ಕರ್ನಾಟಕ

karnataka

ETV Bharat / sukhibhava

ಕೇರಳದಲ್ಲಿ ಒಂದೇ ದಿನದಲ್ಲಿ ಪತ್ತೆಯಾದವು 300 ಸಕ್ರಿಯ ಕೋವಿಡ್​ ಪ್ರಕರಣಗಳು: 3 ಸಾವು.. ಮಂಗಳೂರಲ್ಲಿ ಒಬ್ಬರಿಗೆ ಪಾಸಿಟಿವ್​ - ಕೋವಿಡ್​ ರೂಪಾಂತರ ತಳಿ ಜೆಎನ್​1

ಜೆಎನ್​.1 ಸೋಂಕು ವೇಗವಾಗಿ ಹರಡುತ್ತದೆ. ಆದರೆ, ಯಾವುದೇ ಗಂಭೀರ ಆರೋಗ್ಯ ಮತ್ತು ಸಾವಿನ ಅಪಾಯ ಹೊಂದಿಲ್ಲ. ಹೀಗಾಗಿ ಯಾವುದೇ ಭಯ ಬೇಡ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಧೈರ್ಯವನ್ನೂ ತುಂಬಿದೆ.

300-new-covid-cases-reported-in-kerala
300-new-covid-cases-reported-in-kerala

By ETV Bharat Karnataka Team

Published : Dec 21, 2023, 10:09 AM IST

Updated : Dec 21, 2023, 10:40 AM IST

ನವದೆಹಲಿ/ ಮಂಗಳೂರು: ದೇಶದಲ್ಲಿ ಚಳಿ ಹೆಚ್ಚಿದಂತೆ ಕೋವಿಡ್​​ ಪ್ರಕರಣಗಳ ಏರಿಕೆ ಕಂಡಿದೆ. ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೋವಿಡ್​ ರೂಪಾಂತರ ತಳಿ ಜೆಎನ್​.1 ಪತ್ತೆಯಾದ ಕೇರಳದಲ್ಲಿ ಡಿಸೆಂಬರ್​ 20ರಂದು ಒಟ್ಟು 300 ಹೊಸ ಕೋವಿಡ್​​ ಪ್ರಕರಣಗಳು ದಾಖಲಾಗಿದ್ದು, 3 ಸಾವು ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿ ಬಿಡುಗಡೆ ಮಾಡಿದೆ. ಇದೀಗ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2669 ಆಗಿದೆ.

ಕಳೆದ ಮೂರು ವರ್ಷಗಳ ಹಿಂದೆ ಕೋವಿಡ್​ ಪತ್ತೆಯಾದಗಿನಿಂದ ಕೇರಳದಲ್ಲಿ ಕೋವಿಡ್​ನಿಂದ ಸಾವನ್ನಪ್ಪಿರುವವರ ಸಂಖ್ಯೆ 72,056 ಆಗಿದೆ. ಇನ್ನು ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ ಕೋವಿಡ್​ನಿಂದ ಚೇತರಿಕೆ ಕಂಡು ಡಿಸ್ಚಾರ್ಜ್​ ಆದವರ ಸಂಖ್ಯೆ 224 ಆಗಿದೆ. ರಾಜ್ಯದಲ್ಲಿ ಒಟ್ಟು 68,37,203 ಪ್ರಕರಣಗಳು ಇಲ್ಲಿಯವರೆಗೆ ದಾಖಲಾಗಿದೆ.

ಕೇರಳದಲ್ಲಿ ಕೋವಿಡ್​ ಉಲ್ಬಣ ಆಗುತ್ತಿರುವ ಕುರಿತು ಮಾತನಾಡಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್​​, ಸೋಂಕಿನ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಇದರ ನಿರ್ವಹಣೆಗೆ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ. ಕೋವಿಡ್​ ರೋಗಿಗಳಿಗಾಗಿ ಐಸೋಲೇಷನ್​ ವಾರ್ಡ್​​, ರೂಂ, ಆಕ್ಸಿಜನ್​ ಬೆಡ್​, ಐಸಿಯು ಬೆಡ್​​ ಮತ್ತು ವೆಂಟಿಲೇಟರ್​ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ದೇಶದಲ್ಲಿ ದಾಖಲಾಗುತ್ತಿರುವ ಬಹುತೇಕ ಕೋವಿಡ್​ ಪ್ರಕರಣದಲ್ಲಿ ಅತಿ ಹೆಚ್ಚು ಪ್ರಕರಣಗಳು ಕೇರಳ, ಕರ್ನಾಟಕ ಮತ್ತು ಒಡಿಸ್ಸಾದಲ್ಲಿ ದಾಖಲಾಗುತ್ತಿದೆ.

ಮಂಗಳೂರಿನಲ್ಲಿ ವೃದ್ಧನಿಗೆ ಕೋವಿಡ್​ ಪಾಸಿಟಿವ್​:ಮಂಗಳೂರಿನಲ್ಲಿ 82 ವರ್ಷದ ವೃದ್ಧನಲ್ಲಿ ಕೋವಿಡ್​ ಪಾಸಿಟಿವ್​ ಕಂಡು ಬಂದಿದೆ. ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ವೈದ್ಯಾಧಿಕಾರಿ ಡಾ. ಹೆಚ್ ಆರ್​ ತಿಮ್ಮಯ್ಯ ಇದನ್ನು ದೃಢಪಡಿಸಿದ್ದಾರೆ. ವೃದ್ಧ ಮೂಲತಃ ಉಡುಪಿಯವರಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.​

ಮುನ್ನೆಚ್ಚರಿಕೆ ಅಗತ್ಯ: ಕೋವಿಡ್​ ಪ್ರಕರಣ ಏರಿಕೆ ಹಿನ್ನೆಲೆ ಬುಧವಾರ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತದ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್​ ಮಾಂಡೋವಿಯಾ, ಸೋಂಕಿನ ವಿರುದ್ಧ ಎಲ್ಲಾ ಸರ್ಕಾರಗಳು ಒಟ್ಟಾಗ ಕೆಲಸ ಮಾಡಬೇಕಿದೆ. ನಾವು ಜಾಗ್ರತರಾಗಿರಬೇಕಿದೆ. ಹೊರತು ಆತಂಕ ಬೇಡ. ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸಿದ್ಧತೆಗಳು ಇದೆಯಾ ಎಂಬ ಬಗ್ಗೆ ಮಾಕ್​ಡ್ರಿಲ್​ ನಡೆಸಬೇಕು. ಸೋಂಕಿನ ವಿರುದ್ಧ ಕಣ್ಗಾವಲನ್ನು ಹೆಚ್ಚಿಸಿ, ಜನರಲ್ಲಿ ಸೋಂಕಿನ ಕುರಿತು ಪರಿಣಾಮಕಾರಿ ಅರಿವು ಮೀಡಿಸಿದೆ. ಪ್ರತಿ ಮೂರು ತಿಂಗಳಿಗೆ ಒಮ್ಮೆ ಆಸ್ಪತ್ರೆಗಳಲ್ಲಿ ಮಾಕ್​ ಡ್ರಿಲ್​ ನಡೆಸಿ, ಸೋಂಕಿನ ವಿರುದ್ಧ ಹೋರಾಡಲು ಕೇಂದ್ರ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತದೆ. ಆರೋಗ್ಯ ಎಂಬುದು ರಾಜಕೀಯ ಪ್ರದೇಶ ಅಲ್ಲ ಎಂದರು.

ಜೆಎನ್​.1 ಸೋಂಕು ವೇಗವಾಗಿ ಹರಡುತ್ತದೆ. ಆದರೆ, ಯಾವುದೇ ಗಂಭೀರ ಆರೋಗ್ಯ ಮತ್ತು ಸಾವಿನ ಅಪಾಯವನ್ನು ಹೊಂದಿಲ್ಲ. ಈ ಹಿನ್ನಲೆ ಜನರು ಹಬ್ಬದ ಋತುಮಾನ ಹಿನ್ನಲೆ ಮುನ್ನೆಚ್ಚರಿಕೆವಹಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಇದನ್ನೂ ಓದಿ: ಕೋವಿಡ್‌ ರೂಪಾಂತರಿ ಸೌಮ್ಯ ಲಕ್ಷಣ ಹೊಂದಿದೆ, ಗಾಬರಿ ಅಗತ್ಯವಿಲ್ಲ: ನೀತಿ ಆಯೋಗ ಸದಸ್ಯ ವಿ.ಕೆ.ಪೌಲ್​

Last Updated : Dec 21, 2023, 10:40 AM IST

ABOUT THE AUTHOR

...view details