ಕರ್ನಾಟಕ

karnataka

ETV Bharat / sukhibhava

ಕಲಹ ಪೀಡಿತ ಮಣಿಪುರದಲ್ಲಿ ಆಫ್ರಿಕನ್​ ಹಂದಿ ಜ್ವರ ಉಲ್ಬಣ; ಅಧಿಕಾರಿಗಳಿಂದ ಮುನ್ನೆಚ್ಚರಿಕೆ

ಇಲ್ಲಿನ ಪ್ರದೇಶದಲ್ಲಿ ಹಂದಿ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಇದೀಗ ಹಂದಿ ಜ್ವರ ಕಾಣಿಸಿಕೊಂಡಿರುವುದರಿಂದ ಉದ್ಯಮದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.

African swine fever outbreak in Manipur
African swine fever outbreak in Manipur

By ETV Bharat Karnataka Team

Published : Oct 16, 2023, 10:55 AM IST

ಇಂಫಾಲ: ಮಣಿಪುರ ಈಗಾಗಲೇ ಎರಡು ಸಮುದಾಯಗಳ ನಡುವಿನ ಗಲಭೆಗೆ ನಲುಗಿದೆ. ಈ ನಡುವೆ ಇದೀಗ ಇಂಫಾಲದಲ್ಲಿ ಆಫ್ರಿಕನ್​ ಹಂದಿ ಜ್ವರ ಕಾಣಿಸಿಕೊಂಡಿದ್ದು, ಇದನ್ನು ರಾಜ್ಯದ ಪಶು ಮತ್ತು ಪ್ರಾಣಿ ಸಂಗೋಪನಾ ಇಲಾಖೆ ಕೂಡ ದೃಢಪಡಿಸಿದೆ. ರಾಜ್ಯ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಯ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ (ಸಿಎಯು) ಹಂದಿಸಾಕಣೆಯನ್ನು ಸಾಂಕ್ರಾಮಿಕ ರೋಗದ ಕೇಂದ್ರ ಎಂದು ಘೋಷಿಸಿದೆ.

ಪಶ್ಚಿಮ ಇಂಫಾಲದ ಉಪ ಆಯುಕ್ತರು ಮತ್ತು ನಿರ್ದೇಶಕರು, ಪಶು ಮತ್ತು ಪ್ರಾಣಿ ಸಂಗೋಪನಾ ಇಲಾಖೆ, ನಿರ್ಬಂಧಿತ ಪ್ರದೇಶದಿಂದ ಹಂದಿ ಆಮದು ಮತ್ತು ರಫ್ತು ನಿರ್ಬಂಧಿಸುವಂತೆ ಭಾನುವಾರ ಜಂಟಿಯಾಗಿ ಆದೇಶ ಹೊರಡಿಸಿದೆ.

ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ಜೀವಂತ ಅಥವಾ ಸತ್ತ ಪ್ರಾಣಿಗಳನ್ನು ಯಾರು ಕೂಡ ತೆಗೆದುಕೊಂಡು ಹೋಗಬಾರದು ಎಂದು ಸೂಚಿಸಲಾಗಿದೆ. ಪಶ್ಚಿಮ ಇಂಫಾಲ ಜಿಲ್ಲೆಯನ್ನು ನಿರ್ಬಂಧಿತ ಪ್ರದೇಶವಾಗಿ ಘೋಷಿಸಿದ್ದು, ತಕ್ಷಣಕ್ಕೆ ಸೋಂಕಿನ ತಡೆ, ನಿಯಂತ್ರಣ ಮತ್ತು ನಿರ್ಮೂಲಕ್ಕೆ ಕ್ರಮ ನಡೆಸಲಾಗಿದೆ.

ನಿಯಮ ಉಲ್ಲಂಘನೆ ಅಪರಾಧ: ಪ್ರಾಣಿಗಳ ಅಧಿನಿಯಮ, 2009ರ ಅನುಸಾರ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವಾಗ ಒಂದು ಕಿ.ಮೀ ಸುತ್ತಲಿನ ಸೋಂಕಿನ ಪ್ರದೇಶದಲ್ಲಿ ನಿಯಂತ್ರಣ ಮತ್ತು ಕಂಟೈನಮೆಂಟ್​​​ ಮಾಡಲಾಗುವುದು. ಈ ವೇಳೆ ಸೋಂಕಿನ ನಿರ್ಮೂಲನೆಗೆ ಅಡ್ಡಿಪಡಿಸುವ ಅಥವಾ ನಿಬಂಧನೆಗಳನ್ನು ಉಲ್ಲಂಘಿಸುವ ವ್ಯಕ್ತಿ ಅಥವಾ ಕಾರ್ಯವು ಕಾನೂನಿನ ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ.

ಪಶ್ಚಿಮ ಇಂಫಾಲ, ಪೂರ್ವ ಇಂಫಾಲ ಮತ್ತು ಕಾಕ್ಚಿಂಗ್​ ಸೆರಿದಂತೆ ಜಿಲ್ಲೆಉ ಅನೇಕ ಕಣಿವೆ ಸಾಕಾಣಿಕೆ ಕೇಂದ್ರದಲ್ಲಿ ಹಂದಿಗಳ ಸಾವಿನ ಕುರಿತು ವರದಿ ಕುರಿತು ತಿಳಿಸಿದ ಬಳಿಕ ಈ ಆಫ್ರಿಕನ್​ ಹಂದಿ ಜ್ವರ ಕಾಣಿಸಿಕೊಂಡಿದೆ. ಹಂದಿ ಸಾಕಾಣಿಕೆಕಾರರು ವರದಿ ಮಾಡಿದಂತೆ ಹಂದಿಗಳಲ್ಲಿ ಜ್ವರ, ಹಸಿವಿನ ನಷ್ಟ ಮತ್ತು ಹಸಿವಿನಂತಹ ಲಕ್ಷಣ ಕಾಣಿಸಿಕೊಂಡು ವಾರದಲ್ಲಿ ಹಂದಿಗಳು ಸಾವನ್ನಪ್ಪಿವೆ.

ಹಂದಿಗಳ ಸಾವಿನ ಪ್ರಕರಣ ಹೆಚ್ಚಾಗುತ್ತಿದ್ದಂತೆ ಪಶು ಸಂಗೋಪನ ಇಲಾಖೆ, ಸಾವನ್ನಪ್ಪಿದ ಹಂದಿಗಳಿಂದ ಮಾದರಿಗಳನ್ನು ಸಂಗ್ರಹಿಸಿದಾಗ ಇದಕ್ಕೆ ಕಾರಣ ಆಫ್ರಿಕನ್​ ಹಂದಿ ಜ್ವರ ಎಂದು ದೃಢಪಟ್ಟಿದೆ. ಅಧಿಕಾರಿಗಳು ಹೇಳಿವಂತೆ ಗುವಾಹಟಿಯ ಪ್ರಯೋಗಾಲಯದಲ್ಲಿ ಕೂಡ ಆಫ್ರಿಕನ್​ ಹಂದಿ ದೃಢಪಟ್ಟಿದೆ.

ಪ್ರತಿ ವರ್ಷ ಕಾಣಿಸಿಕೊಳ್ಳುತ್ತಿರುವ ಸೋಂಕು: ಹೆಚ್ಚು ಸಾಂಕ್ರಾಮಿಕವಾಗಿರುವ ಈ ಆಫ್ರಿಕನ್​ ಹಂದಿ ಜ್ವರ ಪ್ರತಿವರ್ಷ ಮಿಜೋರಾಂ ಸೇರಿದಂತೆ ಈಶಾನ್ಯ ಭಾರತದಲ್ಲಿ ಕಾಣಿಸಿಕೊಳ್ಳುತ್ತದೆ. 2021 ಮತ್ತು 22ರಲ್ಲಿ ಈ ಸೋಂಕಿನಿಂದಾಗಿ 33,400 ಹಂದಿಗಳನ್ನು ಕೊಲ್ಲಲಾಯಿತು. ಇದರಿಂದ ಸುಮಾರು 10 ಸಾವಿರ ಕುಟುಂಬಗಳು 61 ಕೋಟಿ ರೂ. ನಷ್ಟ ಅನುಭವಿಸಿದವು.

ಈಶಾನ್ಯ ಪ್ರದೇಶದಲ್ಲಿ ಹಂದಿ ಉದ್ಯಮದ ವಾರ್ಷಿಕ ವಾಹಿವಾಟು 8000-10,000 ರೂ ಕೋಟಿ ಇದೆ. ಅಸ್ಸೋಂ ಅತಿ ಹೆಚ್ಚು ಪೂರೈಕೆ ಹೊಂದಿರುವ ರಾಜ್ಯವಾಗಿದೆ. ಈಶಾನ್ಯ ಪ್ರದೇಶದಲ್ಲಿ ಬುಡಕಟ್ಟು ಮತ್ತು ಬುಡಕಟ್ಟೇತರ ಜನರು ಹಂದಿ ಮಾಂಸವನ್ನು ಹೆಚ್ಚು ಬಳಸುತ್ತಾರೆ. (ಐಎಎನ್​ಎಸ್​)

ಇದನ್ನೂ ಓದಿ:ನಿಫಾ ಬಳಿಕ ಕೇರಳದಲ್ಲೀಗ ಹಂದಿ ಜ್ವರದ ಭೀತಿ; ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ

ABOUT THE AUTHOR

...view details