ಕ್ಯಾಲಿಫೋರ್ನಿಯಾ:ವಿಜ್ಞಾನದಲ್ಲಿ ಹೊಸ ಮೈಲಿಗಲ್ಲುಗಳತ್ತ ಸಾಗುತ್ತಿರುವ ಮನುಷ್ಯ ಇದೀಗ ಮಾಂಸ ಕೃಷಿಗೂ ಮುಂದಾಗಿದ್ದಾನೆ. ಪ್ರಾಣಿಗಳ ಜೀವಕೋಶಗಳನ್ನು ಬಳಕೆ ಮಾಡಿ, ಸ್ವತಃ ಮಾಂಸವನ್ನು ಬೆಳೆದಿದ್ದಾನೆ. ಈ ವಿಷಯ ಕೇಳಿದಾಕ್ಷಣ ಅನೇಕ ಚಿಕನ್ ಪ್ರಿಯರು ಮುಖ ಕಿವುಚಬಹುದು. ಆದರೆ, ಅವರಿಂದ ಬರುವ ಮತ್ತೊಂದು ಪ್ರಶ್ನೆ ಹೇಗಿರಲಿದೆ ಅದರ ರುಚಿ ಎಂಬುದು. ಕಾರಣ ಈ ಚಿಕನ್ (ಕೋಳಿ ಮಾಂಸ) ಕೋಳಿಯಿಂದಲೇ ಬಂದಿರುವುದಿಲ್ಲ. ಇದು ಕೋಶ ಕೃಷಿಯ ಚಿಕನ್ ಆಗಿರಲಿದೆ.
ಅಮೆರಿಕದ ಕೃಷಿ ಇಲಾಖೆ ಬುಧವಾರ ಕ್ಯಾಲಿಫೋರ್ನಿಯಾ ಎರಡು ಆಹಾರ ಘಟಕಗಳಾದ ಅಪ್ಸೈಡ್ ಫುಡ್ ಮತ್ತು ಗುಡ್ ಮೀಟ್ಗೆ ಹಸಿರು ನಿಶಾನೆ ತೋರಿದೆ. ಜೊತೆಗೆ ಇದು ಮಾಂಸ ಉತ್ಪಾದನೆಯ ರುಚಿ ಸವಿಯಲು ಕೂಡ ಉತ್ಸಾಹ ತೋರಿದೆ. ಈ ಮೂಲಕ ಲಕ್ಷಾಂತರ ಪ್ರಾಣಿಗಳ ವಧೆಯನ್ನು ತಪ್ಪಿಸುವ ಗುರಿಯನ್ನು ಇದೆ ಹೊಂದಿದೆ. ಜೊತೆಗೆ ಹುಲ್ಲುಗಾವಲಿನ ನಾಶದ ಪರಿಣಾಮ, ಆ ಪ್ರಾಣಿಗಳಿಗೆ ಆಹಾರ ಬೆಳೆಸುವ ಚಿಂತೆ ಮತ್ತು ಪ್ರಾಣಿಗಳ ತ್ಯಾಜ್ಯಕ್ಕೆ ಇದು ಮುಕ್ತಿ ಹಾಡಲಿದೆ ಎಂಬ ಲೆಕ್ಕಾಚಾರ ಕೂಡ ನಡೆಸಲಾಗಿದೆ.
ಮಾಂಸದ ವಿರೋಧಾಭಾಸ:ಜೀವನ ಪರ್ಯಾಂತ ಮಾಂಸ ಪ್ರಿಯರಾದರೂ, ಮಾಂಸವನ್ನು ತಿನ್ನುವಾಗ ಅದರ ಹಿಂದಿನ ಪರಿಣಾಮಗಳನ್ನು ನೆನೆದು ಕೆಲವರು ದೋಷಿ ಭಾವನೆಗೆ ಒಳಗಾಗುತ್ತಾರೆ. ಕಾರಣ ಮಾಂಸಗಳ ವಧೆ ಸಂದರ್ಭದಲ್ಲಿ ಇದರಿಂದ ಕಟುಕರು ಅನೇಕ ರೋಗಕ್ಕೆ ತುತ್ತಾಗುವುದು ಸುಳ್ಳಲ್ಲ. ಅಲ್ಲದೇ, ನಾವು ಮಾಂಸ ತಿನ್ನಲು ಪ್ರಾಣಿಗಳನ್ನು ಬಲಿ ಕೊಡಬೇಕು ಎಂಬ ಮಾನಸಿಕ ಸಂಘರ್ಷ ಅನೇಕರಲ್ಲಿ ಇರುತ್ತದೆ. ಇಂತಹವರಿಗೆ ಈ ಮಾಂಸ ವರವಾಗಲಿದೆ. ಈ ಕುರಿತು ಮಾತನಾಡಿರುವ ಅನೇಕ ಮಂದಿ ಇದರ ರುಚಿ ಸವಿಯಲು ಉತ್ಸುಕರಾಗಿದ್ದಾರೆ. ವಿಭಿನ್ನ ಬಗೆಯ ಮಾಂಸವನ್ನು ತಿನ್ನಲು ಉತ್ಸಾಹ ಹೊಂದಿದ್ದೇವೆ. ಈ ಬಗ್ಗೆ ಕುತೂಹಲ ಇದ್ದು, ಇದು ನೈಜ ಮಾಂಸದಂತೆ ರುಚಿ ನೀಡಲಿದೆಯಾ ಎಂಬ ಬಗ್ಗೆ ಕಾಯುತ್ತಿದ್ದೇವೆ ಎಂದಿದ್ದಾರೆ.
ಏನಿದರ ಕೃತಕ ಮಾಂಸ : ದಪಡ್ಡ ತೊಟ್ಟಿಯಲ್ಲಿ ಬೆಳೆಯುವ ಕೋಶಗಳಿಂದಾಗಿ ಈ ಕೃಷಿ ಮಾಂಸ ಉತ್ಪಾದನೆ ಮಾಡಲಾಗುತ್ತದೆ. ಇದು ಕೇವಲ ಆಕಾರ ಮತ್ತು ರಚನೆಯಾಗಿರುತ್ತದೆ. ಆದರೆ, ಈ ಮಾಂಸವೂ ನೈಜ ಮಾಂಸದಂತೆ ರುಚಿಯಾಗಿರುತ್ತದೆಯೇ ಇಲ್ಲವೇ ಎಂಬುದು ಅಂತಿಮವಾಗಿ ತೀರ್ಮಾನವಾಗಬೇಕಿದೆ.