ನ್ಯೂಯಾರ್ಕ್: ಕೋವಿಡ್ ಸೋಂಕಿಗೆ ಕಾರಣವಾಗುವ ಸಾರ್ಸ್ ಕೋವ್ 2 ವೈರಸ್ಗಳನ್ನು ಹರಡುವಲ್ಲಿ ಬೆಕ್ಕುಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಹೊಸ ಅಧ್ಯಯನ ತಿಳಿಸಿದೆ. ಅಲ್ಲದೇ, ವಾತಾವರಣವೂ ಕೂಡ ಸಾಂಕ್ರಾಮಿಕವಾಗುತ್ತದೆ ಎಂದು ಎಚ್ಚರಿಸಿದೆ. ವ್ಯಾಗೆನಿಂಗನ್ ವಿಶ್ವವಿದ್ಯಾಲಯ ಮತ್ತು ಸಂಶೋಧಕರು 16 ಬೆಕ್ಕುಗಳ ಮೇಲೆ ಈ ಅಧ್ಯಯನ ನಡೆಸಿದ್ದಾರೆ. ನೈಸರ್ಗಿಕವಾಗಿ ಸೋಂಕಿತ ವ್ಯಕ್ತಿಯೊಬ್ಬನಲ್ಲಿದ್ದ ಸಾರ್ಸ್ ಕೋವ್ ವೈರಸ್ ಸೋಂಕುಗಳು ಬೆಕ್ಕುಗಳಲ್ಲಿ ಪರೋಕ್ಷವಾಗಿ ಕಂಡು ಬಂದಿವೆ.
ವೈರಸ್ಗೆ ನೇರವಾಗಿ ಒಡ್ಡಿಕೊಂಡ ಬೆಕ್ಕುಗಳನ್ನು ಮೂರು ವಾರಗಳ ಕಾಲ ಅಧ್ಯಯನ ನಡೆಸಲಾಗಿದೆ. ನಾಸಾಲ್ ಮಾದರಿ (ಮೂಗಿನ ದ್ರವ ಪರೀಕ್ಷೆ) ಮತ್ತು ಓರೊಫಾರ್ಂಜಿಯಲ್ ಮಾದರಿಗಳನ್ನು 3 ಬಾರಿ ತೆಗೆದುಕೊಳ್ಳಲಾಗಿದೆ. ಈ ಅವಧಿಯಲ್ಲಿ ಬಾಯಿ ಮತ್ತು ಗುದನಾಳ ಮಾದರಿಗಳನ್ನು 15 ಬಾರಿ ಪರೀಕ್ಷಿಸಲಾಗಿದೆ. ಬೆಕ್ಕುಗಳ ನಡುವೆ ನೇರ ಮತ್ತು ಪರೋಕ್ಷ ಸಂಪರ್ಕದ ಮೂಲಕ ಸಾರ್ಸ್ ಕೋವ್ ಪ್ರಸರಣವನ್ನು ಮೌಲ್ಯಮಾಪನ ಮಾಡಲಾಯಿತು.
ಬೆಕ್ಕುಗಳು ಸಾರ್ಸ್ ಕೊವ್ 2 ಸೋಂಕಿಗೆ ಒಳಗಾಗುತ್ತವೆ. ಅವು ಇತರೆ ಬೆಕ್ಕುಗಳಿಗೆ ಸೋಂಕು ಹರಡುತ್ತವೆ. ಈ ಮೂಲಕ ಪರಿಸರಕ್ಕೂ ತಗುಲುತ್ತದೆ ಎಂದು ಎಂದು ಜರ್ನಲ್ ಆಫ್ ಅಮೆರಿಕನ್ ಸೊಸೈಟಿ ಫಾರ್ ಮೈಕ್ರೊಬಯಾಲಾಜಿಯಲ್ಲಿ ಪ್ರಕಟಿಸಿದೆ. ವಾತಾವರಣವೂ ಸಾಂಕ್ರಾಮಿಕವಾಗಬಹುದು. ಆದರೆ, ಸಾಂಕ್ರಾಮಿಕವೂ ವೇಗವಾಗಿ ಹೋಗುತ್ತದೆ ಎಂದಿದ್ದಾರೆ.
ಬೆಕ್ಕುಗಳು ಸಾರ್ಸ್ ಕೋವ್ ಸೋಂಕು ಪ್ರಸರಣವನ್ನು ಸಮರ್ಥವಾಗಿ ಪ್ರಸರಣ ಮಾಡುತ್ತದೆ ಎಂದು ವಾನ್ ಡೆರ್ ಪೊಯೆಲ್ ತಿಳಿಸಿದ್ದಾರೆ. ಬೆಕ್ಕಿನ ಸೋಂಕುಗಳು ಸಾರ್ಸ್ ಕೋವ್ ಮೂಲಕ ಕಲುಷಿತ ವಾತಾವರಣಕ್ಕೆ ಹರಡುತ್ತದೆ. ಇದರ ಪ್ರಯೋಗಾಲಯಕ್ಕೆ ಮನೆಯಲ್ಲಿನ ಬೆಕ್ಕುಗಳನ್ನು ಸಾರ್ಸ್ ಕೋವ್ ಸೋಂಕಿಗೆ ಒಳಪಡಿಸಿ, ಅದು ಕುಟುಂಬದಲ್ಲಿ ಹೇಗೆ ಪ್ರಸರ ಮಾಡುತ್ತದೆ ಎಂಬುದನ್ನು ನೋಡಬಹುದು
2022 ರ ಜೂನ್ನಲ್ಲಿ ಥಾಯ್ಲೆಂಡ್‌ನ ಪ್ರಿನ್ಸ್ ಆಫ್ ಸೊನಗ್ಕಲ ವಿಶ್ವವಿದ್ಯಾಲಯ ಸಂಶೋಧಕರು, ಮೊದಲ ಬಾರಿಗೆ ಬೆಕ್ಕುಗಳಿಂದ ಮಾನವರಿಗೆ ವೈರಸ್ ಪ್ರಸರಣ ಬಗ್ಗೆ ತಿಳಿಸಿದರು. ಕೋವಿಡ್ ಸೋಂಕಿತ ಬೆಕ್ಕು ಸೀನುವುದರಿಂದ 32 ವರ್ಷದ ಆರೋಗ್ಯಯುತ ಮಹಿಳೆ ಆಗಸ್ಟ್ 2021ರಲ್ಲಿ ಸೋಂಕಿಗೆ ತುತ್ತಾಗಿದ್ದರು. ವಂಶವಾಹಿ ಅಧ್ಯಯನ ಕೂಡ ಸಾರ್ಸ್ ಕೋವ್ ವೈರಸ್ ಅನ್ನು ಬೆಕ್ಕು ತನ್ನ ಮಾಲೀಕರಿಗೆ ಪ್ರಸರಣ ಮಾಡುತ್ತದೆ ಎಂಬ ಹೇಳಿಕೆಯನ್ನು ಬೆಂಬಲಿಸುತ್ತದೆ. ಈ ಸಂಬಂಧ ಎಮರ್ಜಿಂಗ್ ಇನ್ಫೆಕ್ಷನ್ ಡಿಸೀಸ್ ಜರ್ನಲ್ನಲ್ಲಿ ಕೂಡ ಪತ್ರಿಕೆ ಪ್ರಕಟವಾಗಿದೆ.
ಮನೆಯಲ್ಲಿ ಸಾಕಿದ ಬೆಕ್ಕಿಗಳು ಕೋವಿಡ್ ಸೋಂಕಿಗೆ ಒಳಗಾಗಿರುವುದನ್ನು ಬ್ರಿಟನ್ ವಿಜ್ಞಾನಿಗಳು ಮೊದಲ ಬಾರಿಗೆ 2021ರಲ್ಲಿ ವರದಿ ಮಾಡಿದ್ದಾರೆ. ಬೆಕ್ಕು ಮತ್ತು ನಾಯಿಗಳಲ್ಲಿ ಸಾರ್ಸ್ ಕೋವ್ ಅಲ್ಫಾ ವೆರಿಯಂಟ್ ಪತ್ತೆಯಾಗಿದೆ. ಎರಡು ಬೆಕ್ಕುಗಳು ಮತ್ತು ಒಂದು ನಾಯಿಗಳನ್ನು ಪಿಸಿಆರ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಸಕಾರಾತ್ಮಕವಾಗಿದೆ ಎಂದು ವೆಟರ್ನರಿ ರೆಕಾರ್ಡ್ ಜರ್ನಲ್ನಲ್ಲಿ ತಿಳಿಸಲಾಗಿದೆ. ಆದರೆ ಎರಡು ಬೆಕ್ಕುಗಳು ಮತ್ತು ಒಂದು ನಾಯಿ ಹೃದಯ ಕಾಯಿಲೆಯ ಚಿಹ್ನೆಗಳನ್ನು ಅಭಿವೃದ್ಧಿಪಡಿಸಿದ ಎರಡರಿಂದ ಆರು ವಾರಗಳ ನಂತರ ಈ ಪ್ರತಿಕಾಯಗಳು ಪತ್ತೆಯಾಗಿದೆ.
ಇದನ್ನೂ ಓದಿ: ನಿಮಗೆ ಈ ಲಕ್ಷಣವಿದ್ರೆ ದೀರ್ಘಾವಧಿ ಕೋವಿಡ್ ಇದೆ: ಅಧ್ಯಯನ