ಕರ್ನಾಟಕ

karnataka

ETV Bharat / sukhibhava

ಉತ್ತಮ ಸಂಬಂಧ ಹೊಂದಲು ಈ ಅಂಶಗಳು ಸಹಕಾರಿ

ಪ್ರಪಂಚವು ವಿಶಾಲ ಹಾಗೂ ವೈವಿಧ್ಯಮಯವಾಗಿದೆ. ಇಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ, ಗುಣಲಕ್ಷಣಗಳು ಮತ್ತು ಸಾಮರ್ಥ್ಯಗಳನ್ನು ಹೊಂದಿದ್ದಾರೆ. ಇನ್ನೊಬ್ಬರಿಗೆ ಸಮಾನ ವ್ಯಕ್ತಿ ಇಲ್ಲ. ಆದರೆ ಈ ವೈವಿಧ್ಯತೆಯೊಳಗೆ ನಾವೆಲ್ಲರೂ ಜೀವನದಲ್ಲಿ ಏಳಿಗೆ ಹೊಂದಲು ನಿರ್ದಿಷ್ಟ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು. ನಾವು ಎಲ್ಲಾರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ನಮ್ಮಲ್ಲಿ ಪರಸ್ಪರ ಪ್ರೀತಿ ಮತ್ತು ಗೌರವ ಇರಬೇಕಾಗುತ್ತದೆ.

Healthy Relationship
ಆರೋಗ್ಯಕರ ಸಂಬಂಧ

By

Published : Mar 21, 2021, 3:43 PM IST

ನಾರ್ತ್ ಕೆರೊಲಿನಾದ ನಾಯಕ ಮತ್ತು ಸಂಬಂಧ ತರಬೇತುದಾರ ಜೆನ್ನಿಫರ್ ಹೋವೆಲ್ ಅವರ ರೇಲಿ-ಡರ್ಹಾಮ್ ಪ್ರಕಾರ, ಆರೋಗ್ಯಕರ ಸಂಬಂಧವೆಂದರೆ ಇಬ್ಬರೂ ಪರಸ್ಪರ ಪ್ರೀತಿ ಮತ್ತು ಗೌರವದಿಂದ ಬದುಕುವುದಾಗಿದೆ. ಇದರ ಅರ್ಥವೆಂದರೆ ಇಬ್ಬರೂ ಪರಸ್ಪರ ಹೃದಯದ ಜೊತೆ ಮಾತನಾಡುವುದು, ಒಬ್ಬರ ಮಾತನ್ನು ಒಬ್ಬರು ಕೇಳುವುದು ಮತ್ತು ಅರ್ಥ ಮಾಡಿಕೊಳ್ಳುವುದು ಹಾಗೂ ಅದನ್ನು ಒಪ್ಪಿಕೊಳ್ಳುವುದಾಗಿದೆ. ಹೊಂದಾಣಿಕೆಗಾಗಿ ಯಾವಾಗಲೂ ಪ್ರಯತ್ನಿಸುವುದು ನಿಜವಾದ ಪ್ರೀತಿಯಲ್ಲ.

ಆರೋಗ್ಯಕರ ಸಂಬಂಧವನ್ನು ಹೇಗೆ ಹೊಂದುವುದು?

ಆಗಸ್ಟ್ 2019ರಲ್ಲಿ ಪ್ರಕಟವಾದ "ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ ಬುಲೆಟಿನ್" ಪ್ರಕಾರ, ದೀರ್ಘಕಾಲದವರೆಗೆ ಸಂಬಂಧದಲ್ಲಿ ಇದ್ದರೂ ನೀವು ಅಲ್ಲಿ ಸಂತೋಷ ಮತ್ತು ತೃಪ್ತಿ ಕಾಣದಿದ್ದಾಗ ಏಕಾಂಗಿಯಾಗಿರುವುದು ಉತ್ತಮ. ಅದೇ ನಿಟ್ಟಿನಲ್ಲಿ, ಹೂಸ್ಟನ್‌ನ ಅನ್ಯೋನ್ಯತೆ ಮತ್ತು ಲೈಂಗಿಕ ಮನೋರೋಗ ಚಿಕಿತ್ಸಕ ಮೇರಿ ಜೋ ರಾಪಿನಿ, ಆರೋಗ್ಯಕರ ಸಂಬಂಧಗಳ ಬಗ್ಗೆ ಹೇಳಿಕೆ ನೀಡುವಾಗ ವಿಷಕಾರಿ ಸಂಬಂಧಗಳು ನಮ್ಮ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ. ಈ ಸಂಬಂಧದಿಂದ ಜೀವನದಲ್ಲಿ ಸಮಸ್ಯೆಗಳು ಹೆಚ್ಚುವುದರ ಜೊತೆಗೆ ಒತ್ತಡ, ಚಡಪಡಿಕೆ, ನಿದ್ರಾಹೀನತೆ ಮುಂತಾದ ಅನಾರೋಗ್ಯಕರ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ವರದಿ ಹೇಳುತ್ತದೆ.

ರಾಪಿನಿ ಪ್ರಕಾರ, ಅನೇಕ ವ್ಯಕ್ತಿಗಳಿಗೆ ತಾವು ಅನಾರೋಗ್ಯಕರ ಸಂಬಂಧದಲ್ಲಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಂತೋಷ ಮತ್ತು ಆರೋಗ್ಯಕರ ಸಂಬಂಧಕ್ಕಾಗಿ ಜನರು ಬೇರೆ ವ್ಯಕ್ತಿಗಳ ನೈಜತೆಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಉತ್ತಮ ಸಂಬಂಧ ಹೊಂದಲು ಈ ಕೆಳಗಿನ ಅಂಶಗಳು ಸಹಕಾರಿಯಾಗಿವೆ.

ಮುಕ್ತವಾಗಿ ಮಾತನಾಡುವ ಸಾಮರ್ಥ್ಯ:

ಸಂಬಂಧದಲ್ಲಿರುವ ವ್ಯಕ್ತಿಗಳು ಪರಸ್ಪರ ಇಬ್ಬರೂ ಮುಕ್ತವಾಗಿ ಮಾತನಾಡಬೇಕು. ಯಾವುದೇ ಸಂಬಂಧವಿರಲಿ ಇದು ಬಹಳ ಮುಖ್ಯ ಎಂದು ಜೆನ್ನಿಫರ್ ಹೋವೆಲ್ ಹೇಳುತ್ತಾರೆ. ಸಂಬಂಧಗಳು ಹಾಳಾಗುತ್ತವೆ ಎಂಬ ಭಯದಿಂದ ಕೆಲವರು ಮುಕ್ತವಾಗಿ ಮಾತನಾಡುವುದಿಲ್ಲ. ಆದ್ರೆ ಇದರಿಂದಲೇ ಸಂಬಂಧಗಳು ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆರೋಗ್ಯಕರ ಸಂಬಂಧ ಹೊಂದಲು ಇಬ್ಬರೂ ವ್ಯಕ್ತಿಗಳು ಪರಸ್ಪರರ ಅಭ್ಯಾಸಗಳಿಗೆ ಸಂಬಂಧಿಸಿದ ತಮ್ಮ ಇಷ್ಟ ಮತ್ತು ಕಷ್ಟಗಳನ್ನು ಹಂಚಿಕೊಳ್ಳುವುದು ಉತ್ತಮ.

ಮ್ಯೂಚುವಲ್ ಟ್ರಸ್ಟ್:

ಮೇರಿ ಜೋ ರಾಪಿನಿ ಪ್ರಕಾರ, ನಂಬಿಕೆ ಎಂಬುದು ಎಲ್ಲಾ ಸಂಬಂಧಗಳಿಗೆ ಅಡಿಪಾಯವಾಗಿದೆ. ವ್ಯಕ್ತಿಗಳು ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಹೃದಯದಿಂದ ನಂಬಿದಾಗ ಸಂಬಂಧ ಗಟ್ಟಿಯಾಗಿರುತ್ತದೆ. ಸಂಬಂಧದ ಮೇಲಿನ ನಂಬಿಕೆಯಲ್ಲಿ ಸ್ವಲ್ಪಮಟ್ಟಿನ ಇಳಿಕೆ ಕಂಡುಬಂದರೆ ಮತ್ತು ಪಾಲುದಾರರು ನಿರಂತರವಾಗಿ ಪರಸ್ಪರರ ಫೋನ್​ ಪರಿಶೀಲಿಸುತ್ತಿದ್ದರೆ ಅಥವಾ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ಹಿಂಬಾಲಿಸುತ್ತಿದ್ದರೆ, ಇವೆಲ್ಲವೂ ಸಂಬಂಧದಲ್ಲಿ ಕಹಿಗೆ ಕಾರಣವಾಗಬಹುದು.

ಪ್ರೀತಿಯ ಭಾಷೆ ಮತ್ತು ಪ್ರಿತಿಸಿದವರ ಅಗತ್ಯಗಳನ್ನು ತಿಳಿದುಕೊಳ್ಳಿ:

ಒಬ್ಬ ವ್ಯಕ್ತಿಯು ನಿಮ್ಮನ್ನು ಪೂರ್ಣ ಹೃದಯದಿಂದ ಸ್ವೀಕರಿಸಿದಾಗ, ಅವರು ನಿಮ್ಮ ಸಣ್ಣ ಕಾರ್ಯಗಳು ಮತ್ತು ಅಭ್ಯಾಸಗಳನ್ನು ಸಹ ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ ಎಂದು ಪ್ರಸಿದ್ಧ ಪುಸ್ತಕ "ದಿ ಫೈವ್ ಲವ್ ಲ್ಯಾಂಗ್ವೇಜ್" ವಿವರಿಸುತ್ತದೆ ಎಂದು ಹೋವೆಲ್ ಹೇಳುತ್ತಾರೆ. ಪಾಲುದಾರರು ಪರಸ್ಪರರ ಸಣ್ಣ ಅಭ್ಯಾಸಗಳು ಮತ್ತು ಕಾರ್ಯಗಳನ್ನು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ ನಂತರ ಸಂಬಂಧಗಳು ಹೆಚ್ಚು ರೋಮ್ಯಾಂಟಿಕ್ ಆಗಿರುತ್ತವೆ. ಅಲ್ಲದೇ ಅದರ ಮೂಲಕ ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿ:

ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಮತ್ತು ಜಗಳಗಳು ಸಾಮಾನ್ಯವಾಗಿವೆ. ಪ್ರತಿ ಆರೋಗ್ಯಕರ ಸಂಬಂಧದಲ್ಲೂ ಕನಿಷ್ಠ 5 ಅಂತಹ ಸಮಸ್ಯೆಗಳಿವೆ ಎಂದು ರಾಪಿನಿ ವಿವರಿಸುತ್ತಾರೆ. ಇವೆರಡೂ ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನ ಮತ್ತು ಆಲೋಚನೆಯನ್ನು ಹೊಂದಿವೆ. ಸಮಸ್ಯೆ ಬಂದಾಗ ಇಬ್ಬರಲ್ಲಿ ಒಬ್ಬರೂ ಅವರ ಮನಸ್ಸನ್ನು ಅರ್ಥ ಮಾಡಿಕೊಂಡು ಸುಮ್ಮನಾದ್ರೆ, ಆಗ ಸಂಬಂಧಗಳು ಚೆನ್ನಾಗಿರುತ್ತವೆ.

ಗುರಿಯನ್ನು ಸಾಧಿಸಲು ಪರಸ್ಪರ ಪ್ರೋತ್ಸಾಹಿಸಿ:

ಹೋವೆಲ್ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಕನಸು ಮತ್ತು ಗುರಿಗಳು ವಿಭಿನ್ನವಾಗಿವೆ. ಆದ್ದರಿಂದ ಇಬ್ಬರೂ ಪಾಲುದಾರರು ಪರಸ್ಪರರ ಕನಸುಗಳನ್ನು ಮತ್ತು ಗುರಿಗಳನ್ನು ಅರ್ಥಮಾಡಿಕೊಂಡು, ಅದನ್ನು ಸಾಧಿಸಲು ಪ್ರೋತ್ಸಾಹಿಸಿದರೆ ಅವರ ಸಂಬಂಧವು ಹೆಚ್ಚು ಪ್ರೀತಿ ಮತ್ತು ಗೌರವದಿಂದ ತುಂಬಿರುತ್ತದೆ.

ಪರಸ್ಪರರ ವಿಭಿನ್ನ ಆಸಕ್ತಿಗಳನ್ನು ಗೌರವಿಸುವುದು:

ಕನಸುಗಳು ಮತ್ತು ಗುರಿಗಳಂತೆಯೇ, ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಆಸಕ್ತಿಗಳನ್ನು ಹೊಂದಿರುತ್ತಾನೆ. ಅಂತಹ ಸಂದರ್ಭದಲ್ಲಿ ಇಬ್ಬರೂ ತಮ್ಮ ಹಿತಾಸಕ್ತಿಗಳನ್ನು ಪರಸ್ಪರರ ಮೇಲೆ ಹೇರಲು ಪ್ರಯತ್ನಿಸಬಾರದು ಮತ್ತು ಅವರ ಹವ್ಯಾಸ ಮತ್ತು ಗೌಪ್ಯತೆಯನ್ನು ಗೌರವಿಸಬೇಕು. ಇದು ಇಬ್ಬರ ನಡುವಿನ ವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಆತ್ಮವಿಶ್ವಾಸ ಮತ್ತು ಆತ್ಮ ಪ್ರೀತಿಯ ಭಾವನೆಗಳು ಪ್ರತ್ಯೇಕವಾಗಿ ಬೆಳೆಯುತ್ತವೆ.

ನಿಮ್ಮ ಸಂಗಾತಿಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಸ್ವೀಕರಿಸಿ:

ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಹೊಂದಿದ್ದಾನೆ. ಹೋವೆಲ್ ಪ್ರಕಾರ, ನಿಮ್ಮ ಸಂಗಾತಿಯ ದೌರ್ಬಲ್ಯಗಳನ್ನು ಮತ್ತು ಅವರ ಸಾಮರ್ಥ್ಯವನ್ನು ನೀವು ಅರ್ಥಮಾಡಿಕೊಳ್ಳಬೇಕು. ಅದನ್ನು ಒಪ್ಪಿಕೊಂಡು ಸಂಬಂಧದಲ್ಲಿ ಮುಂದುವರೆದರೆ ಇಬ್ಬರ ಸಂಬಂಧ ಬಲವಾಗುತ್ತದೆ.

ಸಂತೋಷ ಮತ್ತು ಬೆಂಬಲಿತ ಭಾವನೆ ಹೊಂದುವುದು:

ಜುಲೈ 2015ರಲ್ಲಿ "ದಿ ಜರ್ನಲ್​​ ಆಫ್ ಅಫೆಕ್ಟಿವ್ ಡಿಸಾರ್ಡರ್ಸ್"ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅತೃಪ್ತಿ ಅಥವಾ ಸಂತೋಷದ ಕೊರತೆಯು ಕೆಲವು ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು. 50 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 5000 ವಯಸ್ಕರ ಮೇಲೆ ನಡೆಸಿದ ಈ ಸಂಶೋಧನೆಯಲ್ಲಿ, ಅವರ ಸಂಬಂಧದಲ್ಲಿ ಒತ್ತಡ, ಚಡಪಡಿಕೆ ಮತ್ತು ಅಸ್ವಸ್ಥತೆಯನ್ನು ಅನುಭವಿಸಿದ ಜನರು ದೈಹಿಕ ಸಮಸ್ಯೆಗಳನ್ನು ಹೊಂದುವ ಸಾಧ್ಯತೆಯಿದೆ ಎಂದು ಕಂಡುಕೊಳ್ಳಲಾಗಿದೆ.

ಆದ್ದರಿಂದ, ನಿಮ್ಮ ಸಂಗಾತಿಯೊಂದಿಗೆ ನೀವು ಅನಾರೋಗ್ಯಕರ ಮತ್ತು ವಿಷಕಾರಿ ಸಂಬಂಧವನ್ನು ಹೊಂದಿದ್ದೀರಿ ಎಂದು ನೀವು ಭಾವಿಸಿದರೆ, ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬರಿದಾಗಿಸುವ ಬದಲು ಏಕಾಂಗಿಯಾಗಿ ಮತ್ತು ಸಂತೋಷದಿಂದ ಇರುವುದು ಉತ್ತಮ. ಒಂದು ಆರೋಗ್ಯಯುತ ಬಾಂಧವ್ಯಕ್ಕೆ, ಆ ಬಾಂಧವ್ಯದಲ್ಲಿ ಸೇರಿರುವ ಪ್ರತಿಯೊಬ್ಬರೂ ಜವಾಬ್ದಾರರೇ ಆಗಿರುತ್ತಾರೆ. ಈ ವಿಚಾರದಲ್ಲಿ ಆತನು/ಆಕೆಯು ಬಾಂಧವ್ಯದ ಕುರಿತಾಗಿ ಅದೆಷ್ಟು ಪ್ರೌಢರಾಗಿದ್ದಾರೆ ಅನ್ನೋದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತೆ.

ABOUT THE AUTHOR

...view details