ಕರ್ನಾಟಕ

karnataka

ETV Bharat / sukhibhava

ಕೋಶ ಚಿಕಿತ್ಸೆಯಿಂದ ಕೋವಿಡ್​ ಸಾವು ಅಪಾಯ ಕಡಿಮೆ: ಅಧ್ಯಯನ - ರೋಗದಿಂದ ಅವರ ಸಾವಿನ ಅಪಾಯ

ಕೋಶ ಚಿಕಿತ್ಸೆ ಉತ್ತಮವಾಗಿ ಕಾರ್ಯ ನಿರ್ವಹಿಸಿದರೂ ಕೋವಿಡ್​​ಗೆ ಲಸಿಕೆಯೇ ಉತ್ತಮ ಪರಿಹಾರ ಎಂದು ಸಂಶೋಧಕರು ತಿಳಿಸಿದ್ದಾರೆ.

Cell therapy Reduce the death risk of Covid patients
Cell therapy Reduce the death risk of Covid patients

By ETV Bharat Karnataka Team

Published : Sep 19, 2023, 2:08 PM IST

ನವದೆಹಲಿ: ಕೋವಿಡ್​ 19 ಸೋಂಕಿತ ರೋಗಿಗಳಿಗೆ ಕೋಶ ಚಿಕಿತ್ಸೆ (Cell therapy) ಮಾಡುವುದರಿಂದ ರೋಗದಿಂದ ಸಾವಿನ ಅಪಾಯವನ್ನು ಶೇ 60ರಷ್ಟು ಕಡಿಮೆ ಮಾಡಬಹುದು ಎಂದು ಹೊಸ ಅಧ್ಯಯನ ಹೇಳಿದೆ. ವ್ಯವಸ್ಥಿತ ಪರಿಶೀಲನೆ ಮತ್ತು ಬೃಹತ್​ ವಿಶ್ಲೇಷಣೆಯು ಕೋಶ ಚಿಕಿತ್ಸೆಯ 195 ಪ್ರಾಯೋಗಿಕ ಪರೀಕ್ಷೆಯ ಮೂಲಕ ಕೋವಿಡ್​​ ಗುರಿಯಾಗಿಸಿದೆ. 2020 ಜನವರಿ ಮತ್ತು ಡಿಸೆಂಬರ್​ 2021ರ ನಡುವೆ ಯುರೋಪ್​ ಸೇರಿದಂತೆ 30 ದೇಶಗಳಲ್ಲಿ 26 ಪ್ರಯೋಗಗಳ ಮೂಲಕ ನಡೆಸಲಾಗಿದ್ದು, ಸಂಶೋಧನಾ ವರದಿಯನ್ನು 2022ರಲ್ಲಿ ಪ್ರಕಟಿಸಲಾಗಿದೆ.

ಅಧ್ಯಯನವನ್ನು ಬ್ರೆಜಿಲ್​ನ ಸೌ ಪೌಲೊ ಯುನಿವರ್ಸಿಟಿಯ ಸಂಶೋಧಕರ ತಂಡ ನಡೆಸಿದ್ದು, ಜರ್ಮನಿ ಮತ್ತು ಅಮೆರಿಕದ ಸಹ ಉದ್ಯೋಗಿಗಳು ಕೂಡ ಭಾಗಿಯಾಗಿದ್ದರು. ಈ ಅಧ್ಯಯನವನ್ನು ಜರ್ನಲ್​ ಫ್ರಂಟಿರ್ಸ್​​ ಇನ್​ ಇಮ್ಯೂಲೊಜಿಯಲ್ಲಿ ಪ್ರಕಟಿಸಲಾಗಿದೆ.

ಕೋಶ ಚಿಕಿತ್ಸೆ ಇತ್ತೀಚಿನ ದಿನದಲ್ಲಿ ಮಹತ್ವ ಹೊಂದಿದ್ದು, ಕ್ಯಾನ್ಸರ್​​ ಮತ್ತು ಆಟೋಇಮ್ಯೂನ್​, ಹೃದಯ ಮತ್ತು ಸೋಂಕಿನ ರೋಗದಲ್ಲಿ ಬಳಕೆ ಮಾಡಲಾಗುತ್ತಿದೆ. ಸಾಂಕ್ರಾಮಿಕತೆ ಸಮಯದಲ್ಲಿ ಕೋವಿಡ್​ ಚಿಕಿತ್ಸೆಯಲ್ಲಿ ಇದರ ಬಳಕೆ ಸಂಬಂಧ ಅನೇಕ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗಿದೆ.

ಕೋವಿಡ್​​ ರೋಗಿಗಳಲ್ಲಿ ಚಿಕಿತ್ಸೆಯಲ್ಲಿ ಹೇಗೆ ಕೋಶ ಚಿಕಿತ್ಸೆ ಕಾರ್ಯಾಚರಣೆ ನಡೆಸಲಿದೆ. ಮತ್ತು ಸಂಬಂಧದ ಸಂಕೀರ್ಣತೆ ಏನು ಎಂಬುದನ್ನು ಅಧ್ಯಯನ ಮಾಡುವ ಗುರಿಯನ್ನು ಸಂಶೋಧನೆ ಹೊಂದಿತ್ತು ಎಂದು ಯುಎಸ್​ಪಿ ಮೆಡಿಕಲ್​ ಸ್ಕೂಲ್​ನ ಪ್ರೊ.ಒಟೊವಿಯೊ ಕ್ಯಾಬ್ರಲ್​ ಮಾರ್ಕ್ಯೂಸ್​​ ಹೇಳಿದರು.

ಈ ಚಿಕಿತ್ಸೆಯ ತಂತ್ರದಲ್ಲಿ ಕಾಂಡ ಕೋಶವನ್ನು ಬಳಕೆ ಮಾಡಲಾಗುವುದು. ಇದನ್ನು ರೋಗಿಗಳ ಅಥವಾ ದಾನಿಗಳಿಂದ ಪಡೆಯಲಾಗುವುದು. ಕೋಶವನ್ನು ಚಿಕಿತ್ಸೆಗೆ ಒಳಪಡಿಸುವ ಮುನ್ನ ಪ್ರಯೋಗಾಲಯದಲ್ಲಿ ಸುಧಾರಣೆಗೆ ಒಳಪಡಿಸಲಾಗುವುದು. ಪ್ರಯೋಗಾಲಯದ ಪರೀಕ್ಷೆಯಲ್ಲಿ ಈ ಕೋಶ ಚಿಕಿತ್ಸೆಯು ಕೋವಿಡ್​ ರೋಗಿಗಳಲ್ಲಿ ಊರಿಯೂತದ ತೀವ್ರತೆಯನ್ನು ಮಿತಿಗೊಳಿಸಿದೆ. ಶ್ವಾಸಕೋಶದ ಹಾನಿ ಕಡಿಮೆ ಮಾಡಿದ್ದು, ಶ್ವಾಸಕೋಶ ಉತ್ತಮವಾಗಿ ಕಾರ್ಯಾಚರಣೆ ಮಾಡಲು ಸಹಾಯ ಮಾಡಿದೆ.

ಕೋಶ ಚಿಕಿತ್ಸೆ ಕೋವಿಡ್​ ರೋಗಿಗಳಿಗೆ ಸಹಾಯಕ ಚಿಕಿತ್ಸೆ ನೀಡಿದರೂ, ಕೋವಿಡ್​​ನಿಂದ ರಕ್ಷಣೆ ಪಡೆಯುವಲ್ಲಿ ಲಸಿಕೆಯೇ ಉತ್ತಮ ಎಂಬುದಕ್ಕೆ ಒತ್ತು ನೀಡಲಾಗಿದೆ ಎಂದು ಅಧ್ಯಯನ ಲೇಖಕರು ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಕೋವಿಡ್​ಗಿಂತ ಶೇ 40ರಷ್ಟು ಹೆಚ್ಚಿನ ಸಾವಿನ ದರ ಹೊಂದಿದೆ ಈ ಭಯಂಕರ ನಿಫಾ; ತಜ್ಞರ ಎಚ್ಚರಿಕೆ

ABOUT THE AUTHOR

...view details