ಕರ್ನಾಟಕ

karnataka

ETV Bharat / sukhibhava

ಕಷ್ಟಕರ ಸಮಸ್ಯೆ ನಿರ್ವಹಣೆಗೆ ವಯಸ್ಕರಷ್ಟೇ ಬುದ್ಧಿ ಸಾಮರ್ಥ್ಯವನ್ನು ಮಕ್ಕಳು ಉಪಯೋಗಿಸುತ್ತಾರೆ; ಅಧ್ಯಯನದಲ್ಲಿ ಬಹಿರಂಗ

ಕಷ್ಟದ ಸಮಸ್ಯೆಗಳ ನಿವಾರಣಗೆ ಮಕ್ಕಳಿಂದ ಸಾಧ್ಯವಿಲ್ಲ ಎನ್ನುವವರಿಗೆ ಈ ಅಧ್ಯಯನ ಉತ್ತರವಾಗಿದೆ. ಅಮೆರಿಕದಲ್ಲಿ ನಡೆಸಿದ ಈ ಅಧ್ಯಯನದಲ್ಲಿ ಮಕ್ಕಳು ಸಮಸ್ಯೆ ನಿರ್ವಹಣೆಗೆ ದೊಡ್ಡವರಷ್ಟೇ ಮೆದುಳಿನ ಸಾಮರ್ಥ್ಯ ಬಳಸುತ್ತಾರೆ ಎಂಬುದು ಬಯಲಾಗಿದೆ.

ಕಷ್ಟಕರ ಸಮಸ್ಯೆ ನಿರ್ವಹಣೆಗೆ ವಯಸ್ಕರಷ್ಟೇ ಬುದ್ದಿ ಸಾಮರ್ಥ್ಯವನ್ನು ಮಕ್ಕಳು ಕೂಡ ಉಪಯೋಗಿಸುತ್ತಾರೆ; ಅಧ್ಯಯನದಲ್ಲಿ ಬಹಿರಂಗ
Children use the same intellectual capacity as adults to manage difficult problems; Revealed in the study

By

Published : Feb 20, 2023, 1:45 PM IST

ಓಹಿಯೊ: ನಾಲ್ಕು ವರ್ಷದ ಮಕ್ಕಳಲ್ಲಿನ ಮಿದುಳಿನ ಸಾಮರ್ಥ್ಯವು ದೊಡ್ಡವರು ವ್ಯವಹರಿಸುವ ಗುಣಲಕ್ಷಣಗಳ ನೆಟ್​ವರ್ಕ್​ ಅನ್ನು ಹೊಂದಿದೆ ಎಂಬುದನ್ನು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಈ ಬಹು ಬೇಡಿಕೆಯ ನೆಟ್​​ವರ್ಕ್​ ಜನರ ಏಕಾಗ್ರತೆ ಸಹಾಯ ಮಾಡುತ್ತದೆ. ನೆನಪಿನ ಶಕ್ತಿಯಲ್ಲಿ ಹಲವು ವಸ್ತುಗಳನ್ನು ಏಕಕಾಲಕ್ಕೆ ನಿರ್ವಹಿಸುತ್ತದೆ. ಜೊತೆಗೆ ಕ್ಲಿಷ್ಟಕರ ಗಣಿತದ ಸಂಗತಿಯನ್ನು ಪರಿಹರ ಮಾಡುವ ಸಾಮಾರ್ಥ್ಯ ಹೊಂದಿರುತ್ತದೆ.

ಜೆನೆಪ್​ ಸೆಗಿನ್​ ಅನುಸಾರ, ಓಹಿಯೋ ಸ್ಟೇಟ್​ ಯುನಿವರ್ಸಿಟಿಯ ಮನೋವಿಜ್ಞಾನದ ಹಿರಿಯ ಲೇಖಲರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಇದರಲ್ಲಿ ಮಕ್ಕಳು ವಯಸ್ಕರ ಕಾರ್ಯ ಸಾಮರ್ಥ್ಯ ಹೊಂದಿರುವುದು ತಿಳಿದು ಬಂದಿದೆ. ಈ ಅಧ್ಯಯನದಲ್ಲಿ ವಯಸ್ಕರು, ನಾಲ್ಕರಿಂದ 12 ವರ್ಷದ ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಸಂಪೂರ್ಣ ಕಷ್ಟಕರ ಕಾರ್ಯ ನಿರ್ವಹಣೆ ಪ್ರಯತ್ನದ ವೇಳೆ ಅವರ ಮೆದುಳುಗಳನ್ನು ಎಫ್​ಎಂಆರ್​ಐ ಮೂಲಕ ಸ್ಕ್ಯಾನ್​ ಮಾಡಲಾಗಿದೆ.

ಇತ್ತೀಚಿನ ಅಧ್ಯಯನದ ಪ್ರಕಾರ, ವಯಸ್ಕರಲ್ಲಿ ಅತ್ಯಾಧುನಿಕ ಅರಿವಿನ ಸಮಸ್ಯೆಗಳೊಂದಿಗೆ ವ್ಯವಹರಿಸುವ ಮೆದುಳಿನ ನೆಟ್​​ವರ್ಕ್​ನ ಲಕ್ಷಣಗಳನ್ನು ನಾಲ್ಕು ವರ್ಷ ವಯಸ್ಸಿನ ಮಕ್ಕಳು ತೋರಿಸುತ್ತಾರೆ. ಬಹು-ಬೇಡಿಕೆ ನೆಟ್‌ವರ್ಕ್ ಜನರು ಏಕಾಗ್ರತೆಗೆ ಇದು ಸಹಾಯ ಮಾಡುತ್ತದೆ. ನೆನಪಿನ ಶಕ್ತಿಯಲ್ಲಿ ಹಲವಾರು ವಸ್ತುಗಳನ್ನು ಏಕಕಾಲದಲ್ಲಿ ನಿರ್ವಹಿಸುತ್ತದೆ. ಗಣಿತದ ತೊಂದರೆಗಳಂತಹ ಸವಾಲಿನ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಸಣ್ಣ ಮಕ್ಕಳಲ್ಲಿ ವಿಶಿಷ್ಟ ರೀತಿಯ ನೆಟ್​ವರ್ಕ್​ಗಳನ್ನು ನಾವು ಪತ್ತೆ ಮಾಡಿದೆವು. ಇದು ವಯಸ್ಕರಲ್ಲಿನ ಭಾಷಾ ನೆಟ್​ವರ್ಕ್​ಗಳಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿದೆ. ಅದು ಖಚಿತವಾಗಿ ತಿಳಿದಿರದ ವಿಷಯವಾಗಿತ್ತು. ಒಂದು ಪರ್ಯಾಯವೆಂದರೆ ಮೆದುಳಿನಲ್ಲಿರುವ ಈ ಪ್ರತ್ಯೇಕ ನೆಟ್‌ವರ್ಕ್‌ಗಳು ಮಕ್ಕಳಲ್ಲಿ ತಮ್ಮನ್ನು ಪ್ರತ್ಯೇಕಿಸಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ಇದನ್ನು ನಾವು ಪತ್ತೆ ಮಾಡಿಲ್ಲ ಎಂದರು.

ಓಹಿಯೋ ಸ್ಟೇಟ್​ನ ಮನೋವೈದ್ಯಕೀಯ ಪದವಿ ವಿದ್ಯಾರ್ಥಿ ಎಲಾನ್​ ಸೆಚೆಟ್ನಿ ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಇದರ ಫಲಿತಾಂಶವನ್ನು ನ್ಯೂರೊ ಸೈನ್ಸ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಈಅಧ್ಯಯನದ ಫಲಿತಾಂಶಗಳು ಕ್ಲಿನಿಕಲ್ ಮಾದರಿಗಳ ನಡುವೆ ಅರಿವಿನ ನಿಯಂತ್ರಣದ ನರಗಳ ಬೆಳವಣಿಗೆಯಲ್ಲಿ ಅಡಚಣೆಗಳನ್ನು ಗುರುತಿಸಲು ಸಹಾಯ ಮಾಡಬಹುದು.

ನರಗಳ ಕಾರ್ಯಚಟುವಟಿಕೆ ಮತ್ತು ಕಾರ್ಯಗಳ ಪ್ರದರ್ಶನ ನಡುವೆ ಅನೇಕ ಸಂಬಂಧಗಳನ್ನು ಗುರುತಿಸಬಹುದಾಗಿದೆ. ಸಾಮಾನ್ಯ ವರ್ಸಸ್​ ಅಸಮಾನ್ಯದ ಎಂದು ತಿಳಿದಿರುವುದರ ನಡುವೆ ಉತ್ತಮ ಅರ್ಥೈಸುವಿಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು, ಎಫ್​ಎಂಆರ್​ಐ ಸ್ಕ್ಯಾನಿಂಗ್​​ ವೇಳೆ ಅಧ್ಯಯನ ಭಾಗಿದಾರರಿಗೆ ಕಷ್ಟದ ಕಾರ್ಯ ನೀಡಲಾಗಿದೆ. ಇದನ್ನು ವಯಸ್ಕರಿಗಿಂತ ಮಕ್ಕಳು ಬೇಗ ಮುಗಿಸಿದ್ದಾರೆ. ಇದೇ ರೀತಿ ಭಾಷೆ ಕಾರ್ಯವನ್ನು ನೀಡಲಾಗಿದೆ. ಈ ಭಾಷೆ ಮೆದುಳಿನ ನೆಟ್​ವರ್ಕ್​​ ಮಕ್ಕಳಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಇದರ ಬಗ್ಗೆ ಸ್ಪಷ್ಟತೆ ಇಲ್ಲ. ಬಹು ಬೇಡಿಕೆಯ ನೆಟ್​ವರ್ಕ್​ ಅಭಿವೃದ್ಧಿ ಹಂತದಲ್ಲಿದೆ.

ಮಕ್ಕಳು ಮತ್ತು ವಯಸ್ಕರಲ್ಲಿನ ಕಷ್ಟಕರ ಕಾರ್ಯ ಪೂರ್ಣಗೊಳಿಸಿದಾಗ ಮೆದುಳಿನ ಒಂದೇ ಪ್ರದೇಶ ಮುಂಭಾಗದ ಮತ್ತು ಪ್ಯಾರಿಯಲ್ ಕಾರ್ಟಿಸಸ್‌ನಲ್ಲಿರುವ ಬಹು ಬೇಡಿಕೆಯ ನೆಟ್​ವರ್ಕ್​ ಸಕ್ರಿಯಗೊಳಿಸಲಾಗಿದೆ. ಇದುಭಾಷಾ ಕಾರ್ಯಕ್ಕಾಗಿ ಸಕ್ರಿಯವಾಗಿಲ್ಲ. ವಯಸ್ಕರಿಗೆ ಸಮಾನವಾದ ಬಹುಬೇಡಿಕೆ ನೆಟ್‌ವರ್ಕ್ ಅನ್ನು ಮಕ್ಕಳು ಹೊಂದಿರುವುದಿಲ್ಲ ಎಂದು ನಿರೀಕ್ಷಿಸಲು ಕಾರಣಗಳಿವೆ ಎಂದು ಫಲಿತಾಂಶ ತಿಳಿಸಿದೆ.

ಇದನ್ನೂ ಓದಿ: ಈ ಲಕ್ಷಣಗಳಿದ್ದರೆ ಅವು ಖಂಡಿತಾ ಅಭದ್ರತೆಯ ಚಿಹ್ನೆಗಳು!

ABOUT THE AUTHOR

...view details