ಕರ್ನಾಟಕ

karnataka

ETV Bharat / sukhibhava

ಮೂರ್ಛೆ ರೋಗ ಔಷಧ ನಕಲಿ ಎಂದ ಬಿಜೆಪಿ ವಿರುದ್ಧ ಆಪ್ ವಾಗ್ದಾಳಿ - ಅಪಸ್ಮಾರದ ಮಾತ್ರೆ ಪೂರೈಕೆ

ದೆಹಲಿಯ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜಾಗಿರುವ ಸೋಡಿಯಂ ವಲಪ್ರಿಯೆಟ್​​​ ಔಷಧಗಳು ಗುಣಮಟ್ಟದಲ್ಲಿಲ್ಲ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೀಗ ಆಪ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

BJP of spreading blatant lies on epilepsy drug sample
BJP of spreading blatant lies on epilepsy drug sample

By ETV Bharat Karnataka Team

Published : Dec 28, 2023, 4:04 PM IST

Updated : Dec 28, 2023, 4:12 PM IST

ನವದೆಹಲಿ:ದೆಹಲಿ ಸರ್ಕಾರದಿಂದ ಪೂರೈಕೆಯಾಗಿರುವ ಎಪಿಲೆಪ್ಸಿ (ಮೂರ್ಛೆ) ರೋಗಕ್ಕೆ ನೀಡಿರುವ ಔಷಧ ಸೋಡಿಯಂ ವಲಪ್ರೊಯೆಟ್​​ ಮಾತ್ರೆ ನಕಲಿ ಎಂದಿರುವ ಬಿಜೆಪಿ ವಿರುದ್ಧ ಆಮ್​ ಆದ್ಮಿ ಪಕ್ಷ ಹರಿಹಾಯ್ದಿದೆ. ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ ಎಂದು ಪಕ್ಷ ವಾಗ್ದಾಳಿ ನಡೆಸಿದೆ.

ಬಿಜೆಪಿ ಔಷಧಗಳ ಮಾದರಿ ನಕಲಿ ಎಂದು ಕರೆಯುವ ಮೂಲಕ ಸುಳ್ಳು ಸುದ್ದು ಹರಡುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಹಂಚಿಕೊಂಡಿರುವ ಪರೀಕ್ಷಾ ವರದಿಯಲ್ಲಿಯೇ ಮಾತ್ರೆಗಳಿಗೆ ಬಳಕೆ ಮಾಡಿರುವ ಎಲ್ಲಾ ಪದಾರ್ಥಗಳು ಉತ್ತಮವಾಗಿವೆ. ಔಷಧಗಳ ವಿಸರ್ಜನೆ ಗುಣಮಟ್ಟದಲ್ಲಿಲ್ಲ ಎಂಬುದಷ್ಟೇ ಸತ್ಯಾಂಶ. ಇದಕ್ಕೂ ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಗುಣಮಟ್ಟದ ಔಷಧಗಳು ದೇಹದೊಳಗೆ 30 ಸೆಕೆಂಡ್​ನಲ್ಲಿ ವಿಸರ್ಜನೆಯಾಗುತ್ತವೆ ಅನ್ನೋದು. ಇದು ಸ್ಯಾಂಪಲ್​ ಆಗಿರುವುದರಿಂದ ದೇಹದಲ್ಲಿ ವಿಸರ್ಜನೆ ಆಗಲು 40 ಸೆಕೆಂಡ್​ ಬೇಕಾಗುತ್ತದೆ ಎಂದು ಪಕ್ಷ ಸ್ಪಷ್ಟಪಡಿಸಿದೆ.

ಆರೋಗ್ಯ ಸಚಿವ ಸೌರಭ್​ ಮುಖರ್ಜಿ 2023ರ ಮಾರ್ಚ್​ 21ರಂದು ಔಷಧ ಸೇರ್ಪಡೆಯಾದ ಎರಡು ವಾರಗಳಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಈ ವೇಳೆ ಅವರು ಎಲ್ಲಾ ಔಷಧ ಮತ್ತು ಬಳಕೆ ವಸ್ತುಗಳ ಆಡಿಟ್​​ ನಡೆಸುವಂತೆ ಸೂಚಿಸಿದ್ದರು. ಏಪ್ರಿಲ್​ 3, 2023ರಂದು ಮತ್ತೆ ಈ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದರು. ಜುಲೈ 2023ರಂದು ಆಡಿಟ್​ ನಿರ್ದೇಶನಗಳ ಕುರಿತು ಕ್ರಮ ವಹಿಸಲಾಯಿತು. ಆರೋಗ್ಯ ಕಾರ್ಯದರ್ಶಿ ಸೂಚನೆಗಳನ್ನು ಪಾಲಿಸಲಿಲ್ಲ. ಕೇಂದ್ರ ಸರ್ಕಾರ ಆರೋಗ್ಯ ಕಾರ್ಯದರ್ಶಿಯನ್ನೇಕೆ ಈ ವಿಚಾರದಲ್ಲಿ ರಕ್ಷಿಸುತ್ತಿದೆ ಎಂದು ಎಎಪಿ ಪ್ರಶ್ನಿಸಿದೆ.

ಈ ಔಷಧ ಕುರಿತು ಚಂಡೀಗಢದ ಪ್ರಾದೇಶಿಕ ಔಷಧ ಪರೀಕ್ಷ ಪ್ರಯೋಗಾಲಯ (ಆರ್​ಡಿಟಿಎಲ್​) ಡಿಸೆಂಬರ್​ 22,2023ರಂದು ವರದಿ ನೀಡಿದೆ. ಇದರ ಜೊತೆಗೆ ಡಿಸೆಂಬರ್​ 23ರಂದು ಎಲ್​ಜಿವಿಕೆ ಸಕ್ಸೆನಾ, ಔಷಧಗಳ ಗುಣಮಟ್ಟದ ಮತ್ತು ಪೂರೈಕೆ ಸಂಬಂಧ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ. ಬುಧವಾರ ದೆಹಲಿ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ವಿರೇಂದ್ರ ಸಚದೇವ್​​, ಈ ವಿಷಯ ಕುರಿತು ಎಎಪಿ ಕಚೇರಿಯಲ್ಲಿ ಬೃಹತ್​​ ಹೋರಾಟ ನಡೆಸಿದರು. ಇದೇ ವೇಳೆ ಅವರು ಈ ಔಷಧ ಗುಣಮಟ್ಟದಿಂದ ಕೂಡಿಲ್ಲ ಎಂದು ಕಳೆದ ಜುಲೈನಿಂದ ತಿಳಿದಿತ್ತು ಎಂದು ಆರೋಪಿಸಿದರು.(ಐಎಎನ್​ಎಸ್​)

ಇದನ್ನೂ ಓದಿ:ಮೂರ್ಛೆ ರೋಗ ಜಾಗೃತಿ ದಿನ: ಅಪಸ್ಮಾರ ಅಪಾಯಕಾರಿಯಲ್ಲ, ಮುನ್ನೆಚ್ಚರಿಕೆ ಇರಲಿ

Last Updated : Dec 28, 2023, 4:12 PM IST

ABOUT THE AUTHOR

...view details