ನವದೆಹಲಿ: ಕಡಿಮೆ ತೂಕದ ಮಕ್ಕಳ ಜನನ, ಕಣ್ಣು, ಶ್ವಾಸಕೋಶ, ಚರ್ಮ ಮತ್ತು ಹೃದಯ ಸೇರಿದಂತೆ ಮಾನಸಿಕ ಆರೋಗ್ಯದ ಮೇಲೆ ಹಾನಿ ಬೀರುತ್ತಿರುವ ವಿಷಪೂರಿತ ಗಾಳಿ ನಿಧಾನವಾಗಿ ಸ್ಲೋ ಪಾಯ್ಸನ್ ಆಗುತ್ತಿದ್ದು, ಭಾರತದಲ್ಲಿ ಸಾವು ಮತ್ತು ರೋಗಗಳ ಏರಿಕೆಗೆ ಕಾರಣವಾಗುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಪಲ್ಯೂಷನ್ ಇನ್ 2020ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ ಮಾಲಿನ್ಯವೂ ಮನುಷ್ಯರಿಗೆ ಅತಿ ದೊಡ್ಡ ಮಟ್ಟದಲ್ಲಿ ಅಸ್ತಿತ್ವದಲ್ಲಿರುವ ಬೆದರಿಕೆಯಾಗಿದ್ದು, ಜಾಗತಿಕವಾಗಿ 9 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದೆ. ಅದಕ್ಕಿಂತ ಮುಖ್ಯವಾಗಿ ಜಗತ್ತಿನ ಇತರ ಪ್ರದೇಶಗಳಿಗಿಂತ ಭಾರತದ ಜನರು ಮಾಲಿನ್ಯದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ತೋರಿಸಿದೆ. 2019ರಲ್ಲಿ ಭಾರತದಲ್ಲಿ 1.67 ಮಿಲಿಯನ್ ಜನರು ಸಾವನ್ನಪ್ಪಿದ್ದು, ಇದರಲ್ಲಿ ಮಾಲಿನ್ಯದಿಂದ ಸಾವನ್ನಪ್ಪಿದವರ ಸಂಖ್ಯೆ 17.8ರಷ್ಟಿದೆ.
ವಿಷವಾಗುತ್ತಿರುವ ಮಾಲಿನ್ಯ: 2023ರಲ್ಲಿ ಈ ಮಾಸದಲ್ಲಿ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವೂ (ಎಕ್ಯೂಐ) 500ಕ್ಕೆ ಏರಿದ್ದು, ಇದು ವಿಶ್ವ ಆರೋಗ್ಯ ಸಂಘಟನೆ ಆರೋಗ್ಯಕರ ಎಂದು ಪರಿಗಣಿಸಿದ ಮಿತಿಗಿಂತ 100 ಪಟ್ಟು ಹೆಚ್ಚಿದೆ. ದೆಹಲಿಯಲ್ಲಿ ವಾಯುಗುಣಮಟ್ಟ ಅಪಾಯಕಾರಿ ಮಟ್ಟ ತಲುಪಿದ್ದು, ಪಿಎಂ 2.5 ಮತ್ತು ಪಿಎಂ10ಗೆ ತಲುಪಿದೆ. ಇದರಿಂದ ಹೊಗೆಯ ದಟ್ಟತೆ ಆವರಿಸಿದೆ. ಇದರಿಂದ ಹಲವೆಡೆ ವೀಕ್ಷಣೆಯು 500 ಮೀಟರ್ಗೂ ಕೆಳಗೆ ಕುಗ್ಗಿದೆ
ದೇಶದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾದಲ್ಲಿ ಮಾತ್ರ ಸಾವಿನ ಸಂಖ್ಯೆ ಕೂಡ ಹೆಚ್ಚಲಿದೆ. ವಿಶೇಷವಾಗಿ ಇಂಡೋ - ಗಂಗಾ ಪ್ರದೇಶದಲ್ಲಿ ಈ ಏರಿಕೆ ಕಾಣಬಹುದಾಗಿದೆ. ಇದನ್ನು ನಾವು ಈ ವರ್ಷ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಸಾಕೇತ್ನ ಮಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪಲ್ಮನೊಲೊಜಿ ವೈದ್ಯ ವಿವೇಕ್ ನಂಗಿಯಾ ತಿಳಿಸಿದ್ದಾರೆ.
ಆಗಸ್ಟ್‌ನಲ್ಲಿ ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ 2023ರ ವಾಯು ಗುಣಮಟ್ಟ ಜೀವನ ಸೂಚ್ಯಂಕ (ಎಕ್ಯೂಎಲ್ಐ) ವರದಿ ಅನುಸಾರ ರಾಷ್ಟ್ರ ರಾಜಧಾನಿಯಲ್ಲಿನ ವಾಯು ಮಾಲಿನ್ಯವೂ ಇಲ್ಲಿ ವಾಸಿಸುವರ ಜೀವಿತಾವಧಿಯನ್ನು 11.9ರಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ.
ಹೆಚ್ಚುತ್ತಿರುವ ಆರೋಗ್ಯ ಅಪಾಯ: ಜೀವತಾವಧಿಯ ಮಾಪನದಲ್ಲಿ ಸಂಶೋಧಕರು ಪಿಎಂ2.5 ಮಾಲಿನ್ಯವೂ ಭಾರತದಲ್ಲಿ ಮಾನವನ ಆರೋಗ್ಯಕ್ಕೆ ಮಾರಕವಾಗಲಿದೆ ಎಂದಿದೆ. ಹೃದಯರಕ್ತನಾಳದ ಖಾಯಿಲೆಗಳಿಗೆ 4.5 ವರ್ಷಗಳು ಮಗು ಮತ್ತು ತಾಯಿಯ ಅಪೌಷ್ಟಿಕತೆಗೆ 1.8 ವರ್ಷಗಳು ಹೋಲಿಸಿದರೆ ಇದು ಸರಾಸರಿ ಭಾರತೀಯರ ಜೀವನದಲ್ಲಿ 5.3 ವರ್ಷಗಳನ್ನು ಕಡಿಮೆ ಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.