂಬಂಧವನ್ನು ಹೊಂದಿದೆ. ಮಳೆ ಪ್ರಮಾಣ ಹೆಚ್ಚಾದರೆ ಉಸುಟು, ಸಿಂಡ್ಬಿಸ್​ ಮತ್ತು ಏವಿಯನ್​ ಫ್ಲು ವೈರಸ್​​ ಹೆಚ್ಚಾಗುತ್ತದೆ ಜೊತೆಗೆ ಸಲಮೊನೆಲ್ಲಾ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಇದೆ. ಉಸುಟು, ಸಿಂಡ್ಬಿಸ್ ವೈರಸ್​ಗಳು ಸೊಳ್ಳೆಗಳಿಂದ ಹರಡುವ ರೋಗ ಆಗೊದ್ದು, ಮಳೆಯಿಂದಾಗಿ ಈ ರೋಗಕಾರಕ ಸೊಳ್ಳೆಗಳು ಹೆಚ್ಚುತ್ತದೆ. ಅದೇ ರೀತಿ ಜ್ವರ ಮತ್ತು ಸಲ್ಮೊನೆಲ್ಲಾ ತಡೆಗಟ್ಟಬಹುದಾಗಿದೆ ಎಂದು ಅಕಾಡೆಮಿ ರಿಸರ್ಚ್​​ ಫೆಲೋ ಲಿಲ್ಲೆ ತಿಳಿಸಿದ್ದಾರೆ.

ಈ ಅಧ್ಯಯನದಲ್ಲಿ 700 ಸಂಶೋಧಕರ ಪತ್ರಿಕೆಗಳನ್ನು ಪರಿಶೀಲನೆ ಮಾಡಲಾಗಿದ್ದು, ಅರ್ಧದಷ್ಟು ಮಿಲಿಯನ್​ ಜನರನ್ನು ಹವಾಮಾನ ಬದಲಾವಣೆ ರೋಗಗಳು ಮತ್ತು ಅವುಗಳ ಅತಿಥಿಗಳಾದ ಕಾಡು ಪ್ರಾಣಿಗಳ ವಿತರಣಾ ವ್ಯಾಪ್ತಿಯನ್ನು ಬದಲಾಯಿಸುತ್ತದೆ. ಈ ವಿತರಣೆ ಹಂಚಿಕೆಯನ್ನು ಈಗಾಗಲೇ ಗಮನಿಸಲಾಗಿದೆ. ಹವಾಮಾನ ಬದಲಾವಣೆ ಪರಿಸರದಲ್ಲಿನ ರೋಗಗಕಾರಗಳ ಇರುವಿಕೆಯನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಜಾಗತಿಕ ತಾಪಮಾನ: ಯುಎಸ್​ ಓಪನ್ ಟೆನಿಸ್​ ಟೂರ್ನಿ ವೇಳೆ ಭಾರತ ಮೂಲದ ವ್ಯಕ್ತಿಯಿಂದ ಪ್ರತಿಭಟನೆ

ABOUT THE AUTHOR

...view details