ನವದೆಹಲಿ: ಭಾರತದಲ್ಲಿ ಮಹಿಳೆಯರ ಮುಟ್ಟಿನ ಕುರಿತಾಗಿ Gynoveda.com ದೊಡ್ಡ ಮಟ್ಟದಲ್ಲಿ ಆರೋಗ್ಯ ಅಧ್ಯಯನ ನಡೆಸಿದೆ. ಈ ಸಮೀಕ್ಷೆಯಲ್ಲಿ 18 ರಿಂದ 45 ವರ್ಷದ ವಯೋಮಾನದ ದೇಶಾದ್ಯಂತ 3 ಲಕ್ಷ ಮಹಿಳೆಯರು ಭಾಗಿಯಾಗಿದ್ದರು. ಅವರನ್ನು ಮೂರು ಗುಂಪುಗಳಾಗಿ ಹರಡುವಿಕೆ, ತೀವ್ರತೆ ಮತ್ತು ದೈಹಿಕ ಬದಲಾವಣೆ ಮೂರು ಭಾಗವಾಗಿ ಅಧ್ಯಯನ ನಡೆಸಲಾಗಿದೆ.
ಮೊದಲ ಗುಂಪಿನಲ್ಲಿ ಋತುಚಕ್ರ ಸಮಸ್ಯೆ ಹೊಂದಿರುವವರ ಗುಂಪಾಗಿದೆ. ಇದರಲ್ಲಿ ಶೇ 70ರಷ್ಟು ಮಹಿಳೆಯರು ಉತ್ತರಿಸಿದ್ದಾರೆ. ಎರಡನೇ ಗುಂಪಿನಲ್ಲಿ ಯೋನಿ ಸಮಸ್ಯೆ (ಶೆ 26ರಷ್ಟು) ಹೊಂದಿದ್ದು, ಇವರು ತಮ್ಮ ಯೋನಿಯ ಆರೋಗ್ಯ ಕಾಪಾಡುವುದು ಸವಾಲಾಗಿದೆ ಎಂದಿದ್ದಾರೆ. ಕಾರಣ ಇವರಲ್ಲಿ ಸೋಂಕು ಅಥವಾ ಅನಾನುಕೂಲತೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಮೂರನೇ ಗುಂಪಿನಲ್ಲಿ ಶೇ 4ರಷ್ಟು ಮಂದಿ ಯಾವುದೇ ಸಮಸ್ಯೆಯನ್ನು ಹೊಂದಿಲ್ಲ.
ಈ ಪ್ಯಾನ್ ಇಂಡಿಯಾ ಸಮೀಕ್ಷೆಯಲ್ಲಿ ವಯಸ್ಸು ಮತ್ತು ಪಿಸಿಒಎಸ್ಗೆ ಅನುಗುಣವಾಗಿ ಫಲಿತಾಂಶವನ್ನು ಹೊಂದಿದ್ದು, ಇದರಲ್ಲಿ ಅನಿಯಮಿತ ಋತುಚಕ್ರ, ಋತುಚಕ್ರದ ಸಮಯದಲ್ಲಿ ಭಾರಿ ನೋವು, ದೈಹಿಕ ಬದಲಾವಣೆ ಅನುಭವಿಸಿದ್ದಾಗಿ ತಿಳಿಸಿದ್ದಾರೆ.
ವಯಸ್ಸಿನ ಗುಂಪು ಮತ್ತು ಪಿಸಿಒಎಸ್ ಘಟನೆಗಳು..ಪಿಸಿಒಎಸ್ ಸಮಸ್ಯೆಯನ್ನು ಎಲ್ಲ ವಯೋಮಾನದ ಮಹಿಳೆಯರಲ್ಲಿ ಕಾಣಬಹುದಾಗಿದೆ. ಸಮೀಕ್ಷೆ ಪ್ರಕಾರ 25 ರಿಂದ 34 ವರ್ಷದ ಶೇ 60ರಷ್ಟು ಮಹಿಳೆಯರಲ್ಲಿ ಪಿಸಿಒಎಸ್ ಸಮಸ್ಯೆ ಹೆಚ್ಚಿದೆ. ಶೇ 51ರಷ್ಟು 24 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಪಿಸಿಒಎಸ್ ಸಮಸ್ಯೆ ಇದೆ. ಆದಾಗ್ಯೂ ಪಿಸಿಒಎಸ್ ಮಹಿಳೆಯರ ಸಂತಾನೋತ್ಪತ್ತಿ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಕಾರ ಪಿಸಿಒಎಸ್ ಸಮಸ್ಯೆಯಿಂದ ಶೇ 70-80ರಷ್ಟು ಮಹಿಳೆಯರಲ್ಲಿ ಸಂತಾನೋತ್ಪತ್ತಿ ತೊಂದರೆ ಇದೆ.