ರಕ್ತದೊತ್ತಡ ತುಂಬಾ ಹೆಚ್ಚಾದಾಗ, ಈ ಸ್ಥಿತಿಯನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ಇದು ಪ್ರಮುಖವಾಗಿ ವಯಸ್ಸಾದವರಿಗೆ ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಆದರೆ, ಇತ್ತೀಚಿನ ಕೆಲವು ಅಧ್ಯಯನಗಳ ಪ್ರಕಾರ, ಒತ್ತಡದ ವಾತಾವರಣದಲ್ಲಿ ವಾಸಿಸುವ ಅನೇಕ ಯುವಕರು ಸಹ ಅಧಿಕ ರಕ್ತದೊತ್ತಡಕ್ಕೆ ಬಲಿಯಾಗುತ್ತಾರೆ. ಕೆಲವು ಔಷಧಗಳು, ಆರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಅಭ್ಯಾಸಗಳೊಂದಿಗೆ ಅದನ್ನು ಕಂಟ್ರೋಲ್ ಮಾಡಬಹುದು. ಆದರೆ, ಅದನ್ನು ಹೊರತುಪಡಿಸಿ, ಈ ಪರಿಸ್ಥಿತಿಯನ್ನು ಎದುರಿಸಲು ಯೋಗ ಕೂಡ ಬಹಳ ಸಹಾಯಕವಾಗಿದೆ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ದೇಹ ಮತ್ತು ಮನಸ್ಸನ್ನು ನಿರಾಳಗೊಳಿಸಿ, ಒತ್ತಡವನ್ನು ನಿವಾರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಇಂದು, ಈಟಿವಿ ಭಾರತ್ ಸುಖೀಭವ ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಯು ಅಭ್ಯಾಸ ಮಾಡಬಹುದಾದ ಕೆಲವು ಯೋಗ ಭಂಗಿಗಳನ್ನು (ಆಸನಗಳು) ನಿಮ್ಮೊಂದಿಗೆ ಹಂಚಿಕೊಳ್ಳಲಿದೆ.
ಶಿಶು ಆಸನ( ಚೈಲ್ಡ್ ಪೋಸ್):
- ನೆಲದ ಮೇಲೆ ನಿಮ್ಮ ಮೊಣಕಾಲುಗಳ ಮೇಲೆ ಕುಳಿತು ವಿಶ್ರಾಂತಿ ಪಡೆಯಿರಿ.
- ನಿಮ್ಮ ಕಾಲ್ಬೆರಳುಗಳನ್ನು ಮಡಚಿ ಮತ್ತು ಮೊಣಕಾಲುಗಳನ್ನು ಅಗಲವಾಗಿ ಇರಿಸಿ.
- ಈಗ ನಿಧಾನವಾಗಿ ಮುಂದಕ್ಕೆ ಬಾಗಿ ನಿಮ್ಮ ಹಣೆಯನ್ನು ನೆಲಕ್ಕೆ ತಾಗಿಸಿ. ನಿಮಗೆ ಹಾಗೆ ಮಾಡಲು ಕಷ್ಟವಾದರೆ, ನಿಮ್ಮ ಎರಡೂ ಮುಷ್ಟಿಗಳನ್ನು ಜೋಡಿಸಿ ಅವುಗಳನ್ನು ನಿಮ್ಮ ಹಣೆಯ ಕೆಳಗೆ ಇಡಬಹುದು.
- ಅಂಗೈಗಳನ್ನು ಚಾಪೆಯ ಮೇಲೆ ಇಡುತ್ತಾ ನೀವು ನಿಮ್ಮ ತೋಳುಗಳನ್ನು ಮುಂದೆ ಚಾಚಬಹುದು ಅಥವಾ ತೊಡೆಯ ಪಕ್ಕದಲ್ಲಿ ನಿಮ್ಮ ಅಂಗೈಗಳನ್ನು ಇಡಬಹುದು.
- ಪಶ್ಚಿಮೋತ್ತಾಸನ:
- ಅಂಗಾತ ಮಲಗಿ.
- ಆ ಬಳಿಕ ತಲೆ ಮತ್ತು ಎದೆಯನ್ನು ಮೇಲಕ್ಕೆತ್ತಿ ನೇರವಾಗಿ ಕುಳಿತುಕೊಳ್ಳಿ.
- ಉಸಿರು ಹೊರ ಬಿಟ್ಟು ತಲೆ ಮತ್ತು ಎದೆಯನ್ನು ಮುಂದಕ್ಕೆ ಬಾಗಿಸಿ ಚಿತ್ರದಲ್ಲಿ ಕಾಣಿಸಿದಂತೆ ಎರಡು ಕೈ ತೋರುಬೆರಳುಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿಯಿರಿ
- ಹಣೆಯನ್ನು ಮೊಣಕಾಲುಗಳಿಗೆ ತಾಗಿಸಿ
- ಮೊಣಕಾಲು ಬಾಗಿಸಿದಂತೆ ಇರಬೇಕು.
- ನಂತರ ತಲೆಯನ್ನು ಮೇಲಕ್ಕೆತ್ತಿ ಉಸಿರನ್ನು ಎಳೆದುಕೊಳ್ಳಿ.
- 20 - 60 ಸೆಕೆಂಡ್ವರೆಗೆ ಈ ಆಸನದ ನಿಲುವು ಮುಂದುವರಿಸಬಹುದು.