ಕಾಫಿ ಸೇವನೆಯಿಂದ ಮೂಡ್ ತಾಜಾತನಗೊಳ್ಳುವ ಜೊತೆಗೆ ಹೊಸ ಹುರುಪು ಪಡೆಯಬಹುದು ಎಂಬುದನ್ನು ಈಗಾಗಲೇ ಹಲವು ಸಂಶೋಧನೆಗಳು ತಿಳಿಸಿವೆ. ಈ ರೀತಿ ಹೊಸತನ ಪಡೆಯಲು ಕಾಫಿಯಲ್ಲಿನ ಸಾದಾ ಕೆಫೀನ್ ಒಂದರಿಂದಲೇ ಸಾಧ್ಯವಿಲ್ಲ ಎಂಬುದನ್ನು ಹೊಸ ಅಧ್ಯಯನ ಹೇಳಿದೆ. ಜರ್ನಲ್ ಫ್ರಂಟಿಯರ್ಸ್ ಇನ್ ಬಿಯೇವಿಯರಲ್ ನ್ಯೂರೋಸೈನ್ಸ್ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಅನುಸಾರ, ಸಾದಾ ಕೆಫೀನ್ ಭಾಗಶಃ ಒಂದು ಕಪ್ ಕಾಫಿಯ ಪರಿಣಾಮವನ್ನು ಮರು ಉತ್ಪಾದಿಸಬಹುದು. ಮಿದುಳಿಗೆ ಉತ್ತೇಜನದ ಹೊರತಾಗಿ ಕಾಫಿ ಕಾರ್ಯಶೀಲ ಸ್ಮರಣೆ ಮತ್ತು ಮಿದುಳಿನಲ್ಲಿ ಗುರಿ ನಿರ್ದೇಶಿಕ ನಡುವಳಿಕೆಗೆ ಕಾರಣವಾಗುತ್ತದೆ ಎಂದು ವರದಿ ತಿಳಿಸಿದೆ.
ಕಾಫಿ ಜಾಗೃತಿ ಮತ್ತು ಸೈಕೊಮೊಟೊರ್ ಕಾರ್ಯಾಚರಣೆಯನ್ನು ಹೆಚ್ಚಿಸುತ್ತದೆ ಎಂಬ ಸಾಮಾನ್ಯ ನಂಬಿಕೆ ಇದೆ. ಜೈವಿಕ ವಿದ್ಯಮಾನದ ಆಧಾರವಾಗಿರುವ ಕಾರ್ಯವಿಧಾನಗಳನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಾಗ ಅದನ್ನು ಮಾರ್ಪಡಿಸುವ ಅಂಶಗಳನ್ನು ಮತ್ತು ಆ ಕಾರ್ಯವಿಧಾನದ ಸಂಭಾವ್ಯ ಪ್ರಯೋಜನ ಪತ್ತೆಯ ಹೊಸ ದಾರಿ ಪಡೆಯುತ್ತೀರಿ ಎಂದು ಅಧ್ಯಯನದ ಸಹ ಲೇಖಕ ನುನೊ ಸೌಸಾ ಹೇಳಿದ್ದಾರೆ.
ಅಧ್ಯಯನಕ್ಕೆ ಮೊದಲ ದಿನಕ್ಕೆ ಒಂದು ಕಪ್ ಕಾಫಿ ಕುಡಿಯುವವರನ್ನು 3 ಗಂಟೆಗಳ ಕಾಲ ಕೆಫೀನ್ಯುಕ್ತ ಆಹಾರ ಮತ್ತು ಪಾನೀಯ ತಿನ್ನದಂತೆ ಕೇಳಲಾಯಿತು. ಬಳಿಕ ಭಾಗೀದಾರರನ್ನು ಎರಡು ಸಣ್ಣ ಎಂಆರ್ಐ ಸ್ಕ್ಯಾನ್ಗೆ ಒಳಪಡಿಸಲಾಯಿತು. ಒಂದು ಕೆಫೀನ್ ಅಂಶ ಸೇವಿಸಿದ ಬಳಿಕ ಮತ್ತೊಂದು ಕಾಫಿ ಸೇವನೆ ಬಳಿಕ ಈ ಕುರಿತು ಸಾಮಾಜಿಕ ಮತ್ತು ಡೆಮೊಗ್ರಾಫಿಕ್ ದತ್ತಾಂಶ ಸಂಗ್ರಹಿಸಲಾಯಿತು.