ಹೈದರಾಬಾದ್: ಮಕ್ಕಳ ಬಾಲ್ಯಾವಸ್ಥೆ ಪೋಷಕರಿಗೆ ಸದಾ ಚೆಂದವೇ ಸರಿ. ಅವರು ದೊಡ್ಡವರಾದಂತೆ ತಮಗಿಂತ ಮಕ್ಕಳು ದೊಡ್ಡ ಸಾಧನೆ ಮಾಡಬೇಕು ಎಂಬುದು ಪೋಷಕರ ಇಚ್ಚೆ. ಆದರೆ, ಈ ಮಗು ತಮ್ಮ ಬಾಲ್ಯದಲ್ಲೇ ಅಪ್ಪ- ಅಮ್ಮನಿಗೆ ಕೀರ್ತಿ ತರುವ ಕೆಲಸ ಮಾಡುವ ಮೂಲಕ ಜನರಿಗೂ ಪರಿಸರ ಕಾಳಜಿ ಪಾಠ ಮಾಡಿದೆ. ಈತನ ವಯಸ್ಸಿನ ಮಕ್ಕಳು ಅಭಿವ್ಯಕ್ತಪಡಿಸುವುದಕ್ಕೆ ಕಷ್ಟಪಡುತ್ತಿರುವ ವಯಸ್ಸಿನದಲ್ಲಿ ಈ ಪೋರ ಪರಿಸರ ಕಾಳಜಿಯ ಪಾಠದಿಂದ ಇಡೀ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದ್ದಾರೆ. 10 ವರ್ಷ ತುಂಬುವ ಮೊದಲೇ ಎಲ್ಲರ ಪ್ರಶಂಸೆ ಪಡೆದ ಈ ಮಗುವನ್ನು ಇತ್ತೀಚೆಗೆ ನಡೆದ ಬ್ರಿಟನ್ ರಾಜನ ಪಟ್ಟಾಭಿಷೇಕಕ್ಕೂ ಆಹ್ವಾನಿಸಲಾಗಿತ್ತು.
ಇಷ್ಟೆಲ್ಲ ಸಾಧನೆ ಮಾಡಿದ ಹುಡುಗ ಯಾರು, ಏನಿತನ ಸಾಧನೆ? ಎಂಬ ಕುತೂಹಲ ಮೂಡುವುದು ಸಹಜ. ಈತನ ಹೆಸರು ಆನೀಶ್ವರ್. ಬ್ರಿಟನ್ನಲ್ಲಿ ನೆಲೆಸಿರುವ ಆಂಧ್ರ ಪ್ರದೇಶದ ಮೂಲದ ಕುಂಚಲ ಅನಿಲ್ - ಸ್ನೇಹ ಅವರ 7 ವರ್ಷದ ಮಗ. 4ನೇ ವಯಸ್ಸಿನಲ್ಲೇ ಕಾಡುಪ್ರಾಣಿಗಳ ಸಂರಕ್ಷಣೆಗೆ ಈತ ಆಸಕ್ತಿ ತೋರಿದ್ದಾನೆ. ಮನೆಯಲ್ಲಿ ತನ್ನ ಸ್ನೇಹಿತರು ಸಂಬಂಧಿಗಳೊಡನೆ ಮಾತನಾಡುವಾಗ ಈತನ ಪ್ರಾಣಿ ಪ್ರೇಮ ವ್ಯಕ್ತವಾಗಿದೆ.
ಒಮ್ಮೆ ಹೀಗೆ ಅನೀಶ್ ಟಿವಿ ಕಾರ್ಯಕ್ರಮ ನೋಡುತ್ತಿದ್ದಾಗ, 100 ವರ್ಷದ ವ್ಯಕ್ತಿ ಕೋವಿಡ್ ಬಿಕ್ಕಟ್ಟಿನಿಂದ ಬ್ರಿಟನ್ನಲ್ಲಿ ವೈದ್ಯಕೀಯ ಸೇವೆಗೆ ದೇಣಿಗೆ ಸಂಗ್ರಹಿಸುತ್ತಿದ್ದನ್ನು ಗಮನಿಸಿ, ಪೋಷಕರಿಗೆ ತಿಳಿಸಿದ್ದಾನೆ. ಈ ವೇಳೆ ತಾನು ಕೂಡ ದೇಣಿಗೆ ಸಂಗ್ರಹಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ. ಭಾರತಕ್ಕೆ 3 ಸಾವಿರ ಪೌಂಡ್ ಹಣ ಮತ್ತು ಪಿಪಿ ಕಿಟ್ ಸಹಾಯ ಮಾಡಿದ್ದಾನೆ. ಈ ಕೆಲಸಕ್ಕೆ ಅನಿಶ್ ಲಿಟಲ್ ಪೆಡ್ಲರ್ ಚಾಲೆಂಜ್ ಎಂಬ ಸಂಘಟನೆ ನಿರ್ಮಿಸಿ, ಹಣ ಸಂಗ್ರಹ ಮಾಡಿದ್ದಾನೆ.
ಇದಕ್ಕಾಗಿ ಸೈಕಲ್ ಸವಾರಿ ಮಾಡುತ್ತಾ ಜನರಿಗೆ ಕೋವಿಡ್ ಬಗ್ಗೆ ಅರಿವು ಮೂಡಿಸುವ ಯತ್ನ ಮಾಡಿದ್ದಾರೆ. ಇದಕ್ಕಾಗಿ ತಮ್ಮ ಸ್ನೇಹಿತರ ಗುಂಪನ್ನು ಈ ಸವಾಲನ್ನು ಎದುರಿಸಲು ಸೇರಿಸಿಕೊಂಡಿದ್ದಾನೆ. ತಮ್ಮ ಈ ಲಿಟ್ಟಲ್ ಪೆಡ್ಲರ್ ಚಾಲೆಂಜ್ ಅನ್ನು 57 ಮಕ್ಕಳೊಂದಿಗೆ ಪೂರ್ಣಗೊಳಿಸಿ, ಅನೇಕರಿಗೆ ಸ್ಪೂರ್ತಿಯಾಗಿದ್ದಾನೆ.