'ಕೋವಿಡ್-19' ಹಾಗೂ 'ಅಲ್‌ಝೈಮರ್' (Alzheimer's) ಎಂಬ ನೆನಪು ಮಾಸುವ ರೋಗದ ಅಪಾಯಗಳನ್ನು ಹೆಚ್ಚಿಸಲು ಕಾರಣವಾಗುವ ವಂಶವಾಹಿ ಒಂದೇ ಎಂಬುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.
'ಬ್ರೈನ್' (Brain) ಎಂಬ ಜರ್ನಲ್ನಲ್ಲಿ ಲಂಡನ್ನ ಯುಸಿಎಲ್ ಕ್ವೀನ್ ಸ್ಕ್ವೇರ್ ಇನ್ಸ್ಟಿಟ್ಯೂಟ್ ಆಫ್ ನ್ಯೂರಾಲಜಿ ಮತ್ತು ಯುಕೆ ಡಿಮೆನ್ಶಿಯಾ ಸಂಶೋಧನಾ ಸಂಸ್ಥೆಯ ಪ್ರಮುಖ ಲೇಖಕ ಡಾ. ಡೆರ್ವಿಸ್ ಸಾಲಿಹ್ ಅವರು ಪ್ರಕಟಿಸಿದ ಅಧ್ಯಯನದ ವರದಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.
ಏನಿದು ಅಲ್‌ಝೈಮರ್?
ಅಲ್‌ಝೈಮರ್, ಇದು ನರಕ್ಕೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ಮೆದುಳಿನ ಕೋಶಗಳು ಸಾಯಲು ಕಾರಣವಾಗುತ್ತದೆ. ಪರಿಣಾಮ ರೋಗಿಯ ಆಲೋಚನಾ ಸಾಮರ್ಥ್ಯ ಕುಂಠಿತವಾಗಿ ಮರೆವು, ಬುದ್ಧಿಮಾಂದ್ಯತೆಗೆ ಎಡೆ ಮಾಡಿಕೊಡುತ್ತದೆ.
'OAS1'
ಕೊರೊನಾ ಹಾಗೂ ಅಲ್‌ಝೈಮರ್ ಕಾಯಿಲೆಗೆ ಒಳಗಾದ ರೋಗಿಗಳ ಪ್ರತಿಕಾಯ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಉಂಟುಮಾಡಿ, ಅಪಾಯಗಳನ್ನು ಹೆಚ್ಚಿಸಲು ಕಾರಣವಾಗುವ ಜೀನ್ ಅಥವಾ ವಂಶವಾಹಿ ಒಂದೇ ಆಗಿದೆ- ಅದುವೇ 'OAS1'. ಕೋವಿಡ್ ಸೋಂಕಿತರ ಮೆದುಳಿನಲ್ಲಿ ಉರಿಯೂತ ಕೂಡ ಉಂಟಾಗಬಹುದು.