ಮಗುವಿನ ಬೆಳವಣಿಗೆಯಲ್ಲಿ ಎಣ್ಣೆ ಮಸಾಜ್ ಅತ್ಯಗತ್ಯವಾಗಿದೆ. ಇದರಿಂದ ಮಗುವಿನ ಸ್ನಾಯು ಮತ್ತು ಮೂಳೆಗಳ ಅಭಿವೃದ್ಧಿ ಜೊತೆಗೆ ರಕ್ತ ಸಂಚಾರಕ್ಕೆ ಇದು ಸಹಾಯ ಮಾಡುತ್ತದೆ. ಈ ಬೇಬಿ ಆಯಿಲ್ಗಳು ಮಗುವಿನ ಚರ್ಮದ ಆರೈಕೆಗೆ ಅವಶ್ಯಕವಾದ ಮೃದು ಮತ್ತು ಸೌಮ್ಯವಾಗಿಸುತ್ತದೆ. ಇದರಲ್ಲಿ ಹಾನಿಕಾರಕವಲ್ಲದ ಅಂಶಗಳಿದ್ದು, ಇವು ತ್ವಚೆಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಇದೇ ಕಾರಣಕ್ಕೆ ಈ ಬೇಬಿ ಆಯಿಲ್ ಅನ್ನು ದೊಡ್ಡವರ ಬಳಕೆಗೂ ಅನೇಕ ಬಾರಿ ಸಲಹೆ ನೀಡಲಾಗುವುದು.
ವಯಸ್ಕರ ಚರ್ಮದ ಹೊಳಪಿಗೆ ಈ ಬೇಬಿ ಆಯಿಲ್ ಸಹಾಯ ಮಾಡುತ್ತದೆ. ಮಗುವಿನ ಆರೈಕೆಗೆ ಇರುವ ಈ ಬೇಬಿ ಆಯಿಲ್ಗಳು ದೊಡ್ಡವರ ತ್ವಚೆ ಸಮಸ್ಯೆ ಪರಿಹಾರವನ್ನು ಹೊಂದಿದೆ. ಈ ಕುರಿತ ಕೆಲವು ಸರಳ ಸಲಹಾ ಮಾಹಿತಿ ಇಲ್ಲಿದೆ.
ಮಗುವಿನ ಚರ್ಮ ಒಣ ಮತ್ತು ಕಾಂತಿ ಕಳೆದುಕೊಂಡಾಗ ಬೇಬಿ ಆಯಿಲ್ನಿಂದ ಪ್ರತಿನಿತ್ಯ ಅರ್ಧಗಂಟೆ ಮಸಾಜ್ ಮಾಡಿ. ಈ ವಿಟಮಿನ್ ಎಣ್ಣೆ ಚರ್ಮವನ್ನು ಪುನರುಜ್ಜೀವನಗೊಳಿಸುತ್ತದೆ. ಹಾಗೇ ತ್ವಚೆ ತಾಜಾತನದಿಂದ ಕಾಣುವಂತೆ ಮಾಡುತ್ತದೆ. ಆದಾಗ್ಯೂ ಎಣ್ಣೆಯನ್ನು ಹಾಕಿದ ಅರ್ಧಗಂಟೆ ಬಳಿಕ ತಕ್ಷಣಕ್ಕೆ ಸ್ನಾನ ಮಾಡಿಸುವುದು ಅಗತ್ಯವಾಗಿದೆ.
ಕಾಲ್ಬೆರಳುಗಳ ರಕ್ಷಣೆಗೆ ಹೀಗೆ ಮಾಡಿ:ಅನೇಕ ಮಂದಿಯ ಕಾಲ್ಬೆರಳುಗಳಲ್ಲಿ ಒಡಗಿನ ಸಮಸ್ಯೆ ಕಾಡುವುದು ಸಹಜ. ಇಂತಹ ಪರಿಸ್ಥಿತಿಯಲ್ಲಿ ನಿತ್ಯ ರಾತ್ರಿ ಕಾಲಿನ ಬೆರಳಿಗೆ ಬೇಬಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಸಾಜ್ ಮಾಡಿ. 20 ನಿಮಿಷ ಇದನ್ನು ಮಾಡುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.